ಬೈಕ್ ಸವಾರನಿಗೆ 6500 ರೂ. ದಂಡ ವಿಧಿಸಿದ ಕೋರ್ಟ್!

ಶಿವಮೊಗ್ಗ, ಮಾ. 2: ನಿಯಮಕ್ಕೆ ವಿರುದ್ದವಾಗಿ ಬೈಕ್ ಬಣ್ಣ ಬದಲಾಯಿಸಿ, ಕರ್ಕಶ ಶಬ್ದ ಉಂಟು ಮಾಡುವ ಸೈಲೆನ್ಸರ್ ಅಳವಡಿಸಿಕೊಂಡು ಹಾಗೂ ಚಾಲನೆಯ ವೇಳೆ ಹೆಲ್ಮೆಟ್ ಧರಿಸದ ಬೈಕ್ ಸವಾರನಿಗೆ ಭದ್ರಾವತಿಯ ಜೆಎಂಎಫ್’ಸಿ ನ್ಯಾಯಾಲಯವು 6500 ರೂ. ದಂಡ ವಿಧಿಸಿದೆ.
ಭದ್ರಾವತಿ ಪಟ್ಟಣದ ಹೊಸಮನೆ ಬಡಾವಣೆಯ ನಿವಾಸಿ 25 ವರ್ಷ ವಯೋಮಾನದ ಯುವಕನೇ ನ್ಯಾಯಾಲಯದಿಂದ ದಂಡ ಹಾಕಿಸಿಕೊಂಡ ಬೈಕ್ ಸವಾರ. ನ್ಯಾಯಾಧೀಶರಾದ ಯತೀಶ್ ಅವರು ಫೆ. 28 ರಂದು ದಂಡ ವಿಧಿಸಿ ಆದೇಶಿಸಿದ್ದಾರೆ.
ಕೇಸ್ ದಾಖಲು: 23-2-2023 ರಂದು ಭದ್ರಾವತಿ ಪಟ್ಟಣದ ಜಯಶ್ರೀ ಸರ್ಕಲ್ ಬಳಿ, ನ್ಯೂ ಟೌನ್ ಠಾಣೆ ಸಬ್ ಇನ್ಸ್’ಪೆಕ್ಟರ್ ರಂಗನಾಥ್ ಅವರು ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ಸದರಿ ಯುವಕನನ್ನು ತಡೆದು ಪರಿಶೀಲಿಸಿದ್ದರು.
ಈ ವೇಳೆ ಆರ್.ಸಿ. ಪುಸ್ತಕದಲ್ಲಿ ನಮೂದಿಸಿದ್ದ ಬಣ್ಣಕ್ಕೆ ಬದಲಾಗಿ, ಬೈಕ್ ಗೆ ಕಪ್ಪು ಬಣ್ಣ ಹಚ್ಚಿರುವುದು ಹಾಗೂ ಹೆಚ್ಚು ಕರ್ಕಶ ಹೊರಹೊಮ್ಮುವ ಸೈಲೈನ್ಸರ್ ನ್ನು ಬೈಕ್ ಗೆ ಅಳವಡಿಸಿದ್ದು ಬೆಳಕಿಗೆ ಬಂದಿತ್ತು.
ಈ ಸಂಬಂಧ ಸದರಿ ಯುವಕನ ವಿರುದ್ದ ಇಂಡಿಯನ್ ಮೋಟಾರ್ ಕಾಯ್ದೆ (ಐ.ಎಂ.ವಿ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *