KS Eshwarappa demands arrest of Congress MLA ivon dsouza ಕಾಂಗ್ರೆಸ್ ಶಾಸಕ ಐವನ್ ಡಿಸೋಜ ಬಂಧನಕ್ಕೆ ಕೆ.ಎಸ್.ಈಶ್ವರಪ್ಪ ಆಗ್ರಹ

shimoga | ಕಾಂಗ್ರೆಸ್ ಶಾಸಕನ ಬಂಧನಕ್ಕೆ ಕೆ.ಎಸ್.ಈಶ್ವರಪ್ಪ ಆಗ್ರಹ

ಶಿವಮೊಗ್ಗ (shivamogga), ಆ. 21: ರಾಜ್ಯಪಾಲರ (governor) ವಿರುದ್ದ ಪ್ರಚೋದನಕಾರಿ ಹೇಳಿಕೆ ನೀಡಿರುವ ವಿಧಾನ ಪರಿಷತ್ ಕಾಂಗ್ರೆಸ್ ಶಾಸಕ ಐವನ್ ಡಿಸೋಜ (mlc ivon dsouza) ಅವರನ್ನು ಬಂಧಿಸಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (k s eshwarappa) ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಶಿವಮೊಗ್ಗ (shimoga) ನಗರದಲ್ಲಿ ಆ. 21 ರ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಬಾಂಗ್ಲಾದೇಶದಲ್ಲಿ (bangladesh) ಅಲ್ಪಸಂಖ್ಯಾತರಾದ ಹಿಂದೂ, ಬೌದ್ಧ, ಕ್ರೈಸ್ತ, ಸಿಖ್ಖರ ಮೇಲೆ ಹಿಂಸಾಚಾರ ನಡೆಯಿತು. ಆದರೆ ಅದೇ ರೀತಿಯಲ್ಲಿ ಹಿಂಸಾಚಾರ ಮಾಡುವುದಾಗಿ ಕಾಂಗ್ರೆಸ್ ನಾಯಕ ಹೇಳುತ್ತಿರುವುದು ಖಂಡನಾರ್ಹವಾದುದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹೇಳಿಕೆಯ ಬಗ್ಗೆ ಕಾಂಗ್ರೆಸ್ ನ (congress) ಯಾವೊಬ್ಬ ನಾಯಕರು ಚಕಾರ ಎತ್ತಿಲ್ಲ. ಖಂಡಿಸಿಲ್ಲ. ಅವರನ್ನು ಪಕ್ಷದಿಂದ ಕಿತ್ತು ಹಾಕುವ ಕಾರ್ಯ ಮಾಡಿಲ್ಲ. ಕಾಂಗ್ರೆಸ್ ನವರಿಗೆ ಮಾನ – ಮರ್ಯಾದೆಯಿಲ್ಲ. ಹೇಳಿಕೆ ಕೊಟ್ಟ ತಕ್ಷಣವೇ ಪಕ್ಷದಿಂದ ವಜಾಗೊಳಿಸಬೇಕಾಗಿತ್ತು ಎಂದು ತಿಳಿಸಿದ್ದಾರೆ.

ಆದರೆ ಆಯಾ ಕಾಲದಲ್ಲಿ ನಡೆಯುವ ಗಲಾಟೆ, ದೊಂಬಿಗಳಿಂದ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ನಡೆಸಿಕೊಂಡು ಬರುತ್ತಿದೆ ಎಂದು ಆರೋಪಿಸಿದರು.

ಐವನ್ ಡಿಸೋಜ ಅವರನ್ನು ರಾಷ್ಟ್ರದ್ರೋಹಿ ಎಂದು ನಿರ್ಧರಿಸಿ ಅರೆಸ್ಟ್ (arrest) ಮಾಡಬೇಕು. ಕ್ರಿಮಿನಲ್ ಕೇಸ್ (criminal case) ದಾಖಲಿಸಿ ಜೈಲಿಗೆ ಕಳುಹಿಸಬೇಕು. ವಿಧಾನ ಪರಿಷತ್ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ನವರು ಈ ಹೇಳಿಕೆ ಖಂಡಿಸಬೇಕು. ದೇಶದಲ್ಲಿ ಸಹಿಷ್ಣುತೆ ಮುಖ್ಯವಾಗಿದೆ. ಆದರೆ ಕೆಲವರು ಪ್ರಚೋದನಕಾರಿ ಹೇಳಿಕೆ ನೀಡಿ ಎತ್ತಿಕಟ್ಟುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಇದೇ ವೇಳೆ ಕೆ.ಎಸ್.ಈಶ್ವರಪ್ಪ ದೂರಿದ್ದಾರೆ.

koppal | 'ಅಗತ್ಯಬಿದ್ದರೆ ಮುಲಾಜಿಲ್ಲದೆ HDK ಅರೆಸ್ಟ್' : CM ಸಿದ್ದು ಗುಟುರು! koppal | 'If necessary arrest HDK without hesitation': CM is angry! Previous post koppal | ‘ಅಗತ್ಯಬಿದ್ದರೆ ಮುಲಾಜಿಲ್ಲದೆ HDK ಅರೆಸ್ಟ್’ : CM ಸಿದ್ದು ಗುಟುರು!
Shimoga - How did Ayanur Bakery catch fire? How much is the loss? ಶಿವಮೊಗ್ಗ – ಆಯನೂರು ಬೇಕರಿಗೆ ಬೆಂಕಿ ಹೊತ್ತಿದ್ದು ಹೇಗೆ? ನಷ್ಟವಾಗಿದ್ದು ಎಷ್ಟು? Next post shimoga | ಶಿವಮೊಗ್ಗ – ಆಯನೂರು ಬೇಕರಿಗೆ ಬೆಂಕಿ ಹೊತ್ತಿದ್ದು ಹೇಗೆ? ನಷ್ಟವಾಗಿದ್ದು ಎಷ್ಟು?