shimoga | ಮೂವರಿಗೆ ವಿಷಯುಕ್ತ ಸ್ವೀಟ್ ಬಾಕ್ಸ್ ರವಾನೆ ಪ್ರಕರಣ : ಶಾಸಕ ಡಾ. ಧನಂಜಯ ಸರ್ಜಿ ಮಹತ್ವದ ಹೇಳಿಕೆ!

shimoga | Case of sending poisoned sweet box to three: MLA Dr Dhananjaya Sarji's important statement! shimoga | ಮೂವರಿಗೆ ವಿಷಯುಕ್ತ ಸ್ವೀಟ್ ಬಾಕ್ಸ್ ರವಾನೆ ಪ್ರಕರಣ : ಶಾಸಕ ಡಾ ಧನಂಜಯ ಸರ್ಜಿ ಮಹತ್ವದ ಹೇಳಿಕೆ!

ಶಿವಮೊಗ್ಗ (shivamogga), ಜ. 3: ಹೊಸ ವರ್ಷದ ದಿನದಂದು ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅವರ ಹೆಸರಿನಲ್ಲಿ, ದುಷ್ಕರ್ಮಿಗಳು ಶಿವಮೊಗ್ಗದ ಮೂವರು ಪ್ರಮುಖರಿಗೆ ಕೋರಿಯರ್ ಮೂಲಕ ವಿಷಯುಕ್ತ ಸ್ವೀಟ್ ಬಾಕ್ಸ್ ರವಾನಿಸಿದ್ದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ!

ಈ ಕುರಿತಂತೆ ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಡಾ ಧನಂಜಯ ಸರ್ಜಿ ಅವರು ಮಾತನಾಡಿದರು. ‘ಎನ್ಇಎಸ್ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್, ವೈದ್ಯರಾದ ಡಾ. ಅರವಿಂದ್ ಹಾಗೂ ಡಾ. ಪವಿತ್ರ ಅವರಿಗೆ ತಮ್ಮ ಹೆಸರಿನಲ್ಲಿ ಸ್ವೀಟ್ ಬಾಕ್ಸ್ ರವಾನೆಯಾಗಿರುವುದು ತಿಳಿದುಬಂದಿದೆ’ ಎಂದು ತಿಳಿಸಿದ್ದಾರೆ.

ನಾಗರಾಜ್ ಅವರು ಸ್ವೀಟ್ ತಿಂದ ವೇಳೆ ಕಹಿಯಾಗಿರುವುದು ಕಂಡುಬಂದಿದೆ. ಈ ಕುರಿತಂತೆ ಅವರು ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಅವರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಡಿ ಎಸ್ ಅರುಣ್ ತಮ್ಮ ಗಮನಕ್ಕೆ ತಂದ ನಂತರವಷ್ಟೆ, ತಮಗೆ ಮಾಹಿತಿ ಗೊತ್ತಾಗಿತ್ತು, ತದನಂತರ ಇತರೆ ಇಬ್ಬರು ವೈದ್ಯರಿಗೆ ಇದೇ ಮಾದರಿಯ ಸ್ವೀಟ್ ಬಾಕ್ಸ್ ರವಾನೆಯಾಗಿರುವುದು ತಿಳಿದುಬಂದಿತ್ತು’ ಎಂದು ಮಾಹಿತಿ ನೀಡಿದ್ದಾರೆ.

ಸದರಿ ವಿಷಯುಕ್ತ ಸ್ವೀಟ್ ಮಾದರಿಯನ್ನು ಹೆಚ್ಚಿನ ತಪಾಸಣೆಗಾಗಿ, ಪ್ರಯೋಗಾಲಯದ ಪರೀಕ್ಷೆಗೆ ರವಾನಿಸಲಾಗಿದೆ. ಸ್ವೀಟ್ ಗೆ ಏನು ಮಿಶ್ರಣ ಮಾಡಲಾಗಿದೆ ಎಂಬುವುದು ಇನ್ನಷ್ಟೆ ತಿಳಿದುಬರಬೇಕಾಗಿದೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಜೊತೆಗೆ ಜಿಲ್ಲಾ ರಕ್ಷಣಾಧಿಕಾರಿಗಳ ಜೊತೆಯೂ ಮಾತನಾಡಿದ್ದೆನೆ ಎಂದು ಹೇಳಿದ್ದಾರೆ.

ಸದರಿ ಸ್ವೀಟ್ ಬಾಕ್ಸ್ ನಲ್ಲಿ ತಮ್ಮ ಹೆಸರು – ಭಾವಚಿತ್ರ ಮುದ್ರಿಸಿರುವ ನಕಲಿ ಪತ್ರವಿರಿಸಿರುವುದು ಕಂಡುಬಂದಿದೆ. ಯಾರೋ ಉದ್ದೇಶಪೂರ್ವಕವಾಗಿಯೇ ಈ ದುಷ್ಕೃತ್ಯ ಎಸಗಿದ್ದಾರೆ. ಆರೋಪಿಗಳು ಪತ್ತೆಯಾಗಬೇಕು. ಜೊತೆಗೆ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತ್ಯಂತ ಪ್ರಾಮಾಣಿಕವಾಗಿ ತಾವು ಸಾರ್ವಜನಿಕ ಸೇವೆ ಮಾಡಿಕೊಂಡು ಬರುತ್ತಿದ್ದೆನೆ. ತಮ್ಮಂತವರಿಗೆ ಈ ರೀತಿಯಾಗಿ ತೊಂದರೆ ಕೊಡುವ ಕುಕೃತ್ಯಗಳನ್ನು ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಎಸ್ಪಿ ಅವರನ್ನು ಖುದ್ದಾಗಿ ಭೇಟಿಯಾಗಿ ಚರ್ಚಿಸಿ, ಪ್ರಕರಣದ ಆರೋಪಿ ಪತ್ತೆಗೆ ಮನವಿ ಮಾಡುತ್ತೆನೆ ಎಂದು ಇದೇ ವೇಳೆ ಡಾ. ಧನಂಜಯ ಸರ್ಜಿ ಅವರು ತಿಳಿಸಿದ್ದಾರೆ.  

Shivamogga (shivamogga), janauary 3: An alarming incident has come to light that on New Year’s Day, in the name of BJP Legislative Council Member Dr Dhananjaya Sarji, miscreants sent a box of poisoned sweets through a courier to three important people in Shimoga!

Dr Dhananjaya Sarji spoke to reporters who contacted him about this on Friday. It is known that the sweet box has been sent to Dr. Arvind and Dr. Pavitra and the secretary of NES organization Nagaraj.

A sample of the said poisoned sweet has been sent for further inspection, laboratory testing. What is mixed into the sweet remains to be seen. A complaint has been registered in Kote police station in this regard. He also said that he had spoken to the sp.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →