
bengaluru | ಸಿಎಂಗೆ ಮಂಡಿ ನೋವು : ಆಸ್ಪತ್ರೆಯಲ್ಲಿ ತಪಾಸಣೆ – ಅಧಿಕೃತ ಕಾರ್ಯಕ್ರಮಗಳು ರದ್ದು!
ಬೆಂಗಳೂರು (bengaluru), ಫೆ. 2: ಎಡಗಾಲಿನ ಮಂಡಿಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾದರು ಎಂದು ಸಿಎಂ ಕಚೇರಿ ಪ್ರಕಟಣೆ ತಿಳಿಸಿದೆ.
ಈ ಕುರಿತಂತೆ ಫೆ. 2 ರಂದು ಸಿಎಂ ಕಚೇರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಸಿಎಂ ತಪಾಸಣೆ ನಡೆಸಿದ ವೈದ್ಯರು, ಈ ಹಿಂದೆ ಲೆಗಮೆಂಟ್ ಶಸ್ತ್ರ ಚಿಕಿತ್ಸೆ ನಡೆದ ಜಾಗದ ಮೇಲೆ ಒತ್ತಡ ಬಿದ್ದಿರುವುದರಿಂದ ನೋವು ಕಾಣಿಸಿಕೊಂಡಿದೆ. ಉಳಿದಂತೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.
ಎರಡು ದಿನ ಪ್ರಯಾಣ ಮಾಡದೆ ಮನೆಯಲ್ಲೇ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಇಂದಿನ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
Bengaluru, February 2: Chief Minister Siddaramaiah underwent a check-up at Manipal Hospital due to pain in his left knee, the CM’s office said in a release.
In this regard, the CM’s office issued a press statement on February 2. The doctor who examined the CM said that pressure had been placed on the area where the ligament surgery had been done earlier, and the pain appeared. He said that there is no other problem.
Doctors advised to rest at home without traveling for two days. In this context, it has been informed that all the programs of the Chief Minister today have been cancelled.