
shimoga | ಪ್ಯಾರಚೂಟ್ ತೆರೆಯದೆ 1500 ಅಡಿ ಎತ್ತರದಿಂದ ಬಿದ್ದು ಶಿವಮೊಗ್ಗ ಮೂಲದ ವಾಯುಪಡೆ ಅಧಿಕಾರಿ ಸಾವು!
ಆಗ್ರಾ / ಶಿವಮೊಗ್ಗ, ಫೆ. 8: ನವದೆಹಲಿ ಸಮೀಪದ ಆಗ್ರಾಹದಲ್ಲಿ ಫೆ. 7 ರಂದು ನಡೆದ ಪ್ಯಾರಚೂಟ್ ತರಬೇತಿ ವೇಳೆ, ಕರ್ನಾಟಕ ರಾಜ್ಯ ಶಿವಮೊಗ್ಗ ಜಿಲ್ಲೆಯ ನಿವಾಸಿಯಾದ ವಾಯಪಡೆಯ ಅಧಿಕಾರಿಯೋರ್ವರು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ.
ಆಗ್ರಾ ಏರ್’ಪೋರ್ಸ್ ಬೇಸ್ ನಲ್ಲಿ ವಾರಂಟ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್ (36) ಮೃತಪಟ್ಟವರೆಂದು ಗುರುತಿಸಲಾಗಿದೆ. ಇವರು ಮೂಲತಃ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಪಟಗುಪ್ಪ ಸಮೀಪದ ಸಂಕೂರು ಗ್ರಾಮದ ನಿವಾಸಿ ನಿವಾಸಿಯಾಗಿದ್ದಾರೆ.
ಫೆ. 7 ರಂದು ಬೆಳಿಗ್ಗೆ 8. 30 ರ ಸುಮಾರಿಗೆ ತರಬೇತಿಯ ಭಾಗವಾಗಿ ಮಂಜುನಾಥ್ ಸೇರಿದಂತೆ 12 ಮಂದಿ ವಾಯುಪಡೆ ತರಬೇತುದಾರರು, ವಾಯುಪಡೆಯ ವಿಮಾನದಲ್ಲಿ ಪ್ಯಾರಚೂಟ್ ಕಟ್ಟಿಕೊಂಡು ಸುಮಾರು 1500 ಅಡಿ ಮೇಲ್ಭಾಗದಿಂದ ಕೆಳಕ್ಕೆ ಹಾರಿದ್ದರು.
ಇದರಲ್ಲಿ 11 ಮಂದಿ ಸುರಕ್ಷಿತವಾಗಿ ಕೆಳಕ್ಕೆ ಇಳಿದಿದ್ದರು. ಆದರೆ ಮಂಜುನಾಥ್ ಅವರು ಕೆಳಕ್ಕೆ ಇಳಿದಿರಲಿಲ್ಲ. ನಂತರ ತಪಾಸಣೆ ನಡೆಸಿದ ವೇಳೆ ಗೋಧಿ ಹೊಲದಲ್ಲಿ ಮಂಜುನಾಥ್ ಅವರು ಶವವಾಗಿ ಪತ್ತೆಯಾಗಿದ್ದರು. ವಿಮಾನದಿಂದ ಕೆಳಕ್ಕೆ ಹಾರಿದ ವೇಳೆ ಅವರ ಪ್ಯಾರಚೂಟ್ ತೆರೆದುಕೊಳ್ಳದಿರುವುದು ಪತ್ತೆಯಾಗಿತ್ತು.
ಸಾಮಾನ್ಯವಾಗಿ ವಿಮಾನದಿಂದ ಹಾರಿದ ಕೇವಲ 5 ಸೆಕೆಂಡ್ ಗಳಲ್ಲಿ ಪ್ಯಾರಚೂಟ್ ತನ್ನಿಂತಾನೆ ಬಿಚ್ಚಿಕೊಳ್ಳುತ್ತದೆ. ಒಂದು ವೇಳೆ ಇದು ತೆರೆದುಕೊಳ್ಳದಿದ್ದಲ್ಲಿ, ತುರ್ತು ಸಂದರ್ಭಕ್ಕೆಂದೆ ಇನ್ನೊಂದು ಪ್ಯಾರಚೂಟ್ ಇರುತ್ತದೆ. ಅದನ್ನು ಸ್ವತಃ ತೆರೆಯಬೇಕಾಗುತ್ತದೆ. ಆದರೆ ಮಂಜುನಾಥ್ ಅವರ ಎರಡು ಪ್ಯಾರಚೂಟ್ ಗಳು ತೆರೆದುಕೊಂಡಿಲ್ಲ ಎನ್ನಲಾಗಿದೆ.
ಈ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ. ಮತ್ತೊಂದೆಡೆ ಶವದ ಮರಣೋತ್ತರ ಪರೀಕ್ಷೆ ಸೇರಿದಂತೆ ಇತರೆ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಮಲ್ಪುರ ಪೊಲೀಸರು ತಿಳಿಸಿದ್ದಾರೆ. ಪಾರ್ಥಿವ ಶರೀರವು ಫೆ. 8 ರ ಸಂಜೆ ಅಥವಾ ಫೆ. 9 ರಂದು ತವರೂರು ಸಂಕೂರು ಗ್ರಾಮಕ್ಕೆ ಆಗಮಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
Agra/Shivamoga, Feb 8: A shocking incident occurred in which an Air Force officer, a resident of Shimoga district of Karnataka State, died during a parachute training exercise on February 7 at Agra near New Delhi.
Manjunath (36), who was working as a warrant officer at Agra Air Force base, was identified as dead. He is originally a resident of Sankuru village near Pataguppa, Hosnagar taluk, Shimoga district.