
shimoga | ತಂದೆಯ ಒಡನಾಡಿಗಳನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಕರೆದೊಯ್ದ ಸಚಿವ ಮಧು ಬಂಗಾರಪ್ಪ!
ಶಿವಮೊಗ್ಗ (shivamogga), ಮಾ 2: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ತಮ್ಮ ತಂದೆ ದಿವಂಗತ ಎಸ್ ಬಂಗಾರಪ್ಪ ಅವರ ಒಡನಾಡಿಗಳನ್ನು, ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಕರೆದೊಯ್ಯುವ ಮೂಲಕ ಮಾ. 2 ರಂದು ವಿಭಿನ್ನವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು!
ಸೊರಬ ವಿಧಾನಸಭಾ ಕ್ಷೇತ್ರದ 38 ಜನರನ್ನು ಮಧ್ಯಾಹ್ನ ಇಂಡಿಗೋ ವಿಮಾನದಲ್ಲಿ, ಸಚಿವರು ಬೆಂಗಳೂರಿಗೆ ಕರೆದೊಯ್ದರು. ಸೋಮವಾರ ಬೆಂಗಳೂರನ್ನು ಸುತ್ತಾಡಲಿದ್ದು, ನಂತರ ಮಂಗಳವಾರ ಬೆಂಗಳೂರಿನಿಂದ ಸೊರಬಕ್ಕೆ ಹಿಂದಿರುಗಲಿದ್ದಾರೆ. ಎಲ್ಲರಿಗೂ ಸಚಿವರೇ ವಸತಿ, ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ.
ಎಸ್ ಬಂಗಾರಪ್ಪ ಅವರು ತಮ್ಮ ಕೆಲ ಒಡನಾಡಿಗಳನ್ನು ವಿಮಾನದಲ್ಲಿ ಕರೆದೊಯ್ಯುವ ಭರವಸೆ ನೀಡಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಇದೀಗ ಅವರ ಪುತ್ರ ಮಧು ಬಂಗಾರಪ್ಪ ಅವರು ತಂದೆಯ ಕೆಲ ಒಡನಾಡಿಗಳು, ಆಪ್ತರನ್ನು ವಿಮಾನದಲ್ಲಿ ಕರೆದೊಯ್ಯುವ ಮೂಲಕ ತಂದೆಯ ಭರವಸೆ ಈಡೇರಿಸಿದ್ದಾರೆ.
ಈ ಕುರಿತಂತೆ ಮಧು ಬಂಗಾರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಎಸ್. ಬಂಗಾರಪ್ಪ ಅವರ ಅಭಿಮಾನಿಗಳಿಂದ ಪ್ರಸ್ತುತ ತಾವು ಒಂದು ಸ್ಥಾನದಲ್ಲಿದ್ದೆನೆ. ಹಗಲು ರಾತ್ರಿ ಬಂಗಾರಪ್ಪರಿಗೆ ಶಕ್ತಿ ತುಂಬಲು ಶ್ರಮಿಸಿದ್ದಾರೆ. ಅವರ ಶ್ರಮ ಮರೆಯಲು ಸಾಧ್ಯವಿಲ್ಲ. ಈ ಕಾರಣದಿಂದ ಅವರನ್ನು ವಿಮಾನದಲ್ಲಿ ಕರೆದೊಯ್ಯಬೇಕೆಂಬ ಉದ್ದೇಶದಿಂದ ಕರೆದೊಯ್ಯುತ್ತಿದ್ದೆನೆ ಎಂದು ತಿಳಿಸಿದ್ದಾರೆ.
ಬಂಗಾರಪ್ಪ ಅವರ ಒಡನಾಡಿ ಜಡೆ ಗ್ರಾಮದ ನಿವಾಸಿ ಬಸವಂತಪ್ಪ ಅವರು ಮಾತನಾಡಿ, ‘ನಾವು ಮೊದಲಿನಿಂದಲೂ ಎಸ್ ಬಂಗಾರಪ್ಪ ಅವರನ್ನು ಬೆಂಬಲಿಸಿಕೊಂಡು ಬಂದಿದ್ದೆವೆ. ಈ ಹಿಂದೆ ಬಂಗಾರಪ್ಪ ಅವರು ಬೆಂಗಳೂರು, ದೆಹಲಿಗೆ ತಮ್ಮ ಆಪ್ತರನ್ನು ಕರೆದೊಯ್ಯುತ್ತಿದ್ದರು.
ತಾವು ಒಮ್ಮೆಯೂ ವಿಮಾನದಲ್ಲಿ ಪ್ರಯಾಣ ಬೆಳೆಸಿರಲಿಲ್ಲ. ಇದೀಗ ಮಧು ಬಂಗಾರಪ್ಪ ಅವರು ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಕಲ್ಪಿಸಿದ್ದಾರೆ. ಸಾಕಷ್ಟು ಸಂತೋಷವಾಗುತ್ತಿದೆ’ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Shimoga, Mar 2: District In-charge Minister Madhu Bangarappa celebrated his birthday in a different way on Mar 2 by taking his father Late S Bangarappa’s companions on a flight from Shimoga to Bangalore!
In the afternoon, the Minister took 38 people from Soraba assembly constituency to Bangalore in an Indigo flight. He will tour Bangalore on Monday and then return to Soraba from Bangalore on Tuesday. The minister has arranged accommodation and food for all.