Bhovi Corporation scam: ED raids in Bengaluru Shivamogga! bhovi nigama scam | ಭೋವಿ ನಿಗಮ ಹಗರಣ : ಬೆಂಗಳೂರು ಶಿವಮೊಗ್ಗದಲ್ಲಿ ಇಡಿ ರೈಡ್!

bhovi nigama scam | ಭೋವಿ ನಿಗಮ ಹಗರಣ : ಬೆಂಗಳೂರು, ಶಿವಮೊಗ್ಗದಲ್ಲಿ ಇ.ಡಿ ರೈಡ್!

ಬೆಂಗಳೂರು (bengaluru), ಏ. 5: ಕರ್ನಾಟಕ ಭೋವಿ ಅಭಿವೃದ್ದಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂ. ಹಗರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯವು ಬೆಂಗಳೂರು ಹಾಗೂ ಶಿವಮೊಗ್ಗದಲ್ಲಿ ದಾಳಿ ನಡೆಸಿ ತಪಾಸಣೆ ನಡೆಸಿದ ಸಂಗತಿ ಏ. 4 ರ ಶುಕ್ರವಾರ ನಡೆದಿದೆ.

ಸುಮಾರು 10 ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ತಂಡ ದಾಳಿ ನಡೆಸಿದೆ. ಶಿವಮೊಗ್ಗದ ಒಂದು ಕಡೆ ಹೊರತುಪಡಿಸಿದರೆ, ಉಳಿದಂತೆ ಬೆಂಗಳೂರಿನ ಹಲವೆಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಭೋವಿ ನಿಗಮದಲ್ಲಿ ವ್ಯವಸ್ಥಾಪಕರಾಗಿದ್ದ ಆರೋಪಿತ ಅಧಿಕಾರಿಗಳ ಮನೆ ಸೇರಿದಂತೆ ಅವರಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಇಡಿ ತಂಡ ದಾಳಿ ನಡೆಸಿದೆ. ಈ ವೇಳೆ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಲಾಗಿದೆ.

ಭೋವಿ ನಿಗಮದ ಉದ್ಯಮಶೀಲತಾ ಯೋಜನೆ ಮತ್ತು ನೇರ ಸಾಲ ಯೋಜನೆಗಳಡಿ ಲಕ್ಷಾಂತರ ರೂ. ಸಾಲ ಕೊಡಿಸುವುದಾಗಿ ಮಧ್ಯವರ್ತಿಗಳ ಮೂಲಕ ಆಮಿಷವೊಡ್ಡಿ ಸಾರ್ವಜನಿಕರ ಗುರುತಿನ ದಾಖಲೆಗಳು, ಬ್ಯಾಂಕ್‌ ಚೆಕ್‌ ಪಡೆದು ಅನುದಾನ ದುರ್ಬಳಕೆ ಮಾಡಿಕೊಂಡಿರುವ ಆರೋಪವಿದೆ.

ಸಾಲ ನೀಡುವ ನೆಪದಲ್ಲಿ ಕೆಲ ಅಧಿಕಾರಿಗಳು ಪಾಲುದಾರರಾಗಿದ್ದ ಖಾಸಗಿ ಕಂಪೆನಿಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿದ್ದರು. ಕೋಟ್ಯಂತರ ರೂ. ಅವ್ಯವಹಾರವಾಗಿದ್ದ ದೂರು ಕೇಳಿಬಂದಿತ್ತು.

Bengaluru, Apr. 5: The Enforcement Directorate conducted raids and inspections in april 4, Bengaluru and Shivamogga in connection with the multi-crore rupee scam in the Karnataka Bhovi Development Corporation.

Shivamogga, Jul. 22: Water will be released from the main canal of the Bhadra Upper River Project under the Visvesvaraya Jal Nigam Limited to Vani Vilas Sagar from 27-07-2025 as per the government's directive, the announcement said. Previous post shimoga | ಶಿವಮೊಗ್ಗ : ಭದ್ರಾ ಡ್ಯಾಂನಿಂದ ಮತ್ತೆ 8 ಸಾವಿರ ಕ್ಯೂಸೆಕ್ ನೀರು – ಯಾವಾಗ? ಕಾರಣವೇನು?
Shivamogga: Murder case accused gets stiff prison sentence! ಶಿವಮೊಗ್ಗ : ಕೊಲೆ ಪ್ರಕರಣದ ಆರೋಪಿಗೆ ಕಠಿಣ ಜೈಲು ಶಿಕ್ಷೆ! Next post shimoga | ಶಿವಮೊಗ್ಗ : ಗಾಂಜಾ ಸಾಗಾಣೆ ವೇಳೆ ಸಿಕ್ಕಿಬಿದ್ದ ವ್ಯಕ್ತಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ!