Thirthahalli news | ತೀರ್ಥಹಳ್ಳಿಯ ಕೀಗಡಿ ಗ್ರಾಮದ ಯುವಕ ನಾಪತ್ತೆ!

A young man from Keegadi village in Thirthahalli has gone missing! ತೀರ್ಥಹಳ್ಳಿಯ ಕೀಗಡಿ ಗ್ರಾಮದ ಯುವಕ ನಾಪತ್ತೆ!

ತೀರ್ಥಹಳ್ಳಿ (thirthahalli), ನವೆಂಬರ್ 13: ಯುವಕನೋರ್ವ ಮನೆಯಿಂದ ನಾಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕೀಗಡಿ ಗ್ರಾಮದಲ್ಲಿ ನಡೆದಿದೆ.

ಈ ಕುರಿತಂತೆ ನವೆಂಬರ್ 13 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಸುಬ್ರಮಣ್ಯ ಎಂಬುವರ ಮಗ 22 ವರ್ಷದ ಸುದೀಪ್ ನಾಪತ್ತೆಯಾದವರಾಗಿದ್ದಾರೆ.

ಅಕ್ಟೋಬರ್ 11 ರ ರಾತ್ರಿ ಮನೆಯಲ್ಲಿ ಯಾರಿಗೂ ಹೇಳದೆ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.

ಚಹರೆ : ನಾಪತ್ತೆಯಾದ ಯುವಕ 5.5 ಅಡಿ ಎತ್ತರ, ದುಂಡುಮುಖ, ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಫಿ ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾರೆ.

ಇವರ ಬಗ್ಗೆ ಸುಳಿವು ದೊರೆತಲ್ಲಿ ಮಾಳೂರು ಪೊಲೀಸ್ ಠಾಣೆ ದೂ. ಸಂ.: 08181-235142/9480803353/08181-228310/9480803333/08182-261413/ 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Shivamogga, November 13: An incident of a young man going missing from his home has taken place in Keegadi village in Thirthahalli taluk of Shivamogga district.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →