bengaluru | ಬೆಂಗಳೂರು : ಕನ್ನಡ ಸಿನಿಮಾ ರಂಗದ ಹಿರಿಯ ಹಾಸ್ಯ ನಟ ಎಂ ಎಸ್ ಉಮೇಶ್ ವಿಧಿವಶ!

Bengaluru: Senior comedian of Kannada cinema industry MS Umesh passes away! ಬೆಂಗಳೂರು : ಕನ್ನಡ ಸಿನಿಮಾ ರಂಗದ ಹಿರಿಯ ಹಾಸ್ಯ ನಟ ಎಂ ಎಸ್ ಉಮೇಶ್ ವಿಧಿವಶ!

ಬೆಂಗಳೂರು (bangalore), ನವೆಂಬರ್ 30: ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಹಾಸ್ಯ ನಟ ಎಂ ಎಸ್ ಉಮೇಶ್ (80) ಅವರು, ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

ಉಮೇಶ್ ಅವರ ಪಾರ್ಥಿವ ಶರೀರವನ್ನು ಜೆ ಪಿ ನಗರದಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕಳೆದ ಅಕ್ಟೋಬರ್ ತಿಂಗಳಲ್ಲಿ ಉಮೇಶ್ ಅವರು ಮನೆಯ ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದರು. ಆಸ್ಪತ್ರೆಗೆ ದಾಖಲಿಸಿದ ವೇಳೆ ಅವರಿಗೆ ಲಿವರ್ ಕ್ಯಾನ್ಸರ್ ಇರುವುದು ಕಂಡುಬಂದಿತ್ತು. ಯಕೃತ್ ನಲ್ಲಿ ಕ್ಯಾನ್ಸರ್ ಗೆಡ್ಡೆ ಬೆಳೆದಿದ್ದು, ಇದು 4 ನೇ ಹಂತಕ್ಕೆ ಬಂದಿತ್ತು.

ಅನುಪಮ ಸೇವೆ : ಎಂ ಎಸ್ ಉಮೇಶ್ ಅವರು ರಂಗಭೂಮಿ ಹಿನ್ನೆಲೆಯವರಾಗಿದ್ದಾರೆ. ಗುಬ್ಬಿ ವೀರಣ್ಣ ನಾಟಕ ಕಂಪೆನಿಯಲ್ಲಿ ಕಾರ್ಯನಿರ್ವಹಿಸಿದ್ದರು. 1960 ರಲ್ಲಿ ಬಿಆರ್‌ ಪಂಥುಲು ನಿರ್ದೇಶನದ ʻಮಕ್ಕಳ ರಾಜ್ಯʼ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.

Bengaluru, November 30: Veteran comedian M. S. Umesh (80) passed away. who was admitted to the hospital due to illness and undergoing treatment.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →