haveri news | ಹಾವೇರಿಯ ಉಷಾರಾಣಿ ಜಿ ಎಸ್ ಅವರಿಗೆ ಗೌರವ ಡಾಕ್ಟರೇಟ್

ಹಾವೇರಿಯ ಉಷಾರಾಣಿ ಜಿ ಎಸ್ ಅವರಿಗೆ ಗೌರವ ಡಾಕ್ಟರೇಟ್

ಹಾವೇರಿ (haveri), ಮಾರ್ಚ್ 04: ಹಾವೇರಿ ನಗರದ ನಿವಾಸಿ, A2 ಜೀನಿಯಸ್ ಅಬಾಕಸ್ ಅಕಾಡೆಮಿ ಸಂಸ್ಥಾಪಕರಾದ ಉಷಾರಾಣಿ ಜಿ ಎಸ್ ಅವರಿಗೆ ಏಷಿಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ವತಿಯಿಂದ ‘ಗೌರವ ಡಾಕ್ಟರೇಟ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸಂಸ್ಥೆಯ ಆವರಣದಲ್ಲಿ ಫೆಬ್ರವರಿ 28 ರಂದು ನಡೆದ ಸಮಾರಂಭದ ವೇಳೆ ಉಷಾ ರಾಣಿ ಜಿ ಎಸ್ ಅವರಿಗೆ ಪದವಿ ಪ್ರದಾನ ಮಾಡಿ ಗೌರವಿಸಲಾಗಿದೆ.

ಉಷಾರಾಣಿ ಜಿ ಎಸ್ ಅವರು ಅಬಾಕಸ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. A2 ಜೀನಿಯಸ್ ಅಬಾಕಸ್ ಅಕಾಡೆಮಿ ಮೂಲಕ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಸದರಿ ಕ್ಷೇತ್ರದಲ್ಲಿ ಸಾಧನೆ ಗಮನಿಸಿ ಹಲವು ಸಂಘಸಂಸ್ಥೆಗಳು ಇವರನ್ನು ಸನ್ಮಾನಿಸಿ, ಪ್ರಶಸ್ತಿ ನೀಡಿ ಅಭಿನಂದಿಸಿವೆ.  ಹಾವೇರಿ ನಗರದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿಯೂ ಇವರ ಸಾಧನೆ ಗುರುತಿಸಿ ಸನ್ಮಾನಿಸಲಾಗಿತ್ತು.

‘ಶಿಕ್ಷಣ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿನ ತಮ್ಮ ಸಾಧನೆ ಗುರುತಿಸಿ, ಏಷಿಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಸಂಸ್ಥೆಯು ‘ಗೌರವ ಡಾಕ್ಟರೇಟ್’ ಪ್ರಶಸ್ತಿ ನೀಡಿಅಭಿನಂದಿಸಿದೆ. ಇದು ತಮಗೆ ಅತೀವ ಸಂತಸ ಉಂಟು ಮಾಡಿದೆ. ತಮ್ಮ ಸಾಧನೆಗೆ ಪ್ರೋತ್ಸಾಹ ನೀಡಿದ ಪತಿ ಮಂಜುನಾಥ್ ಜೆ ಗೌಳಿ ಸೇರಿದಂತೆ ಕುಟುಂಬ ವರ್ಗ, ಹಿತೈಷಿಗಳಿಗೆ ಧನ್ಯವಾದ ಅರ್ಪಿಸುವುದಾಗಿ’ ಉಷಾರಾಣಿ ಜಿ ಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Honorary Doctorate for Usharani G.S. of Haveri

Haveri, March 4: Usharani G.S., a resident of Haveri city and founder of A2 Genius Abacus Academy, has been conferred with an Honorary Doctorate by the Asia International Culture Research University.

The award was presented to her during a ceremony held on February 28 at the university campus in Bengaluru. Usharani G.S. works as an abacus trainer and provides training to children through her academy. Recognizing her achievements in this field, several organizations have honored her with awards and felicitations. Her contributions were also acknowledged during the Republic Day celebrations organized by the district administration in Haveri.

The Asia International Culture Research University awarded her the honorary doctorate in recognition of her accomplishments in the fields of education and social service. Expressing her joy, Usharani G.S. stated that this honor has brought her immense happiness. She also extended gratitude to her husband, Manjunath J,  her family and well-wishers for their encouragement and support.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *