bhadravati news | ಭದ್ರಾವತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವ ಪೊಲೀಸ್ ಬಲೆಗೆ!

crime news

ಭದ್ರಾವತಿ, ಅಕ್ಟೋಬರ್ 16: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಓರ್ವನನ್ನು ಭದ್ರಾವತಿಯ ಸತ್ಯಸಾಯಿ ನಗರದಲ್ಲಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಭದ್ರಾವತಿ ನಗರದ ಸೀಗೆಬಾಗಿಯ ನೇತಾಜಿ ರಸ್ತೆ ನಿವಾಸಿ ಅಜಗರ್ ಅಲಿ ಯಾನೆ ರಾಯಿಲ್ (32) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಆರೋಪಿಯಿಂದ 600 ಗ್ರಾಂ ತೂಕದ 30 ಸಾವಿರ ರೂ. ಮೌಲ್ಯದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಖಚಿತ ವರ್ತಮಾನದ ಮೇರೆಗೆ ಸಬ್ ಇನ್ಸ್’ಪೆಕ್ಟರ್ ಭಾರತಿ ಎಸ್ ಎನ್ ಅವರು ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂಬಂಧ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Man selling ganja in Bhadravathi falls into police net! | Bhadravathi, October 16: Police have arrested an individual in Satyasai Nagar, Bhadravathi, on charges of selling ganja.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *