ಶಿವಮೊಗ್ಗ (shivamogga), ಅಕ್ಟೋಬರ್ 29: ಮಲೆನಾಡು ಭಾಗದಲ್ಲಿ ರಸ್ತೆ ಬದಿಯಲ್ಲಿರುವ ನೀಲಗಿರಿ ಹಾಗೂ ಅಕೇಶಿಯಾ ಮರಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ, ಅಕ್ಟೋಬರ್ 28 ರಂದು ಡಿಸಿ ಕಚೇರಿಯಲ್ಲಿ ಮಲೆನಾಡು ವಕೀಲರ ವೇದಿಕೆಯು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಪತ್ರ ಅರ್ಪಿಸಿದೆ.
ಮಲೆನಾಡು ಭಾಗದಲ್ಲಿ ರಸ್ತೆ ಬದಿಯಲ್ಲಿರುವ ನೀಲಗಿರಿ ಹಾಗೂ ಅಕೇಶಿಯಾ ಮರಗಳು ನಿರಂತರವಾಗಿ ವಿದ್ಯುತ್ ಕಂಬಗಳು ಹಾಗೂ ರಸ್ತೆಗಳ ಮೇಲೆ ಬೀಳುತ್ತಿವೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿವೆ. ಕೆಲವೆಡೆ ಸದರಿ ಮರಗಳು ಬಿದ್ದು ಸಾವು-ನೋವುಗಳು ಕೂಡ ಸಂಭವಿಸಿವೆ ಎಂದು ಸಂಘಟನೆ ತಿಳಿಸಿದೆ.
ಹುಂಚ ಗ್ರಾಮದ ಹೊಂಡಲಗದ್ದೆಯಿಂದ ಕುಬಟಹಳ್ಳಿವರೆಗಿನ ರಸ್ತೆ ಅಕ್ಕಪಕ್ಕದಲ್ಲಿರುವ ನೀಲಗಿರಿ – ಅಕೇಶಿಯಾ ಮರಗಳನ್ನು ತೆರವುಗೊಳಿಸಲು ಎಂಪಿಎಂ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಮನವಿ ಅರ್ಪಿಸುವ ಸಂದರ್ಭದಲ್ಲಿ ವಕೀಲರಾದ ಕೆ ವೈ ರಾಮಚಂದ್ರಪ್ಪ, ಕೃಷ್ಣಮೂರ್ತಿ ಸಿರುಗಾರು, ವಿಕಾಸ್ ಹೊನ್ನೂರು, ಮಂಜುನಾಥ್, ಮಹೇಂದ್ರ ಕುಮಾರ್, ಮಿಥುನ್, ಸ್ವರೂಪ್, ಪ್ರಸನ್ನ ಸೇರಿದಂತೆ ಮೊದಲಾದವರಿದ್ದರು.
Shivamogga: Malenadu Lawyers’ Forum Submits Memorandum to Deputy Commissioner | Shivamogga, October 29: On October 28, the Malenadu Lawyers’ Forum submitted a memorandum to Deputy Commissioner Prabhulinga Kavalikatti at his office, demanding the removal of Eucalyptus and Acacia trees located along roadsides in the Malenadu region.

