shimoga news | ಶಿವಮೊಗ್ಗ : ವಿ ಎಸ್ ಉಗ್ರಪ್ಪ ಕಾರಿಗೆ ಭೋವಿ ಸಮಾಜದ ಮುಖಂಡರಿಂದ ಮುತ್ತಿಗೆ!

Shivamogga: 20 Years of Rigorous Imprisonment for 23-Year-Old Man! Shivamogga, October 29: The Additional District and Sessions Court (FTSC-1) in Shivamogga has sentenced a 23-year-old man to 20 years of rigorous imprisonment for sexually assaulting a minor girl. In addition to the prison term, a fine of Rs 1,01,000 has been imposed. The court has also ordered that compensation of Rs 4 lakh be provided to the victim.

ಶಿವಮೊಗ್ಗ (shivamogga), ಅಕ್ಟೋಬರ್ 29: ಭೋವಿ ಸಮಾಜ ಹಾಗೂ ಮೀಸಲಾತಿ ಕುರಿತಂತೆ ನೀಡಿರುವ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿ, ಅಕ್ಟೋಬರ್ 29 ರಂದು ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಅವರ ಕಾರಿಗೆ ಭೋವಿ ಸಮಾಜದ ಪ್ರಮುಖರು ದಿಡೀರ್ ಮುತ್ತಿಗೆ ಹಾಕಿ ಪ್ರತಿಭಟನೆಗೆ ಮುಂದಾದ ಘಟನೆ ನಡೆಯಿತು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಮುಗಿಸಿ ಆರ್.ಟಿ.ಓ ಕಚೇರಿ ರಸ್ತೆಯಲ್ಲಿ ವಿ ಎಸ್ ಉಗ್ರಪ್ಪ ಅವರು ಕಾರು ತೆರಳುತ್ತಿದ್ದ ವೇಳೆ, ದಿಡೀರ್ ಆಗಿ ಆಗಮಿಸಿದ ಭೋವಿ ಸಮಾಜದ ಕೆಲ ಮುಖಂಡರು ಭೋವಿ ಸಮಾಜ ಹಾಗೂ ಮೀಸಲಾತಿ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು.

ಇದರಿಂದ ಸ್ಥಳದಲ್ಲಿ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಸ್ಥಳದಲ್ಲಿದ್ದವರು, ಕಾರಿಗೆ ಅಡ್ಡ ನಿಂತಿದ್ದ ಮುಖಂಡರನ್ನು ಸಮಾಧಾನಗೊಳಿಸಿ ದೂರ ಕರೆದೊಯ್ದರು.

ಈ ವೇಳೆ ಭೋವಿ ಸಮಾಜದ ಪ್ರಮುಖರಾದ ಲೋಕೇಶ್ ಹೊಂಗಿರಣ, ಬೂದಿಗೆರೆ ಬಸವರಾಜ್, ವೀರಭದ್ರಪ್ಪ ಪೂಜಾರ್,  ಮಂಜುನಾಥ್ ಚನ್ನಮುಂಭಾಪುರ, ಪ್ರಶಾಂತ್, ರಘು, ಹನುಮಂತಪ್ಪ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Shivamogga: V. S. Ugrappa’s car surrounded by leaders of the Bhovi community! | nShivamogga, October 29: On October 29, prominent members of the Bhovi community suddenly surrounded V. S. Ugrappa’s car and staged a protest, demanding a clarification regarding his statements concerning the Bhovi community and the issue of reservation.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *