shimoga palike news | ಶಿವಮೊಗ್ಗ : ಲಕ್ಷ ಲಕ್ಷ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಕಟ್ಟಡಗಳಿಗೆ ಬೀಗ ಹಾಕಲು ಮುಂದಾದ ಪಾಲಿಕೆ ಆಡಳಿತ!

Shivamogga: City Corporation Administration Moves to Lock Up Buildings with Lakhs in Outstanding Property Tax! | Shivamogga, November 13: The City Corporation administration has initiated action to seize commercial and multi-story buildings in Shivamogga city that have accumulated lakhs of rupees in unpaid property tax over the past several years—a move that has caused quite a stir! On November 13, a team of officials and staff from the Corporation’s Zonal Office-1 conducted surprise operations at various locations. The action involved the seizure of commercial buildings that had failed to pay property taxes amounting to lakhs of rupees.

ವರದಿ : ಬಿ. ರೇಣುಕೇಶ್

ಶಿವಮೊಗ್ಗ (shivamogga), ನವೆಂಬರ್ 13: ಶಿವಮೊಗ್ಗ ನಗರದಲ್ಲಿ ಕಳೆದ ಹಲವು ವರ್ಷಗಳಿಂದ ಲಕ್ಷಾಂತರ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ವಾಣಿಜ್ಯ ಹಾಗೂ ಬಹು ಮಹಡಿ ಕಟ್ಟಡಗಳನ್ನು ಸೀಜ್ ಮಾಡಲು ಮಹಾನಗರ ಪಾಲಿಕೆ ಆಡಳಿತ ಕ್ರಮಕೈಗೊಂಡಿದ್ದು, ಇದು ಭಾರೀ ಸಂಚಲನ ಉಂಟು ಮಾಡಿದೆ!

ನವೆಂಬರ್ 13 ರಂದು ಪಾಲಿಕೆ ವಲಯ ಕಚೇರಿ – 1 ರ ಅಧಿಕಾರಿ – ಸಿಬ್ಬಂದಿಗಳ ತಂಡ ವಿವಿಧೆಡೆ ದಿಡೀರ್ ಕಾರ್ಯಾಚರಣೆ ನಡೆಸಿತು. ಲಕ್ಷಾಂತರ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ವಾಣಿಜ್ಯ ಕಟ್ಟಡಗಳನ್ನು ಸೀಜ್ ಮಾಡಲು ಮುಂದಾದ ಘಟನೆ ನಡೆದಿದೆ.

ಈ ವೇಳೆ ಸದರಿ ಕಟ್ಟಡಗಳ ಮಾಲೀಕರು ಕೆಲ ದಿನಗಳಲ್ಲಿಯೇ ತೆರಿಗೆ ಪಾವತಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ, ಕಟ್ಟಡ ಸೀಜ್ ಮಾಡುವ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ. ಕಾಲಮಿತಿಯೊಳಗೆ ತೆರಿಗೆ ಪಾವತಿಯಾಗದಿದ್ದರೆ ಕಾನೂನು ರೀತ್ಯ ಕಟ್ಟಡ ಸೀಜ್ ಮಾಡುವ ಎಚ್ಚರಿಕೆಯನ್ನು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವರು ನೀಡಿದ್ದಾರೆ.

ಆಯುಕ್ತರ ಸೂಚನೆ : ಕೆಲ ವಾಣಿಜ್ಯ ಹಾಗೂ ಬಹು ಮಹಡಿ ಕಟ್ಟಡಗಳ ಮಾಲೀಕರು ಲಕ್ಷಾಂತರ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕ್ರಮದ ಬಗ್ಗೆ ಸಂಬಂಧಿಸಿದ ಅಧಿಕಾರಿ – ಸಿಬ್ಬಂದಿಗಳ ವಿರುದ್ದ ಇತ್ತೀಚೆಗೆ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಸದರಿ ಕಟ್ಟಡಗಳಿಂದ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ವಸೂಲಿ ಮಾಡಬೇಕು.  ಈ ಸಂಬಂಧ ದಿಡೀರ್ ಕಾರ್ಯಾಚರಣೆ ನಡೆಸಿ ಕಾನೂನು ರೀತ್ಯ ಕ್ರಮಕೈಗೊಳ್ಳಬೇಕು. ಈ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದಂತೆ ಮೂರು ವಲಯಗಳ ಅಧಿಕಾರಿ – ಸಿಬ್ಬಂದಿಗಳಿಗೆ ಆಯುಕ್ತರು ಖಡಕ್ ಸೂಚನೆ ನೀಡಿದ್ದರು.

ಆಯುಕ್ತರ ಸೂಚನೆಯಂತೆ ಇದೀಗ ಪಾಲಿಕೆ ವಲಯ – 1 ರ ಅಧಿಕಾರಿಗಳು ಫೀಲ್ಡಿಗಿಳಿದಿದ್ದಾರೆ. ತೆರಿಗೆ ಬಾಕಿ ಉಳಿಸಿಕೊಂಡ ಶ್ರೀಮಂತರಿಗೆ ಶಾಕ್ ನೀಡುವ ಕಾರ್ಯ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಉಪ ಆಯುಕ್ತ ಜಗದೀಶ್ ನಾಯ್ಕ್, ರೆವಿನ್ಯೂ ಆಫೀಸರ್ ವೇಣುಗೋಪಾಲ್, ಎಆರ್’ಓ ಯಶವಂತ್ ಸೇರಿದಂತೆ ರೆವಿನ್ಯೂ ಇನ್ಸ್’ಪೆಕ್ಟರ್, ಬಿಲ್ ಕಲೆಕ್ಟರ್ ಗಳು ಸೇರಿದಂತೆ ಸುಮಾರು 16 ಜನರ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.

ಕೋಟ್ಯಾಂತರ ಬಾಕಿ! : ಶಿವಮೊಗ್ಗ ಮಹನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲ ವಾಣಿಜ್ಯ ಹಾಗೂ ಬಹು ಮಹಡಿ ಕಟ್ಟಡಗಳ ಮಾಲೀಕರು ಕಳೆದ ಹಲವು ವರ್ಷಗಳಿಂದ ಸಮರ್ಪಕವಾಗಿ ಆಸ್ತಿ ತೆರಿಗೆ ಪಾವತಿ ಮಾಡುತ್ತಿಲ್ಲ. ಕೋಟ್ಯಾಂತರ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.

ಈಗಾಗಲೇ ಸದರಿ ಕಟ್ಟಡಗಳ ಮಾಲೀಕರಿಗೆ ನಿಯಮಿತವಾಗಿ ನೋಟಿಸ್ ನೀಡಿಕೊಂಡು ಬರಲಾಗುತ್ತಿದೆ. ಆದಾಗ್ಯೂ ಕೆಲವರು ಆಸ್ತಿ ತೆರಿಗೆ ಪಾವತಿ ಮಾಡುತ್ತಿಲ್ಲ. ಇಂತಹ ಕಟ್ಟಡಗಳ ಮಾಲೀಕರ ವಿರುದ್ದ ಇದೀಗ ಪಾಲಿಕೆ ಆಡಳಿತ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.

ದಿಡೀರ್ ಆಗಿ ಕಟ್ಟಡಗಳ ಸೀಜ್ ಮಾಡುವ ಕಾರ್ಯಾಚರಣೆಗೆ ಚಾಲನೆ ನೀಡಿದೆ. ಈ ದಿಡೀರ್ ಕಾರ್ಯಾಚರಣೆಯ ಫಲವಾಗಿ ಕೆಲ ಕಟ್ಟಡಗಳ ಮಾಲೀಕರು ಬಾಕಿ ಉಳಿಸಿಕೊಂಡಿರುವ ಲಕ್ಷಾಂತರ ರೂ. ಆಸ್ತಿ ತೆರಿಗೆ ಪಾವತಿಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೀನು ಮಾರುಕಟ್ಟೆಯಲ್ಲಿಯೂ ದಿಡೀರ್ ಕಾರ್ಯಾಚರಣೆ!

ಶಿವಮೊಗ್ಗದ ಮೀನು ಮಾರುಕಟ್ಟೆಯಲ್ಲಿರುವ ಹಲವು ಮಳಿಗೆಗಳ ವ್ಯಾಪಾರಿಗಳು ಕೂಡ ಮಹಾನಗರ ಪಾಲಿಕೆ ಆಡಳಿತಕ್ಕೆ ನಿಯಮಿತವಾಗಿ ಮಾಸಿಕ ಬಾಡಿಗೆ ಪಾವತಿ ಮಾಡುತ್ತಿಲ್ಲ. ಮಳಿಗೆಗಳ ಮಾಸಿಕ ಬಾಡಿಗೆ ಮೊತ್ತ ಸಕಾಲದಲ್ಲಿ ಪಾವತಿಸುವಂತೆ ಈಗಾಗಲೇ ಹಲವು ಬಾರಿ ಪಾಲಿಕೆ ಆಡಳಿತ ಸಂಬಂಧಿಸಿದವರಿಗೆ ನೋಟಿಸ್ ನೀಡಿತ್ತು. ಆದಾಗ್ಯೂ ಬಾಕಿ ಪಾವತಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನವೆಂಬರ್ 13 ರಂದು ಪಾಲಿಕೆ ವಲಯ – 2 ರ ಅಧಿಕಾರಿ – ಸಿಬ್ಬಂದಿಗಳ ತಂಡ ಮೀನು ಮಾರುಕಟ್ಟೆಯಲ್ಲಿ ಬಾಡಿಗೆ ಬಾಕಿ ಉಳಿಸಿಕೊಂಡ ಮಳಿಗೆಗಳಿಗೆ ಬೀಗ ಹಾಕಲು ಮುಂದಾಗಿತ್ತು. ಈ ವೇಳೆ ವ್ಯಾಪಾರಿಗಳು ಕಾಲಮಿತಿಯೊಳಗೆ ಬಾಡಿಗೆ ಪಾವತಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ, ಬೀಗ ಹಾಕುವ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಹಾಯಕ ಕಂದಾಯಧಿಕಾರಿ ಅಂಜನಮೂರ್ತಿ, ರೆವಿನ್ಯೂ ಇನ್ಸ್’ಪೆಕ್ಟರ್ ಕಾರ್ತಿಕ್, ಬಿಲ್ ಕಲೆಕ್ಟರ್ ಗಳು ಸೇರಿದಂತೆ ವಲಯ-2 ರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Shivamogga: City Corporation Administration Moves to Lock Up Buildings with Lakhs in Outstanding Property Tax! | Shivamogga, November 13: The City Corporation administration has initiated action to seize commercial and multi-story buildings in Shivamogga city that have accumulated lakhs of rupees in unpaid property tax over the past several years—a move that has caused quite a stir! On November 13, a team of officials and staff from the Corporation’s Zonal Office-1 conducted surprise operations at various locations. The action involved the seizure of commercial buildings that had failed to pay property taxes amounting to lakhs of rupees.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *