ಶಿವಮೊಗ್ಗ (shivamogga), ನವೆಂಬರ್ 13: ಭಾವಿ ಶಿಕ್ಷಕರಾಗಿ ಹೊರಹೊಮ್ಮುವ ಬಿಎಡ್ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಬಿಫಾರ್ಮ ವಿದ್ಯಾರ್ಥಿಗಳು, ನಗರದ ಗಾಂಧಿಪಾರ್ಕ್ ಬಳಿ ಸೇರಿದರು. ನೆರೆದಿದ್ದ ಸಾರ್ವಜನಿಕರನ್ನು, ದಾರಿಹೋಕರನ್ನು ‘ಮನುಷ್ಯರಾಗೋಣ’ ಕಿರುನಾಟಕದ ಮೂಲಕ ತಮ್ಮತ್ತ ಸೆಳೆದರು.
ಈ ಸಮಾಜಕ್ಕೆ ನಾನಾ ಆಕರ್ಷಣೆಗಳ ಮೂಲಕ ಪ್ರೇತಗಳಂತೆ ಕಾಡುತ್ತಿರುವ ಆಧುನಿಕ ತಂತ್ರಜ್ಞಾನಗಳು, ಒಳ್ಳೆಯವರಂತೆ ಮುಖವಾಡ ಧರಿಸಿದವರು ನಡೆಸುವ ಪೈಶಾಚಿಕ ಕೃತ್ಯಗಳು, ಸೈಬರ್ ವಂಚನೆ, ಕುಡಿತವು ನಡೆಸುವ ಕುಟುಂಬದ ಶೋಷಣೆ. ಇಂತಹ ಸಂಕಷ್ಟಗಳಿಗೆ ಸಿಲುಕಿದವರ ನೋವಿಗೆ ದನಿಯಾಗಿ, ಶೋಷಿತರಿಗೆ ನ್ಯಾಯದ ಆಸರೆಯಾಗಿ ನಿಲ್ಲುವ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯವೈಖರಿಯನ್ನು ಜನರಿಗೆ ಪರಿಚಯಿಸಿದರು. ವೇಷಭೂಷಣ, ಸಂಭಾಷಣೆ ಹಾಗೂ ಮನಮುಟ್ಟುವ ಅಭಿನಯದ ಮೂಲಕ ಮನೆಮನೆಗೂ ಕಾನೂನಿನ ಬೆಳಕು ಎಂಬ ಸಂದೇಶವನ್ನು ಸಾರಿದರು.
ಶುಕ್ರವಾರ ಕಾನೂನು ಮತ್ತು ನ್ಯಾಯ ಹಾಗೂ ಮಾನವ ಹಕ್ಕುಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಹಾಗೂ ಬೀದಿನಾಟಕ ಪ್ರದರ್ಶನದಲ್ಲಿ ಈ ದೃಶ್ಯ ಕಂಡುಬಂದಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ನ್ಯಾಯಾಧೀಶ ಎಂ.ಎಸ್. ಸಂತೋಷ್ ಮಾತನಾಡಿ, ಕಾನೂನು ಎಂಬುದು ಕೇವಲ ಅಪರಾಧ ಅಥವಾ ನ್ಯಾಯಾಲಯದ ಪ್ರಕರಣಗಳಿಗೆ ಸೀಮಿತವಾದ ವಿಷಯವಲ್ಲ. ಅದು ಪ್ರತಿಯೊಬ್ಬ ನಾಗರಿಕನ ಬದುಕಿನ ಹಕ್ಕು, ರಕ್ಷಣೆ ಮತ್ತು ಘನತೆಯೊಂದಿಗೆ ಬೆಸೆದುಕೊಂಡಿದೆ. ಕಾನೂನಿನ ಅರಿವು ಇಲ್ಲವೆಂಬ ಕಾರಣಕ್ಕೆ ಅನ್ಯಾಯವನ್ನು ಸಹಿಸಿಕೊಂಡು ಬದುಕಬಾರದು. ಪ್ರಕರಣ ಎದುರಾದಾಗ ಮಾತ್ರ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕೆಂಬ ಮನೋಭಾವ ಬದಲಾಗಬೇಕು. ಜನಸಾಮಾನ್ಯರಿಗೆ ಕಾನೂನಿನ ಅರಿವು ಅತ್ಯಗತ್ಯ ಎಂದರು.
ನ್ಯಾಯದ ನೆರವು ಅಗತ್ಯವಿರುವವರಿಗೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಸರೆಯಾಗಿದೆ. ಪ್ರಾಧಿಕಾರದಲ್ಲಿ ನಿಯಮಾನುಸಾರ ಆಯ್ಕೆಯಾದ ನುರಿತ ವಕೀಲರ ತಂಡವಿದ್ದು, ನ್ಯಾಯಾಲಯಗಳಲ್ಲಿ ಮುಂಚೂಣಿ ಸೇವಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ಕಚೇರಿಗೆ ಭೇಟಿ ನೀಡಲು ಸಾಧ್ಯವಾಗದವರು, ಸಹಾಯವಾಣಿ ಮೂಲಕವೂ ಕಾನೂನು ಸಲಹೆ ಮತ್ತು ನೆರವು ಪಡೆಯಬಹುದು. ಲೋಕ ಅದಾಲತ್ನಲ್ಲಿ ಉಭಯ ಪಕ್ಷಕಾರರು, ಪರಸ್ಪರ ಮಾತುಕತೆ ಮೂಲಕ ವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದ್ದು, ಮಧ್ಯಸ್ಥಿಕೆ ವ್ಯವಸ್ಥೆಯೂ ಇದೆ. ನ್ಯಾಯವನ್ನು ಜನರ ಬಳಿಗೆ ಕೊಂಡೊಯ್ಯುವ ಮಹತ್ವದ ಕಾರ್ಯವನ್ನು ಪ್ರಾಧಿಕಾರ ಮಾಡುತ್ತಿದೆ ಎಂದು ತಿಳಿಸಿದರು.
ನಾಳಿನ ಮಕ್ಕಳಿಗೆ ನೀವು ಕೇವಲ ಪಾಠ ಕಲಿಸುವ ಶಿಕ್ಷಕರಾಗಬಾರದು. ಬದುಕಿನ ಮೌಲ್ಯಗಳನ್ನು ಪರಿಚಯಿಸುವ ಮಾರ್ಗದರ್ಶಕರಾಗಬೇಕು. ಮಕ್ಕಳು ನಿಮ್ಮನ್ನು ನೋಡಿ ಒಳ್ಳೆಯತನವನ್ನು ಕಲಿಯಬೇಕು. ಶಿಸ್ತು, ಸಂಯಮ, ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯತೆ ಶಿಕ್ಷಣದ ಅವಿಭಾಜ್ಯ ಅಂಗಗಳಾಗಬೇಕು. ಉತ್ತಮ ಸಮಾಜ ನಿರ್ಮಾಣದ ಅಡಿಪಾಯ ಶಾಲೆಗಳಲ್ಲಿಯೇ ರೂಪುಗೊಳ್ಳುತ್ತದೆ. ಶ್ರೇಷ್ಠತೆಯ ಹಾದಿಯಲ್ಲಿ ಮೌಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎನ್.ಕೆ. ಚಿದಾನಂದ ಮಾತನಾಡಿ, ಭಾರತದ ಇತಿಹಾಸವನ್ನು ಅವಲೋಕಿಸಿದಾಗ ಪ್ರಾಚೀನ ಕಾಲದಿಂದಲೂ ಈ ನೆಲದಲ್ಲಿ ನ್ಯಾಯ, ಧರ್ಮ ಮತ್ತು ಆಡಳಿತ ವ್ಯವಸ್ಥೆಗಳ ಕುರಿತು ಸ್ಪಷ್ಟವಾದ ಪರಿಕಲ್ಪನೆಗಳಿದ್ದವು ಎಂಬುದು ತಿಳಿದುಬರುತ್ತದೆ. ಅಶೋಕನ ಕಾಲಘಟ್ಟದ ಜನಪದ ವ್ಯವಸ್ಥೆಯಿಂದ ಹಿಡಿದು ವಿವಿಧ ರಾಜಪ್ರಭುತ್ವಗಳ ಆಡಳಿತದವರೆಗೆ ಸಮಾಜದ ಸಂಘಟನೆ ಮತ್ತು ಜನಜೀವನದಲ್ಲಿ ನಿಯಮ-ನ್ಯಾಯಗಳ ಮಹತ್ವ ಗುರುತಿಸಲ್ಪಟ್ಟಿತ್ತು. ಕಾನೂನಿನ ಅರಿವು ಮತ್ತು ನ್ಯಾಯದ ಪರಿಕಲ್ಪನೆ ನಮ್ಮ ನಾಗರಿಕತೆಯ ಪರಂಪರೆಯಲ್ಲಿಯೇ ಹಾಸುಹೊಕ್ಕಾಗಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಾಧಿಕಾರಿ ಡಾ. ಮಂಜು ಎನ್.ಡಿ., ಡಾ. ಶರಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Legal Services Day: Legal Awareness Through the Street Play ‘Let Us Become Human’ | Shedding the Light of Wisdom in a World of Deception | Shivamogga, November 13: B.Ed. students—future educators—and B.Pharma students—future healthcare professionals—gathered near Gandhi Park in the city. Through a short street play titled ‘Let Us Become Human’ (*Manushyaragonna*), they drew the attention of the public and passersby.
The performance addressed various societal challenges: the haunting influence of modern technology (which acts like a specter through its various allurements), the diabolical acts committed by individuals wearing masks of goodness, cyber fraud, and the exploitation of families caused by alcoholism. The students highlighted the role of the Legal Services Authority, which serves as a voice for those suffering from such crises and provides a pillar of justice for the exploited. Through their costumes, dialogue, and poignant acting, they conveyed the message: “Bringing the light of the law to every household.”
This scene unfolded during the National Legal Services Day celebrations and the street play performance held on Friday. The event was organized jointly by the Department of Law, Justice and Human Rights, the District Legal Services Authority, the District Bar Association, the Police Department, the City Corporation, the National Education Society, and the National College of Education.

