ಶಿವಮೊಗ್ಗ (shivamogga), ನವೆಂಬರ್ 23: ಪಾಲಿಕೆ ವ್ಯಾಪ್ತಿಯ ಎಲ್ಲ ಸ್ಥಿರಾಸ್ತಿಗಳಿಗೆ ‘ಇ-ಆಸ್ತಿ’ (ಇ-ಖಾತಾ) ಮಾಡಿಸುವುದು ಕಡ್ಡಾಯವಾಗಿದೆ. ಸ್ಥಿರಾಸ್ತಿ ಮಾಲೀಕರ ಅನುಕೂಲಕ್ಕಾಗಿ ನಗರದ ವಿವಿಧ ವಾರ್ಡ್ ಗಳಲ್ಲಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ‘ಇ-ಖಾತಾ ಮೇಳ’ ಆಯೋಜಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು ತಿಳಿಸಿದ್ಧಾರೆ.
ಆಸ್ತಿ ಮಾಲೀಕರು ಪ್ರಜಾ ಸೇವಾ ಕೇಂದ್ರ (ಕರ್ನಾಟಕ ಒನ್ / ಶಿವಮೊಗ್ಗ ಒನ್) ಗಳಲ್ಲಿ ಅಥವಾ ಪಾಲಿಕೆಯ 3 ವಲಯ ಕಚೇರಿಗಳಲ್ಲಿ ಖುದ್ದಾಗಿ ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಇಲ್ಲವೆ ಪಾಲಿಕೆ ಸಿಬ್ಬಂದಿಗಳು ಮನೆ – ಮನೆಗೆ ಭೇಟಿ ನೀಡಿದಾಗ ಸೂಕ್ತ ದಾಖಲೆಗಳನ್ನು ಒದಗಿಸಿ ಇ-ಖಾತಾ ಪಡೆಯಬಹುದಾಗಿದೆ. ನಾಗರಿಕರ ಅನುಕೂಲಕ್ಕಾಗಿ ವಾರ್ಡ್’ವಾರು ‘ಇ-ಖಾತಾ ಮೇಳ’ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮೇಳಗಳ ವಿವರ : ವಾರ್ಡ್ 1 ಕ್ಕೆ ಸಂಬಂಧಿಸಿದಂತೆ 24/11/2026 ರಂದು ಜೆ ಹೆಚ್ ಪಟೇಲ್ ಬಡಾವಣೆಯ ತಮಿಳ್ ತಾಯ್ ಸಮುದಾಯ ಭವನ ಸಮೀಪದ ಗುರುಸಿದ್ದೇಶ್ವರ ಮಠದಲ್ಲಿ ಆಯೋಜಿಸಲಾಗಿದೆ. ಹಾಗೆಯೇ 25-11-2026 ರಂದು ವಾರ್ಡ್ 14 ಕ್ಕೆ ಮಲವಗೊಪ್ಪದ ಬಿ ಹೆಚ್ ರಸ್ತೆಯ ಚನ್ನಬಸವೇಶ್ವರ ಸಮುದಾಯ ಭವನ
26-11-2026 ರಂದು ವಾರ್ಡ್ : 26 ಕ್ಕೆ ಗೋಪಾಳದ ದ್ರೌಪದಮ್ಮ ದೇವಾಲಯ, 2-12-2026 ರಂದು ವಾರ್ಡ್ 08 ಕ್ಕೆ ಶಾಂತಿನಗರದ ಸರ್ಕಾರಿ ಶಾಲೆ ಆವರಣ, 3-12-2026 ರಂದು ವಾರ್ಡ್ ಸಂಖ್ಯೆ : 20, 21,22 ಕ್ಕೆ ರಾಮಣ್ಣ ಶ್ರೇಷ್ಠಿ ಪಾರ್ಕ್ ಆವರಣ,
05-12-026 ರಂದು ವಾರ್ಡ್ ಸಂಖ್ಯೆ : 18 ಹಾಗೂ 19 ಕ್ಕೆ ಕೋಟೆ ರಸ್ತೆಯ ಕೋಟೆ ಮಾರಿಕಾಂಬಾ ದೇವಾಲಯದ ಸಮುದಾಯ ಭವನ,
09-12-2026 ರಂದು ವಾರ್ಡ್ ಸಂಖ್ಯೆ : 34 ಕ್ಕೆ ಕಲ್ಲಳ್ಳಿಯ ಕರಿಯಣ್ಣ ಬಿಲ್ಡಿಂಗ್ ಸಮೀಪದ ಕೆಹೆಚ್’ಬಿ ಕಚೇರಿ ಆವರಣ, 11-12-2026 ರಂದು ವಾರ್ಡ್ ಸಂಖ್ಯೆ : 10 ಹಾಗೂ 11 ಕ್ಕೆ ಟ್ಯಾಂಕ್ ಮೊಹಲ್ಲಾದ ಮಾರಿಕಾಂಬಾ ದೇವಾಲಯ ಆವರಣ, 16-12-2026 ರಂದು ವಾರ್ಡ್ ಸಂಖ್ಯೆ : 03, 04, 06 ಹಾಗೂ 07 ಕ್ಕೆ ರವೀಂದ್ರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ,
17-12-2026 ರಂದು ವಾರ್ಡ್ ಸಂಖ್ಯೆ : 27 ಕ್ಕೆ ಆರ್’ಎಂಎಲ್ ನಗರದ ಭಾರತೀಯ ಸಭಾಭವನದಲ್ಲಿ, 18-12-2026 ರಂದು ವಾರ್ಡ್ ಸಂಖ್ಯೆ : 30 ನಾಗರಾಜಪುರ ಬಡಾವಣೆಯ ಪ್ರಸನ್ನ ಗಣಪತಿ ದೇವಾಲಯ ಆವರಣ, 22-12-2026 ರಂದು ವಾರ್ಡ್ ಸಂಖ್ಯೆ : 35 ಕ್ಕೆ ಗೋಪಾಳಗೌಡ ಬಡಾವಣೆಯ ಅಗಮುಡಿ ಕಲ್ಯಾಣ ಮಂದಿರ ಆವರಣ,
23-12-2026 ರಂದು ವಾರ್ಡ್ ಸಂಖ್ಯೆ : 32, 33 ಕ್ಕೆ ಹೊಸಮನೆಯ ವೀಣಾ ಶಾರದಾ ಶಾಲೆ ಆವರಣ, 24-12-2026 ರಂದು ವಾರ್ಡ್ ಸಂಖ್ಯೆ : 16 ಹಾಗೂ 17 ಕ್ಕೆ ವಿದ್ಯಾನಗರ ಎಡಭಾಗದ 6 ನೇ ತಿರುವಿನ ಚೌಡೇಶ್ವರಿ ಸಮುದಾಯ ಭವನದ ಆವರಣ, 29-12-2026 ರಂದು ವಾರ್ಡ್ ಸಂಖ್ಯೆ : 05 ಹಾಗೂ 29 ಕ್ಕೆ ಕಾಮಾಕ್ಷಿ ಬೀದಿಯ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿಯ ಗಣಪತಿ ದೇವಾಲಯದ ಸಮೀಪ,
30-12-2026 ರಂದು ವಾರ್ಡ್ ಸಂಖ್ಯೆ : 34 ಕ್ಕೆ ಕರಿಯಣ್ಣ ಬಿಲ್ಡಿಂಗ್ ಸಮೀಪದ ಕೆಹೆಚ್’ಬಿ ಕಚೇರಿ ಆವರಣ, 31-12-2026 ರಂದು ವಾರ್ಡ್ ಸಂಖ್ಯೆ : 28 ಕ್ಕೆ ಜಿಎಸ್’ಕೆಎಂ ರಸ್ತೆಯ ಗೌಡ ಸಾರಸ್ವತ ಕಲ್ಯಾಣ ಮಂದಿರ ಆವರಣದಲ್ಲಿ ಇ-ಖಾತಾ ಮೇಳಗಳು ನಡೆಯಲಿವೆ.
ಇ-ಖಾತಾ ಮಾಡಿಸಲು ಈ ದಾಖಲೆಗಳು ಕಡ್ಡಾಯ…
- ಸ್ಥಿರಾಸ್ತಿ ಮಾಲೀಕತ್ವ ಸಾಬೀತುಪಡಿಸುವ ದಾಖಲೆ (ನೊಂದಾಯಿತ ಆಸ್ತಿ ದಾಖಲಾತಿ ಪತ್ರ)
- ಸ್ಥಿರಾಸ್ತಿ ಮಾಲೀಕರ ಭಾವಚಿತ್ರ ಹಾಗೂ ಆಧಾರ್ ಕಾರ್ಡ್
- ಸ್ಥಿರಾಸ್ತಿ ಮಾಲೀಕರ ವೋಟರ್ ಐಡಿ
- ಕಟ್ಟಡ – ನಿವೇಶನದ ಭಾವಚಿತ್ರ
- ಕಟ್ಟಡ ಪರವಾನಿಗೆ ಪ್ರತಿ (ಇದ್ದಲ್ಲಿ)
- ವಿದ್ಯುತ್ ಬಿಲ್
- ಚಾಲ್ತಿ ಸಾಲಿನ ಕಂದಾಯ ಪಾವತಿ ರಶೀದಿ
- ಇಸಿ ಕಡ್ಡಾಯವಿರುವುದಿಲ್ಲ. ಇಸಿ ನೀಡಿದ್ದಲ್ಲಿ ಟ್ರಾನ್ಸ್ಕೆಟೇಬಲ್ ಇ – ಆಸ್ತಿ ನೀಡಲಾಗುವುದು
- ಇಸಿ ಇಲ್ಲದಿದ್ದಲ್ಲಿ ನಾನ್ ಟ್ರಾನ್ಸ್ಕೆಟೇಬಲ್ ಇ – ಆಸ್ತಿ ನೀಡಲಾಗುವುದು
Attention, Citizens of Shivamogga | Major ‘e-Aasthi’ (e-Khata) Campaign by the City Corporation: When and Where?
Shivamogga, November 23: Obtaining an ‘e-Aasthi’ (e-Khata) is mandatory for all immovable properties within the City Corporation’s jurisdiction. Corporation Commissioner Mayannagowda stated that an ‘e-Khata Mela’ (e-Khata Fair) is being organized across various city wards during the months of November and December for the convenience of property owners.
Property owners may apply for an e-Khata by visiting a ‘Praja Seva Kendra’ (Karnataka One / Shivamogga One) center or any of the Corporation’s three zonal offices. Alternatively, they can provide the necessary documents to Corporation staff when they visit their homes. The ‘e-Khata Mela’ has been organized on a ward-wise basis to facilitate the process for citizens.

