ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಬಿ. ಶಿವಸ್ವಾಮಿ, ಉಪಾಧ್ಯಕ್ಷರಾಗಿ ಕೆ. ಚನ್ನಬಸಪ್ಪ ಆಯ್ಕೆ

ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಬಿ ಶಿವಸ್ವಾಮಿ ಉಪಾಧ್ಯಕ್ಷರಾಗಿ ಕೆ ಚನ್ನಬಸಪ್ಪ ಆಯ್ಕೆ

ಬೆಂಗಳೂರು, ಆ. 26: ಕರ್ನಾಟಕ ಆಡಳಿತ ಸೇವಾ ಅಧಿಕಾರಿ (ಕೆಎಎಸ್) ಗಳ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಶನಿವಾರ ನಡೆಯಿತು. ಈ ವೇಳೆ 2023-24 ನೇ ಸಾಲಿಗೆ ಸಂಘದ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳ ಅವಿರೋಧ ಆಯ್ಕೆ ನಡೆಸಲಾಗಿದೆ.

ಅಧ್ಯಕ್ಷರಾಗಿ ಬಿ. ಶಿವಸ್ವಾಮಿ, ಉಪಾಧ್ಯಕ್ಷರಾಗಿ ಕೆ. ಚನ್ನಬಸಪ್ಪ, ಕಾರ್ಯದರ್ಶಿಯಾಗಿ ಸಿ. ಎಲ್. ಶಿವಕುಮಾರ್, ಜಂಟಿ ಕಾರ್ಯದರ್ಶಿಯಾಗಿ ಸಿ. ಮದನ್ ಮೋಹನ್ ಹಾಗೂ ಖಜಾಂಚಿಯಾಗಿ ಆರತಿ ಆನಂದ್ ಅವರು ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎನ್. ಮಹೇಶ್ ಬಾಬು, ಡಾ. ರವಿ ಎಂ. ತಿರ್ಲಾಪುರ, ಎಸ್. ಎಂ. ಆಶಾ ಪರ್ವೀನ್, ಡಾ. ಎಂ. ದಾಸೇಗೌಡ, ಎಲಿಷ ಆಂಡ್ರೂಸ್, ಡಾ. ನಾಗೇಂದ್ರ ಎಫ್. ಹೊನ್ನಳ್ಳಿ, ವಿ. ಆರ್. ಶೈಲಜಾ, ಎಂ. ಎಸ್. ಎನ್. ಬಾಬು, ಸಿ. ಎನ್. ಮಂಜುನಾಥ್,

ಬಸವರಾಜು, ಡಾ. ಸಂತೋಷ ಬಿರಾದಾರ, ಬಿ. ತೇಜಸ್ವಿನಿ, ಎನ್. ರಮೇಶ್, ಡಿ. ಬಿ. ನಟೇಶ್, ಹೆಚ್. ಜಿ. ಚಂದ್ರಶೇಖರಯ್ಯ, ಕೆ. ಎನ್. ಪ್ರವೀಣ್, ಡಾ. ಹೆಚ್. ಎಲ್. ನಾಗರಾಜು, ಡಾ. ಕೆ. ದಾಕ್ಷಾಯಿಣಿ, ಡಾ. ಬಿ. ಆರ್. ಹರೀಶ್ ನಾಯ್ಕ್, ರಮೇಶ್ ಪಿ. ಕೋನರೆಡ್ಡಿ, ಟಿ. ಯೋಗೇಶ್, ಎಂ. ಕೆ. ಜಗದೀಶ್, ಜಿ. ಆರ್. ನಟರಾಜ್, ಸ್ವಾಮಿ ಬಿ. ಎನ್., ಮಂಜುನಾಥ್ ಜೆ ಅವರು ಆಯ್ಕೆಯಾಗಿದ್ದಾರೆ.

ವಿಶೇಷ ಆಹ್ವಾನಿತರಾಗಿ ಅನಿತಾಲಕ್ಷ್ಮೀ ಬಿ. ಅಭಿಜಿನ್, ಪ್ರಮೋದ್ ಪಾಟೀಲ್ ಪಿ, ಪ್ರಸನ್ನಕುಮಾರ್ ಕೆ., ಸೋಮಶೇಖರ್, ಬಿ. ಎಸ್. ರಾಜೀವ್, ಶೀತಲ್ ಟಿ. ಎಸ್., ಅನಿತಾ ಸಿ, ರಾಜೇಶ್ ಹೆಚ್. ಡಿ., ಲೋಕೇಶ್ ಎಸ್. ವಿ., ಕಾಂತರಾಜು ಕೆ. ಜೆ, ರೋಹಿಣಿ ವಿ. ಜೆ., ಚಿಕ್ಕಪ್ಪ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *