Shimoga Municipal Corporation Area Revision: Why the Negligence of the People's Representatives?! Reporter : B. Renukesh shimoga palike | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಜನಪ್ರತಿನಿಧಿಗಳ ನಿರ್ಲಕ್ಷ್ಯವೇಕೆ?!

shimoga | ಬೆಂಗಳೂರು ಮಾದರಿ ಶಿವಮೊಗ್ಗದ ಮೂರು ಕಡೆ ಆರಂಭವಾಗಲಿವೆ ಪಾಲಿಕೆ ವಲಯ ಕಚೇರಿಗಳು!

ಶಿವಮೊಗ್ಗ (shivamogga), ಜ. 21: ಬೆಂಗಳೂರು ಬಿಬಿಎಂಪಿ ಮಾದರಿಯಲ್ಲಿ, ಶಿವಮೊಗ್ಗ ನಗರದ ಮೂರು ಕಡೆ ಮಹಾನಗರ ಪಾಲಿಕೆ ವಲಯ ಕಚೇರಿ ತೆರೆಯಲಾಗುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇನ್ನೂ ಕೆಲ ದಿನಗಳಲ್ಲಿಯೇ ಅಧಿಕೃತವಾಗಿ ಕಚೇರಿಗಳು ಕಾರ್ಯಾರಂಭ ಕೂಡ ಮಾಡಲಿವೆ!

ಶಿವಮೊಗ್ಗ ನಗರಸಭೆ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ನಂತರ, ನಾಗರೀಕರ ಅನುಕೂಲಕ್ಕಾಗಿ ನಗರದ ವಿವಿಧೆಡೆ ಪಾಲಿಕೆ ವಲಯ ಕಚೇರಿ ನಿರ್ಮಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಪಾಲಿಕೆಯಾಗಿ ದಶಕ ಕಳೆದರೂ ಇಲ್ಲಿಯವರೆಗೂ ವಲಯ ಕಚೇರಿ ತೆರೆಯಲು ಕ್ರಮಕೈಗೊಂಡಿರಲಿಲ್ಲ.

ಎ ಆರ್ ರವಿ, ಚಾರುಲತಾ ಸೋಮಲ್ ಅವರು ಆಯುಕ್ತರಾಗಿದ್ದ ವೇಳೆ ವಲಯ ಕಚೇರಿ ತೆರೆಯುವ ನಿಟ್ಟಿನಲ್ಲಿ ಕೆಲ ಪ್ರಯತ್ನಗಳಾಗಿದ್ದವು. ಆದರೆ ನಂತರ ಸದರಿ ಪ್ರಸ್ತಾಪ ನೆನೆಗುದಿಗೆ ಬಿದ್ದಿತ್ತು. ಇದರಿಂದ ನಗರದ ನಾಗರೀಕರು ಪಾಲಿಕೆಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ಹಾಲಿ ಪಾಲಿಕೆ ಕಚೇರಿಗೆ ಎಡತಾಕುವಂತಾಗಿತ್ತು.

ಇದರಿಂದ ಹಾಲಿ ಪಾಲಿಕೆ ಕಚೇರಿ ಸಂಕೀರ್ಣದ ಮೇಲೆ ಒತ್ತಡ ಹೆಚ್ಚಾಗುವಂತಾಗಿತ್ತು. ಇದರಿಂದ ಕಚೇರಿ ಹಾಗೂ ನಾಗರೀಕರ ಕೆಲಸಕಾರ್ಯಗಳ ಮೇಲೆ ಪರಿಣಾಮ ಬೀರುವಂತಾಗಿತ್ತು. ಇದೀಗ ನಾಗರೀಕರ ಅನುಕೂಲಕ್ಕಾಗಿ ಮೂರು ಕಡೆ ವಲಯ ಕಚೇರಿಗಳ ನಿರ್ಮಾಣ ಮಾಡಲಾಗುತ್ತಿದೆ.

ಈ ವಿಷಯವನ್ನು ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಕೂಡ ಖಚಿತಪಡಿಸಿದ್ದಾರೆ. ‘ನೆಹರು ರಸ್ತೆಯಲ್ಲಿರುವ ಆಶ್ರಯ ಸಮಿತಿ ಕಟ್ಟಡ, ಇಮಾಮ್ ಬಾಡಾ ಬಡಾವಣೆ ಸಮೀಪದ ತುಂಗಾ ನದಿ ಸ್ಥಳದಲ್ಲಿರುವ ಕಟ್ಟಡ ಹಾಗೂ ವಿನೋಬನಗರದಲ್ಲಿ ವಲಯ ಕಚೇರಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

‘ಸದರಿ ಮೂರು ಕಟ್ಟಡಗಳು ಪಾಲಿಕೆಗೆ ಸೇರಿದ್ದಾಗಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟಾರೆ ಸರಿಸುಮಾರು 1.7 ಲಕ್ಷ ಖಾತೆಗಳಿವೆ. ಮೂರು ವಲಯಕ್ಕೆ ಸಮಾನವಾಗಿ ಖಾತೆಗಳ ಹಂಚಿಕೆ ಮಾಡಲಾಗುವುದು. ನಗರದ ಯಾವ್ಯಾವ ಪ್ರದೇಶಗಳು, ಯಾವ್ಯಾವ ವಲಯ ಕಚೇರಿ ವ್ಯಾಪ್ತಿಗೆ ಬರಲಿವೆ ಎಂಬುವುದರ ಸಮಗ್ರ ಮಾಹಿತಿಯನ್ನು ಸಾರ್ವಜನಿಕರ ಗಮನಕ್ಕೆ ತರಲಾಗುವುದು. ಕಚೇರಿಗಳಲ್ಲಿ ಫಲಕ ಹಾಕಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

‘ಈಗಾಗಲೇ ಸದರಿ ಕಟ್ಟಡದಲ್ಲಿ ಸಕಲ ಸೌಲಭ್ಯ ಕಲ್ಪಿಸಲಾಗಿದೆ. ಇಷ್ಟರಲ್ಲಿಯೇ ವಲಯ ಕಚೇರಿಗಳು ಕಾರ್ಯಾರಂಭ ಮಾಡಲಿವೆ. ಪ್ರಾರಂಭದಲ್ಲಿ ರೆವಿನ್ಯೂ, ಎಂಜಿನಿಯರಿಂಗ್ ವಿಭಾಗಗಳು ಸದರಿ ಕಚೇರಿಗಳಲ್ಲಿ ಕಾರ್ಯನಿರ್ವಹಣೆ ಮಾಡಲಿವೆ. ತದನಂತರ ಇತರೆ ವಿಭಾಗಗಳು ಕಾರ್ಯಾರಂಭ ಮಾಡಲಿವೆ. ಕಚೇರಿಗಳ ಸ್ಥಾಪನೆಯಿಂದ ನಾಗರೀಕರಿಗೆ ಸಾಕಷ್ಟು ಅನುಕೂಲವಾಗಲಿದೆ’ ಎಂದು ಇದೇ ವೇಳೆ ಕವಿತಾ ಯೋಗಪ್ಪನವರ್ ಅವರು ಹೇಳಿದ್ದಾರೆ.

ಶಿವಮೊಗ್ಗ ನಗರದ ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡಲು, ಬೆಂಗಳೂರು ಬಿಬಿಎಂಪಿ ಮಾದರಿಯಲ್ಲಿ ನಗರದ ವಿವಿಧೆಡೆ ಹೊಸದಾಗಿ ಪಾಲಿಕೆ ವಲಯ ಕಚೇರಿ ತೆರೆಯಲಾಗುತ್ತಿದೆ. ಇದರಿಂದ ನಾಗರೀಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಇದೇ ರೀತಿಯಲ್ಲಿ ಸರಿಸುಮಾರು ಮೂರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯೂ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಾಗಿದೆ. ಜೊತೆಗೆ ಹಾಲಿಯಿರುವ ಪಾಲಿಕೆಯ 35 ವಾರ್ಡ್ ಗಳನ್ನು ವ್ಯಾಪ್ತಿ ಹಾಗೂ ಜನಸಂಖ್ಯೆಗೆ ಅನುಗುಣವಾಗಿ 50 ರಿಂದ 60 ವಾರ್ಡ್ ಗಳಗಾಗಿ ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ಹಾಗೂ ಪಾಲಿಕೆ ಆಡಳಿತ ಅಗತ್ಯ ತ್ವರಿತ ನಿರ್ಧಾರ ಕೈಗೊಳ್ಳಬೇಕು ಎಂದು ನಾಗರೀಕರು ಆಗ್ರಹಿಸುತ್ತಾರೆ.

Shimoga, January 21: On the model of Bangalore BBMP, Metropolitan Corporation Zonal Office is being opened on three sides of Shimoga city. If everything goes according to plan, the offices will officially open in a few days!

It was said that after the Shimoga Municipal Corporation was upgraded to a Corporation, Corporation Zonal Offices would be constructed in various parts of the city for the benefit of the citizens. But even after a decade as a corporation, no action has been taken to open a zonal office till now.

Corporation Commissioner Kavitha Yogappanavar also confirmed this matter. she said that the Nehru Road building, the building at Tunga River near Imam Bada extension and Vinobanagar extension, Corporation Zonal Office is being opened.

Shivamogga Municipal Corporation Shelter Department Officer Caught in Lokayukta Trap! ಶಿವಮೊಗ್ಗ ಮಹಾನಗರ ಪಾಲಿಕೆ ಆಶ್ರಯ ವಿಭಾಗದ ಅಧಿಕಾರಿ ಲೋಕಾಯುಕ್ತ ಬಲೆಗೆ! Previous post shimoga | ಶಿವಮೊಗ್ಗ : ಲೋಕಾಯುಕ್ತ ಸಾರ್ವಜನಿಕ ಕುಂದುಕೊರತೆ ಸಭೆ – ಯಾವಾಗ? ಎಲ್ಲೆಲ್ಲಿ?
Which trains will be affected? What is the Railway Department's announcement? ಯಾವೆಲ್ಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ? ರೈಲ್ವೆ ಇಲಾಖೆ ಪ್ರಕಟಣೆಯೇನು? Next post shimoga | ಶಿವಮೊಗ್ಗ– ಚಿಕ್ಕಮಗಳೂರು ಪ್ಯಾಸೆಂಜರ್ ರೈಲು ಸಂಚಾರದಲ್ಲಿ ವ್ಯತ್ಯಯ : ಯಾವಾಗ? ಕಾರಣವೇನು?