shimoga | ಪೊಲೀಸ್ ಇಲಾಖೆ ಇತಿಹಾಸದಲ್ಲೇ ಹೊಸ ಪ್ರಯೋಗ : ಗಮನ ಸೆಳೆದ ಶಿವಮೊಗ್ಗ ಟ್ರಾಫಿಕ್ ಪೊಲೀಸರ ಜಾಗೃತಿ ಪ್ರದರ್ಶನ! shimoga | A new experiment in the history of the police department: Shimoga traffic police's awareness show!

shimoga | ಪೊಲೀಸ್ ಇಲಾಖೆ ಇತಿಹಾಸದಲ್ಲೇ ಹೊಸ ಪ್ರಯೋಗ : ಗಮನ ಸೆಳೆದ ಶಿವಮೊಗ್ಗ ಟ್ರಾಫಿಕ್ ಪೊಲೀಸರ ಜಾಗೃತಿ ಪ್ರದರ್ಶನ!

ಶಿವಮೊಗ್ಗ (shivamogga), ಜ. 31 : ರಾಜ್ಯದ ಪೊಲೀಸ್ ಇಲಾಖೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ, ಶಿವಮೊಗ್ಗ ನಗರದ ಟ್ರಾಫಿಕ್ ಪೊಲೀಸರು ಹಮ್ಮಿಕೊಂಡಿರುವ ‘ರಸ್ತೆ ಸಂಚಾರ ನಿಯಮಗಳ ಜಾಗೃತಿ ಪ್ರದರ್ಶನ – 2025’ ವಿನೂತನ ಕಾರ್ಯಕ್ರಮ ನಾಗರೀಕರ ಗಮನ ಸೆಳೆಯುತ್ತಿದೆ.

ಇಂದಿನಿಂದ ಎರಡು ದಿನಗಳ ಕಾಲ, ಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ಪೊಲೀಸ್ ಇಲಾಖೆ ಗೆಸ್ಟ್ ಹೌಸ್ ಆವರಣದಲ್ಲಿ  ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಪ್ರದರ್ಶನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಎ ಜಿ ಕಾರ್ಯಪ್ಪ, ಡಿವೈಎಸ್ಪಿ ಬಾಬು ಆಂಜನಪ್ಪ, ಸಂಜೀವ್ ಕುಮಾರ್,

ಟ್ರಾಫಿಕ್ ಸರ್ಕಲ್  ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್, ಸಬ್ ಇನ್ಸ್’ಪೆಕ್ಟರ್ ಗಳಾದ ತಿರುಮಲೇಶ್, ಭಾರತಿ, ನವೀನ್ ಕುಮಾರ್ ಮಟ್ಪದ್, ಶಿವಣ್ಣನವರ್ ಸೇರಿದಂತೆ ಟ್ರಾಫಿಕ್ ಪೊಲೀಸರು ಉಪಸ್ಥಿತರಿದ್ದರು.

ಏನೀದು ಪ್ರದರ್ಶನ?: ಸರ್ವೇ ಸಾಮಾನ್ಯವಾಗಿ ಪೊಲೀಸ್ ಇಲಾಖೆಯು ಸಂಚಾರಿ ನಿಯಮಗಳ ಪಾಲನೆ ಕುರಿತಂತೆ ಜನಜಾಗೃತಿ ಮೂಡಿಸಲು ಸಭೆ – ಸಮಾರಂಭ ಆಯೋಜನೆ, ರಸ್ತೆ-ಸರ್ಕಲ್ ಗಳಲ್ಲಿ ಎಚ್ಚರಿಕೆಯ ಬರಹ ಬರೆಯಿಸುವುದು ಸೇರಿದಂತೆ ನಾನಾ ಜನಜಾಗೃತಿ ಕಾರ್ಯಕ್ರಮ ನಡೆಸುತ್ತದೆ.

ಆದರೆ ಶಿವಮೊಗ್ಗದ ಪೂರ್ವ ಹಾಗೂ ಪಶ್ಚಿಮ  ಟ್ರಾಫಿಕ್ ಠಾಣೆ ಪೊಲೀಸರು, ಈ ಬಗ್ಗೆ ವಸ್ತು ಪ್ರದರ್ಶನ ಮಾದರಿಯ ವ್ಯವಸ್ಥೆಯನ್ನೇ ಮಾಡಿದ್ದಾರೆ. 16 ಕೌಂಟರ್ ಗಳನ್ನು ತೆರೆದಿದ್ದಾರೆ. ಪ್ರತಿಯೊಂದು ಕೌಂಟರ್ ನಲ್ಲಿ ಸಂಚಾರಿ ನಿಯಮಗಳ ಪಾಲನೆಗೆ ಸಂಬಂಧಿಸಿದ ಮಾಹಿತಿ ನೀಡುವ ವ್ಯವಸ್ಥೆ ಮಾಡಿದ್ದಾರೆ.

ಅಪಘಾತಕ್ಕೀಡಾದ ಬೈಕ್ ಸೇರಿದಂತೆ ಕೆಲ ವಾಹನಗಳನ್ನು ಕೂಡ ಪ್ರದರ್ಶನದಲ್ಲಿಟ್ಟಿದ್ದಾರೆ. ಯಾವ ಕಾರಣದಿಂದ ಅಪಘಾತವಾಗಲು ಕಾರಣವಾಗಿದೆ ಎಂಬ ವಿವರಗಳನ್ನು ಕೂಡ ಹಾಕಿದ್ದಾರೆ. ಅಪಘಾತ ಸಂಭವಿಸದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು, ಅಪಘಾತವಾದ ನಂತರ ವಹಿಸಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡುವ ಕಾರ್ಯ ಮಾಡಿದ್ದಾರೆ.

ಸುಗಮ ವಾಹನ ಸಂಚಾರಕ್ಕೆ ಟ್ರಾಫಿಕ್ ಪೊಲೀಸರು ಬಳಕೆ ಮಾಡುವ ವಿವಿಧ ವಸ್ತುಗಳನ್ನು ಪ್ರದರ್ಶನದಲ್ಲಿಡಲಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿದರೆ ವಿಧಿಸಲಾಗುವ ದಂಡದ ಪ್ರಮಾಣವೆಷ್ಟು, ಯಾವ್ಯಾವ ಉಲ್ಲಂಘನೆಗೆ ಎಷ್ಟೆಷ್ಟು ದಂಡ ವಿಧಿಸಲಾಗುತ್ತದೆ ಎಂಬಿತ್ಯಾದಿ ವಿವರಗಳನ್ನು ಪ್ರದರ್ಶನದಲ್ಲಿ ನಾಗರೀಕರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ.

ಇದರ ಜೊತೆಗೆ ಸುರಕ್ಷಿತ ಹೆಲ್ಮೆಟ್ ಪ್ರದರ್ಶನ, ಆರೋಗ್ಯ ಇಲಾಖೆಗೆ ಸಂಬಂಧಿಸಿದ ಕೌಂಟರ್, ಆರ್’ಟಿಓ ಇಲಾಖೆ ಕೌಂಟರ್, ಮಾದಕ ವಸ್ತು – ಸೈಬರ್ ಅಪರಾಧಗಳ ತಡೆ ಸೇರಿದಂತೆ ವಿವಿಧ ಕೌಂಟರ್ ಗಳನ್ನು ಕೂಡ ತೆರೆಯಲಾಗಿದೆ. ಉಳಿದಂತೆ ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆ ನೀಡುವುದರಿಂದ ಉಂಟಾಗುವ ಪರಿಣಾಮ,

ಪ್ರಥಮ ಚಿಕಿತ್ಸೆ, ಸ್ಮಾರ್ಟ್ ಸಿಟಿ ಕ್ಯಾಮರಾಗಳ ಕಾರ್ಯನಿರ್ವಹಣೆ ಮತ್ತು ದಂಡ ವಿಧಿಸುವಿಕೆ ಕಾರ್ಯವಿಧಾನ, ಡ್ರಂಕ್ ಅಂಡ್ ಡ್ರೈವ್, ವಾಹನ ವಿಮೆ, ವಾಹನಗಳ ದಾಖಲಾತಿ, ಸಿಗ್ನಲ್ ಗಳ ಬಗ್ಗೆ ಮಾಹಿತಿ ಸೇರಿದಂತೆ ಸಂಚಾರಿ ನಿಯಮಗಳಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿ ನಾಗರೀಕರಿಗೆ ನೀಡುವ ವ್ಯವಸ್ಥೆಯನ್ನು ಪ್ರದರ್ಶನದಲ್ಲಿ ಮಾಡಲಾಗಿದೆ.

ಸನ್ಮಾನ : ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಈ ಹಿಂದೆ ಅಪಘಾತಗಳು ಸಂಭವಿಸಿದ ವೇಳೆ ಗಾಯಾಳುಗಳ ಜೀವ ರಕ್ಷಣೆ ಮಾಡಿದ ನಾಗರೀಕರಾದ ಕಿರಣ್ ಕುಮಾರ್, ಸಂತೋಷ್, ಆಶಿಶ್, ಪ್ರವೀಣ್ ಕುಮಾರ್, ಶ್ರೀಕಾಂತ್ ಎಂಬುವರನ್ನು ಇದೇ ವೇಳೆ ಪೊಲೀಸ್ ಇಲಾಖೆಯಿಂದ ಸನ್ಮಾನಿಸಲಾಯಿತು.

ಪ್ರಶಸ್ತಿ ವಿತರಣೆ : ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಟ್ರಾಫಿಕ್ ಪೊಲೀಸರು ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ಹಾಗೆಯೇ ವಿದ್ಯಾರ್ಥಿಗಳು ಬಿಡಿಸಿದ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ.

Shimoga, January 31 : For the first time in the history of the police department of the state, the innovative program ‘Road Traffic Rules Awareness Show – 2025’ by the traffic police of Shimoga city is attracting the attention of the citizens. For two days from today, a demonstration has been held at the Police Department Guest House premises on Kote Road in Shimoga.

ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಅಡಕೆ ಬೆಳೆದಿದ್ದೆಲ್ಲಿ? ಕ್ಯಾಸನೂರು ತಳಿಯ ಮಹತ್ವವೇನು? Where was arecanut grown for the first time in the country? What is the significance of Kasanur breed? Previous post ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಅಡಿಕೆ ಬೆಳೆದಿದ್ದೆಲ್ಲಿ? ಕ್ಯಾಸನೂರು ತಳಿಯ ಮಹತ್ವವೇನು?
shimoga | Good news for Shimoga, Davanagere, Chitradurga milk producers: Increase in purchase price of milk! shimoga | ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ : ಹಾಲಿನ ಖರೀದಿ ದರ ಹೆಚ್ಚಳ! Next post shimoga | ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ : ಹಾಲಿನ ಖರೀದಿ ದರ ಹೆಚ್ಚಳ!