shimoga | Shivamogga: Upa Lokayukta's sudden visit continues – two cases registered! shimoga | ಶಿವಮೊಗ್ಗ : ಉಪ ಲೋಕಾಯುಕ್ತರ ಮುಂದುವರಿದ ದಿಢೀರ್ ಭೇಟಿ – ಎರಡು ಕೇಸ್ ದಾಖಲು!

shimoga | ಶಿವಮೊಗ್ಗ : ಉಪ ಲೋಕಾಯುಕ್ತರ ಮುಂದುವರಿದ ದಿಢೀರ್ ಭೇಟಿ – ಎರಡು ಕೇಸ್ ದಾಖಲು!

ಶಿವಮೊಗ್ಗ (shivamogga), ಮಾ. 20: ಉಪ ಲೋಕಾಯುಕ್ತ ನ್ಯಾಯಾಧೀಶರಾದ ಕೆ ಎನ್ ಫಣೀಂದ್ರ ಅವರು, ಎರಡನೇ ದಿನವಾದ ಮಾರ್ಚ್ 20 ರಂದು ಕೂಡ ಶಿವಮೊಗ್ಗ ನಗರದ ವಿವಿಧೆಡೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮತ್ತೆ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು. ಎರಡು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ!

ಹೆಲಿಪ್ಯಾಡ್ ಸರ್ಕಲ್ ಬಳಿಯಿರುವ ಪೊಲೀಸ್ ಕ್ಯಾಬಿನ್, ಅನುಪಿನಕಟ್ಟೆ ಬಳಿಯಿರುವ ಪಾಲಿಕೆ ಘನತ್ಯಾಜ್ಯ ವಿಲೇವಾರಿ ಘಟಕ, ಸರ್ಕಾರಿ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿಯಿತ್ತು ಪರಿಶೀಲಿಸಿದರು. ಪೊಲೀಸ್ ಕ್ಯಾಬಿನ್ ಗಳು ಬಳಕೆಯಾಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಘನತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆ ಬಗ್ಗೆಯೂ ಬೇಸರ ವ್ಯಕ್ತಪಡಿಸಿದರು.

ದಿಢೀರ್ ಭೇಟಿಯ ನಂತರ ಉಪ ಲೋಕಾಯುಕ್ತರು ಸುದ್ದಿಗಾರರೊಂದಿಗೆ ಮಾತನಾಡಿದರು. ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿಯಾಗಬೇಕಾಗಿದೆ. ಗುಂಡಿ ತೋಡಿ ಕಸ ವಿಲೇವಾರಿ ಕ್ರಮ ಸರಿಯಲ್ಲ. ಈ ಸಂಬಂಧ ಸುಮೊಟೋ ಕೇಸ್ ದಾಖಲಿಸಿಕೊಳ್ಳಲಾಗಿದೆ. ಸಂಸ್ಕರಣೆಗೆ ಮತ್ತೊಂದು ಪ್ಲ್ಯಾಂಟ್ ಅಗತ್ಯವಿದೆ.

ಶಾಶ್ವತ ಪರಿಹಾರ ಕ್ರಮಕೈಗೊಳ್ಳುವ ಬಗ್ಗೆ ಸಲಹೆ ನೀಡಲಾಗಿದೆ. ಸುಮೊಟೋ ಕೇಸ್ ದಾಖಲಿಸಿಕೊಳ್ಳಲಾಗುವುದು. ಪ್ರತಿ ಎರಡು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ವರದಿ ಪಡೆಯಲಾಗುವುದು.

ಪೊಲೀಸ್ ಕ್ಯಾಬಿನ್ ಗಳ ಪರಿಶೀಲನೆ ಮಾಡಲಾಯಿತು. 18 ರಿಂದ 20 ಕ್ಯಾಬಿನ್ ನಿರ್ಮಿಸಲಾಗಿದೆ. ಈ ಬಗ್ಗೆ ಎಸ್ಪಿ ಅವರನ್ನು ಕೇಳಿದಾಗ, ಅಗತ್ಯವಿಲ್ಲದಿದ್ದರೂ ನಿರ್ಮಾಣ ಮಾಡಿಕೊಡಲಾಗಿದೆ. ಸಿಬ್ಬಂದಿಗಳ ಕೊರತೆಯಿದೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಡಿಸಿ, ಸಿಇಓ ಜೊತೆ ಚರ್ಚಿಸಿ ಸದ್ಭಳಕೆ ಮಾಡಿಕೊಳ್ಳಲಾಗುವುದು ಎಂದು ಎಸ್ಪಿ ಹೇಳಿದ್ದಾರೆ.

ಈ ಬಗ್ಗೆಯೂ ಸುಮೊಟೋ ಕೇಸ್ ದಾಖಲಿಸಿಕೊಳ್ಳಲಾಗುವುದು. ಹಾಗೆಯೇ ಬಿಟ್ಟರೇ ಕ್ಯಾಬಿನ್ ಗಳು ಉಪಯೋಗಕ್ಕೆ ಬರದಿರುವ ಸಾಧ್ಯತೆಯಿದೆ. ಇದರಿಂದ ಹಣ ವ್ಯರ್ಥವಾಗಲಿದೆ. ಈ ಬಗ್ಗೆಯೂ ನಿಯಮಿತವಾಗಿ ವರದಿ ಪಡೆದುಕೊಳ್ಳಲಾಗುವುದು ಎಂದು ಉಪ ಲೋಕಾಯುಕ್ತರು ತಿಳಿಸಿದ್ದಾರೆ.

ಕೆಎಸ್ಆರ್’ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದಾಗ ಸ್ವಚ್ಛವಾಗಿರುವುದು ಕಂಡುಬಂದಿದೆ. ಆದರೆ ಕೆಲ ನಾಗರೀಕರು, ನೀವು ಬರುತ್ತಿರುವ ಕಾರಣದಿಂದ ಸ್ವಚ್ಛವಾಗಿಟ್ಟುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ನಿಯಮಿತವಾಗಿ ಬಸ್ ನಿಲ್ದಾಣಕ್ಕೆ ಭೇಟಯಿತ್ತು ಪರಿಶೀಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ನಿನ್ನೆ ನಡೆದ ಸಾರ್ವಜನಿಕ ದೂರು ಸ್ವೀಕಾರ ಸಭೆಯಲ್ಲಿ, ಒಟ್ಟಾರೆ ದೂರು ಕೇಸ್ ಸ್ವೀಕರಿಸಲಾಗಿದೆ. ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಗಿದೆ. 41 ಕೇಸ್ ದಾಖಲಿಸಲಾಗಿದೆ. ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸುವಂತೆ ಸಂಬಂಧಿಸಿದವರಿಗೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Shivamogga, Mar 20: Deputy Lokayukta Judge K N Phanindra, on the second day, March 20, also made a surprise visit to various places in Shivamogga city and inspected them. He again expressed dissatisfaction with the officials.

They made a surprise visit to the police cabin near the Helipad Circle, the municipal solid waste disposal unit near Anupinakatte, and the government bus stand and inspected it. They expressed dissatisfaction over the non-use of the police cabins. They also expressed dissatisfaction with the maintenance of the solid waste disposal unit.

sslc exam | Don't be afraid of SSLC exam be confident..! sslc exam | ಎಸ್ಎಸ್ಎಲ್’ಸಿ ಪರೀಕ್ಷೆ ಭಯ ಬೇಡ, ಆತ್ಮವಿಶ್ವಾಸವಿರಲಿ..! Previous post sslc exam | ಎಸ್ಎಸ್ಎಲ್’ಸಿ ಪರೀಕ್ಷೆ : ಭಯ ಬೇಡ, ಆತ್ಮವಿಶ್ವಾಸವಿರಲಿ..!
Shivamogga: Heavy rain accompanied by thunder and lightning! ಶಿವಮೊಗ್ಗ: ಗುಡುಗು ಬಿರುಗಾಳಿ ಸಹಿತ ಭಾರೀ ಮಳೆ! Next post rain alert | ಮಾ. 22 ರಿಂದ 25 ರವರೆಗೆ ವಿವಿಧೆಡೆ ಮಳೆ ಮುನ್ಸೂಚನೆ!