shimoga | Thirthahalli Mahishi Mutt robbery case: How much did those who came to loot hundreds of crores get? shimoga | ತೀರ್ಥಹಳ್ಳಿ ಮಹಿಷಿ ಮಠದಲ್ಲಿ ದರೋಡೆ ಪ್ರಕರಣ : ನೂರಾರು ಕೋಟಿ ಲೂಟಿಗೆ ಬಂದವರಿಗೆ ಸಿಕ್ಕಿದ್ದೆಷ್ಟು?

shimoga | ತೀರ್ಥಹಳ್ಳಿ ಮಹಿಷಿ ಮಠದಲ್ಲಿ ದರೋಡೆ ಪ್ರಕರಣ : ನೂರಾರು ಕೋಟಿ ಲೂಟಿಗೆ ಬಂದವರಿಗೆ ಸಿಕ್ಕಿದ್ದೆಷ್ಟು?

ಶಿವಮೊಗ್ಗ (shivamogga), ಏ. 11: ತೀರ್ಥಹಳ್ಳಿ ತಾಲೂಕಿನ ಮಹಿಷಿಯಲ್ಲಿರುವ ಉತ್ತರಾಧಿ ಮಠದಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, 13 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಏ. 11 ರಂದು ಸಂಜೆ ಶಿವಮೊಗ್ಗದ ಡಿಎಆರ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ಸುರೇಶ ಯಾನೆ ನೇರಲೆ ಸುರೇಶ್, ಸತೀಶ ಯಾನೆ ಸತ್ಯನಾರಾಯಣ, ಪೃಥ್ವಿರಾಜ್, ಸಿರಿ ಯಾನೆ ಶ್ರೀಕಾಂತ್, ಅಭಿಲಾಷ್ ಯಾನೆ ಅಭಿ, ರಾಕೇಶ, ಭರತ ಯಾನೆ ಚಿಟ್ಟೆ, ಪವನ ಯಾನೆ ಗಿಡ್ಡ ಪವನ್, ರಮೇಶ್ ಯಾನೆ ನವೀನ್, ನವೀನ್ ಕುಮಾರ್ ಯಾನೆ ಡೈಮಂಡ್ ನವೀನ್, ದರ್ಶನ್ ಹಾಗೂ ಕರಿಬಸಪ್ಪ ಬಂಧಿತ ಆರೋಪಿಗಳಾಗಿದ್ದಾರೆ.

ಇವರೆಲ್ಲ ಶಿಕಾರಿಪುರ, ಆನಂದಪುರ ಹಾಗೂ ಹೊಸನಗರದ ನಿವಾಸಿಗಳಾಗಿದ್ದಾರೆ. ಉಳಿದಂತೆ ಪ್ರಕರಣದ ಮುಖ್ಯ ಆರೋಪಿಯಾದ ಶ್ರೀನಿವಾಸ್ ಯಾನೆ ಸೀನ ಎಂಬಾತನ ಕಾಲಿಗೆ ಗುಂಡಿಕ್ಕಿ ಶಿಕಾರಿಪುರದಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಕರಣದಲ್ಲಿ ಒಟ್ಟಾರೆ 21 ಆರೋಪಿಗಳು ಭಾಗಿಯಾಗಿರುವುದು ತಿಳಿದುಬಂದಿದೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಟಿಟಿ ವಾಹನ, ಮಹೇಂದ್ರ ಸ್ಕಾರ್ಪಿಯೋ ಕಾರು ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಿದ್ದ ಆಯುಧ ಮತ್ತೀತರ ವಸ್ತುಗಳನ್ನು ಇನ್ನಷ್ಟೆ ವಶಕ್ಕೆ ಪಡೆಯಬೇಕಾಗಿದೆ ಎಂದು ತಿಳಿಸಿದ್ದಾರೆ.

ಸದರಿ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರೆ ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ. ಇನ್ನೂ ಹೆಚ್ಚಿನ ತನಿಖೆ ನಡೆಸಬೇಕಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಬಹುಮಾನ ಘೋಷಿಸಲಾಗಿದೆ ಎಂದು ಎಸ್ಪಿ ಅವರು ಮಾಹಿತಿ ನೀಡಿದ್ದಾರೆ.

ಸಂಚು : ಮಹಿಷಿ ಮಠದಲ್ಲಿ ಸುಮಾರು 300 ಕೋಟಿ ರೂ. ಹಣವಿರುವ ಮಾಹಿತಿಯ ಆಧಾರದ ಮೇಲೆ ಆರೋಪಿಗಳು ಮಠದಲ್ಲಿ ದರೋಡೆ ನಡೆಸಿದ್ದ ಸಂಗತಿ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ನೂರಾರು ಕೋಟಿ ರೂ. ದರೋಡೆ ಮಾಡಲೆಂದು ಏ. 5 ರ ಮಧ್ಯ ರಾತ್ರಿ ಮಠಕ್ಕೆ ಆಗಮಿಸಿದ್ದ ಆರೋಪಿಗಳಿಗೆ, ಮಠದಲ್ಲಿ ಕೇವಲ 50 ಸಾವಿರ ರೂ. ಮಾತ್ರ ಸಿಕ್ಕಿತ್ತು! ಈ ವೇಳೆ ಆರೋಪಿಗಳು ಮಠದಲ್ಲಿದ್ದ ಸಿಸಿ ಕ್ಯಾಮರಾ, ಡಿವಿಆರ್, ಲ್ಯಾಪ್’ಟ್ಯಾಪ್, ಮೊಬೈಲ್ ಪೋನ್ ಗಳನ್ನು ಹೊತ್ತೊಯ್ದಿದ್ದರು.

shimoga | Thirthahalli Mahishi Mutt robbery case :- Shivamogga, Apr. 11: District Protection Officer G K Mithun Kumar said that 13 accused have been arrested in connection with the robbery case that took place at the Uttaradhi Mutt in Mahishi, Thirthahalli taluk. He was addressing a press conference at the DAR Hall in Shivamogga on the evening of April 11.

Bhadravati: Woman who left home disappears! bhadravati | ಭದ್ರಾವತಿ : ಮನೆಯಿಂದ ಹೊರಹೋದ ಮಹಿಳೆ ಕಣ್ಮರೆ! Previous post bhadravati | ಭದ್ರಾವತಿ : ಮನೆಯಿಂದ ಹೊರಹೋದ ಮಹಿಳೆ ಕಣ್ಮರೆ!
Shimoga : The body of an anonymous man was found in the channel water! ಶಿವಮೊಗ್ಗ : ಚಾನಲ್ ನೀರಿನಲ್ಲಿ ಅನಾಮಧೇಯ ಪುರುಷನ ಶವ ಪತ್ತೆ! Next post sagara | ಸಾಗರ : ಶರಾವತಿ ಹಿನ್ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು!