ಶಿವಮೊಗ್ಗ, ಫೆಬ್ರವರಿ 19: ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಲು ಮುಂದಾದ ಟ್ರಾಕ್ಟರ್ ಚಾಲಕನೋರ್ವನಿಗೆ, ಮಹಾನಗರ ಪಾಲಿಕೆ ಆಡಳಿತದ ಅಧಿಕಾರಿಗಳು 500 ರೂ. ದಂಡ ವಿಧಿಸಿದ ಘಟನೆ ಫೆಬ್ರವರಿ 19 ರಂದು ನಡೆದಿದೆ.
ನವುಲೆಯ ಕೃಷಿ ನಗರ ಸಮೀಪದ ರಸ್ತೆ ಬದಿಯ ಖಾಲಿ ಜಾಗದಲ್ಲಿ ಟ್ರ್ಯಾಕ್ಟರ್ ಚಾಲಕನೋರ್ವ ಕಸ ಹಾಕುತ್ತಿದ್ದ ವೇಳೆ, ಪಾಲಿಕೆ ಪರಿಸರ ಅಭಿಯಂತರ ಲೋಹಿತ್ ಯಾದವ್ ನೇತೃತ್ವದ ಅಧಿಕಾರಿಗಳ ತಂಡ ದಿಡೀರ್ ಕಾರ್ಯಾಚರಣೆ ನಡೆಸಿದೆ.
ಟ್ರ್ಯಾಕ್ಟರ್ ಚಾಲಕನಿಗೆ ಸ್ಥಳದಲ್ಲಿಯೇ 500 ರೂ. ದಂಡ ವಿಧಿಸಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದರೆ ಕಾನೂನು ರೀತ್ಯ ಕ್ರಮ ಜರುಗಿಸುವ ಎಚ್ಚರಿಕೆಯನ್ನು ಪರಿಸರ ಅಭಿಯಂತರ ಲೋಹಿತ್ ಯಾದವ್ ಅವರು ಎಚ್ಚರಿಕೆ ನೀಡಿದ್ದಾರೆ.
ಪಾಲಿಕೆ ಅಧಿಕಾರಿ ಲೋಹಿತ್ ಯಾದವ್ ಅವರ ಕ್ರಮಕ್ಕೆ ಸುತ್ತಮುತ್ತಲಿನ ಬಡಾವಣೆ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪಾಲಿಕೆ ಆರೋಗ್ಯ ನಿರೀಕ್ಷಕ ಅಮರೇಶ್, ವಾರ್ಡ್ ಮೇಸ್ತ್ರಿ ನಾಗರಾಜ್ ಮೊದಲಾದವರಿದ್ದರು.
Shivamogga, February 19: A tractor driver who attempted to dump waste in a public place was fined ₹500 by municipal officials on February 19.
Near Navule Agricultural City, while the driver was dumping garbage on an empty roadside plot, a team of officials led by Municipal Environmental Engineer Lohith Yadav carried out a sudden inspection.
The driver was fined ₹500 on the spot. Lohith Yadav warned that stricter legal action would be taken in the future if anyone is found dumping waste in public areas.
Residents of nearby localities appreciated the action taken by Lohith Yadav. Municipal Health Inspector Amaresh and Ward Supervisor Nagaraj were also present during the operation.

