The construction work of the first phase of the outer ring road of Shivamogga city has reached the final stage! ಶಿವಮೊಗ್ಗ ನಗರದ ಮೊದಲ ಹಂತದ ಹೊರವರ್ತುಲ ರಸ್ತೆ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ!

shimoga outer ring road | ಶಿವಮೊಗ್ಗ ನಗರದ ಮೊದಲ ಹಂತದ ಹೊರ ವರ್ತುಲ ರಸ್ತೆ ನಿರ್ಮಾಣ ಅಂತಿಮ ಘಟ್ಟಕ್ಕೆ!

ಶಿವಮೊಗ್ಗ (shivamogga), ಜು. 8: ಶಿವಮೊಗ್ಗ ನಗರದ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ, 200 ಅಡಿ ಅಗಲದ ಹೊರವರ್ತುಲ ರಸ್ತೆ (200 feet outer ring road) ಯ ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣ ಹಂತಕ್ಕೆ ತಲುಪಿದೆ. ಇನ್ನೂ ಕೇವಲ 1 ಕಿ.ಮೀ. ನಷ್ಟು ರಸ್ತೆ ನಿರ್ಮಾಣ ಕಾರ್ಯ ಬಾಕಿ ಉಳಿದಿದೆ!

ಪ್ರಸ್ತುತ ಮಳೆಗಾಲ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಮಳೆಗಾಲ ಪೂರ್ಣಗೊಳ್ಳುತ್ತಿದ್ದಂತೆ, ಮೊದಲ ಹಂತದ ಹೊರವರ್ತುಲ ರಸ್ತೆಯಲ್ಲಿ ವಾಹನಗಳ ಸಂಚಾರ ಆರಂಭಗೊಳ್ಳುವ ಸಾಧ್ಯತೆಯಿದೆ. ಇದು ನಗರ ಸಂಚಾರ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗೆ ಸಾಕ್ಷಿಯಾಗಲಿದೆ.

ಒಟ್ಟಾರೆ 29 ಕಿ.ಮೀ. ಉದ್ದದ ಹೊರವರ್ತುಲ ರಸ್ತೆ ನಿರ್ಮಾಣ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಮೊದಲ ಹಂತದಲ್ಲಿ 16.5 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ರಾಷ್ಟ್ರೀಯ ಹೆದ್ಧಾರಿ ಹೆದ್ಧಾರಿ ಪ್ರಾಧಿಕಾರ (ಎನ್.ಹೆಚ್.ಎ.ಐ) ಕ್ಕೆ ಅನುಷ್ಠಾನ ಜವಾಬ್ದಾರಿವಹಿಸಲಾಗಿತ್ತು.

ಆದರೆ ನಾನಾ ಕಾರಣಗಳಿಂದ ಇದರಲ್ಲಿ 5.6 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಾಣ ಕಾರ್ಯದಿಂದ (ಡಿ ಸ್ಕೋಪ್) ಕೈಬಿಡಲಾಗಿತ್ತು. 2021 ರಲ್ಲಿ 11.39 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಸದರಿ ರಸ್ತೆಯು ಊರುಗಡೂರು, ಕಾನೇಹಳ್ಳ, ರಾಮಿನಕೊಪ್ಪ, ಅನುಪಿನಕಟ್ಟೆ, ಪುರದಾಳು ರಸ್ತೆ, ಶ್ರೀರಾಂಪುರದವರೆಗೆ ಸಾಗಲಿದೆ.

ಈಗಾಗಲೇ ನಿರ್ಮಾಣ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಸೂಚನಾ ಫಲಕಗಳ ಅಳವಡಿಕೆ ಮಾಡಲಾಗಿದೆ. ಸುಮಾರು 1 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಕಾರ್ಯ ಮಾತ್ರ ಬಾಕಿಯಿದೆ. ಇದು ಪೂರ್ಣಗೊಳ್ಳುತ್ತಿದ್ದಂತೆ ವಾಹನಗಳ ಸಂಚಾರಕ್ಕೆ ಮೊದಲ ಹಂತದ ರಸ್ತೆ ಮುಕ್ತಗೊಳ್ಳಲಿದೆ ಎಂದು ಎನ್.ಹೆಚ್.ಎ.ಐ ಮೂಲಗಳು ಹೇಳುತ್ತವೆ.

ಹೊಸ ಸರ್ವೇ : ಮೊದಲ ಹಂತದಲ್ಲಿ ಕೈಬಿಡಲಾಗಿದ್ದ 5. 6 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ಇದೀಗ ಹೊಸದಾಗಿ ಸರ್ವೇ ಆರಂಭಿಸಲಾಗಿದೆ. ಮಲವಗೊಪ್ಪದಿಂದ ವಿಮಾನ ನಿಲ್ದಾಣ ಸಮೀಪದಿಂದ ಊರುಗಡೂರುವರೆಗೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪರಿಶ್ರಮ : 2009 ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ, ರಾಜ್ಯ ಸರ್ಕಾರದ ಮೂಲಕ ಹೊರ ವರ್ತುಲ ರಸ್ತೆ ನಿರ್ಮಾಣ ಯೋಜನೆ ಸಿದ್ದಪಡಿಸಲಾಗಿತ್ತು. ಆದರೆ ನಾನಾ ಕಾರಣಗಳಿಂದ ಇದು ಅನುಷ್ಠಾನವಾಗಲಿಲ್ಲ. ಇದರಿಂದ ಹಲವು ವರ್ಷಗಳ ಕಾಲ ಯೋಜನೆಯೇ ನೆನೆಗುದಿ ಬೀಳುವಂತಾಗಿತ್ತು.

ಮತ್ತೋಂದೆಡೆ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರರವರು ಕೇಂದ್ರ ಸರ್ಕಾರದ ಭೂ ಸಾರಿಗೆ ಇಲಾಖೆ ಮೂಲಕ ಯೋಜನೆ ಅನುಷ್ಠಾನ ಮಾಡುವಲ್ಲಿ ಯಶಸ್ವಿಯಾಗಿದ್ದರು. ಬಿ ಎಸ್ ಯಡಿಯೂರಪ್ಪ ಹಾಗೂ ಬಿ ವೈ ರಾಘವೇಂದ್ರ ಆಸಕ್ತಿಯಿಂದ ಶಿವಮೊಗ್ಗ ನಗರದಲ್ಲಿ ಅತ್ಯಾಧುನಿಕ ಹೊರವರ್ತುಲ ರಸ್ತೆ ಅಭಿವೃದ್ದಿಗೊಳ್ಳುವಂತಾಗಿದೆ.

*** 2 ನೇ ಹಂತದಲ್ಲಿ ಶ್ರೀರಾಂಪುರದಿಂದ ಕೋಟೆಗಂಗೂರು, ಭೈರನಕೊಪ್ಪ, ಬಸವನಗಂಗೂರು, ಅಬ್ಬಲಗೆರೆ, ಪುರಲೆ ಮಾರ್ಗವಾಗಿ ಬಿ ಹೆಚ್ ರಸ್ತೆ ತಲುಪುವ ಸುಮಾರು 13 ಕಿ.ಮೀ. ಉದ್ದದ ಹೊರವರ್ತುಲ ರಸ್ತೆ ನಿರ್ಮಾಣದ ಯೋಜನೆ ರೂಪಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ (ಎನ್.ಹೆಚ್) ಇಲಾಖೆಯಿಂದ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಲಾಗಿತ್ತು. ಸರ್ವೇ ಕೂಡ ನಡೆಸಲಾಗಿತ್ತು. ಮಾರ್ಗ ಹಾದು ಹೋಗುವ ಸ್ಥಳ ಗುರುತಿಸಲಾಗಿತ್ತು. ಆದರೆ ಈ ಮೊದಲು ಗುರುತಿಸಿದ ಮಾರ್ಗಕ್ಕೆ ಬದಲಾಗಿ, ಮತ್ತೊಂದು ಮಾರ್ಗದ ಮೂಲಕ ರಸ್ತೆ ನಿರ್ಮಾಣದ ಚಿಂತನೆ ನಡೆಸಲಾಗಿತ್ತು.

ಶ್ರೀರಾಂಪುರಕ್ಕೆ ಬದಲಾಗಿ ಲಯನ್ ಸಫಾರಿ ಸಮೀಪದಿಂದ ರಸ್ತೆ ನಿರ್ಮಾಣದ ಚಿಂತನೆ ಮಾಡಲಾಗಿತ್ತು. ಆದರೆ  ನಾನಾ ಕಾರಣಗಳಿಂದ ಇಲ್ಲಿಯವರೆಗೂ ಯೋಜನೆ ಆರಂಭವಾಗಿಲ್ಲ. ಮಾರ್ಗ ಅನುಮೋದನೆ, ಭೂ ಸ್ವಾದೀನ ಪ್ರಕ್ರಿಯೆಯಂತಹ ಪ್ರಾರಂಭಿಕ ಕೆಲಸಗಳಿಗೂ ಚಾಲನೆ ದೊರಕಿಲ್ಲ. ಮೊದಲ ಹಂತದ ಯೋಜನೆ ಅನುಷ್ಠಾನಕ್ಕೆ ತೋರಿದ ಉತ್ಸಾಹ, ಎರಡನೇ ಹಂತದ ಯೋಜನೆ ಅನುಷ್ಠಾನದತ್ತ ಕಂಡುಬರುತ್ತಿಲ್ಲ!

Shivamogga, Jul. 6: The first phase of the 200-feet outer ring road being constructed on the outskirts of Shivamogga city has almost reached its completion stage. Only 1 km of road construction work is left! A total of 29 km long outer ring road construction project has been prepared. In the first phase, 16.5 km long road was planned to be constructed. The National Highways Authority of India (NHAI) was given the responsibility of implementation.

*** In the 2nd phase, a plan was made to construct an outer ring road of about 13 km in length from Srirampur to reach BH Road via Kotegangur, Bhairanakoppa, Basavanagangur, Abbalagere, and Purale. The National Highways (NH) Department had decided to implement the project. A survey had also been conducted. The route had been identified. However, instead of the previously identified route, another route was considered for road construction.

There were plans to build a road near Lion Safari instead of Srirampur. However, due to various reasons, the project has not started till now. Even the initial work like route approval and land acquisition process has not been initiated. The enthusiasm shown for the implementation of the first phase of the project is not seen towards the implementation of the second phase of the project!

shimoga APMC vegetable prices | Details of vegetable prices for October 10 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಅಕ್ಟೋಬರ್ 10 ರ ತರಕಾರಿ ಬೆಲೆಗಳ ವಿವರ Previous post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 8 ರ ತರಕಾರಿ ಬೆಲೆಗಳ ವಿವರ
Shivamogga : Relatives quarrel – two stabbed! ಶಿವಮೊಗ್ಗ : ಸಂಬಂಧಿಗಳ ಜಗಳ – ಇಬ್ಬರಿಗೆ ಚೂರಿಯಿಂದ ಇರಿತ! Next post shimoga crime news | ಶಿವಮೊಗ್ಗ : ಹಾಡಹಗಲೇ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು