
shimoga outer ring road | ಶಿವಮೊಗ್ಗ ರಿಂಗ್ ರೋಡ್’ಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ – 2ನೇ ಹಂತಕ್ಕೆ ಕೇಂದ್ರ ಸಚಿವರ ಗ್ರೀನ್ ಸಿಗ್ನಲ್?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜು. 13: ಶಿವಮೊಗ್ಗ ನಗರದ ಹೊರವಲಯದಲ್ಲಿ ಅಭಿವೃದ್ದಿಪಡಿಸಲಾಗುತ್ತಿರುವ, 200 ಅಡಿ ಹೊರ ವರ್ತುಲ ರಸ್ತೆ (ರಿಂಗ್ ರೋಡ್) ಮೊದಲ ಹಂತದ ದಕ್ಷಿಣ ಭಾಗದ ಕಾಮಗಾರಿ ಬಹುತೇಕ ಪೂರ್ಣ ಹಂತಕ್ಕೆ ತಲುಪಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಮಳೆಗಾಲದ ನಂತರ ವಾಹನ ಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆಯಿದೆ.
ಉಳಿದಂತೆ 2ನೇ ಹಂತದ ಉತ್ತರ ಭಾಗದ ವರ್ತುಲ ರಸ್ತೆ ಅಭಿವೃದ್ದಿಯಾಗಬೇಕಾಗಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಭೂ ಸಾರಿಗೆ ಇಲಾಖೆಯಿಂದ ಮಾರ್ಗ ನಿರ್ಮಾಣಕ್ಕೆ ಅನುಮತಿ ದೊರಕಿಲ್ಲ. ಈ ಕಾರಣದಿಂದ ಭೂ ಸ್ವಾದೀನ ಪ್ರಕ್ರಿಯೆ ಸೇರಿದಂತೆ ಮೊದಲಾದ ಪ್ರಾಥಮಿಕ ಹಂತದ ಕಾರ್ಯಗಳಿಗೂ ಇನ್ನೂ ಚಾಲನೆ ದೊರಕಿಲ್ಲ.
ಈ ನಡುವೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಜು. 14 ರಂದು ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ, 2 ನೇ ಹಂತದ ರಿಂಗ್ ರೋಡ್ ನಿರ್ಮಾಣಕ್ಕೆ ಅನುಮತಿ ಕೊಡುವ ಭರವಸೆ ನೀಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಶಿವಮೊಗ್ಗ ಜಿಲ್ಲೆಯ ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ನಿತಿನ್ ಗಡ್ಕರಿ ಅವರೊಂದಿಗೆ ಅನೌಪಚಾರಿ ಚರ್ಚೆ ನಡೆಸಿ, ಮನವಿ ಪತ್ರವೊಂದನ್ನು ಅರ್ಪಿಸಿದ್ದಾರೆ. ಈ ವೇಳೆ ಶಿವಮೊಗ್ಗದ ರಿಂಗ್ ರೋಡ್ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, 2ನೇ ಹಂತಕ್ಕೆ ಇನ್ನಷ್ಟೆ ಚಾಲನೆ ದೊರಕಬೇಕಾಗಿದೆ. ಮಾರ್ಗ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಕೋರಿದ್ದಾರೆ ಎನ್ನಲಾಗಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ನಿತಿನ್ ಗಡ್ಕರಿ ಅವರು, ಕಾಲಮಿತಿಯೊಳಗೆ 2ನೇ ಹಂತದ ರಿಂಗ್ ರೋಡ್ ಕಾಮಗಾರಿಗೆ ಅನುಮತಿ ಕಲ್ಪಿಸಲಾಗುವುದು. ಯೋಜನೆಯ ಸಮಗ್ರ ವರದಿಯನ್ನು ತಮಗೆ ನೀಡುವಂತೆ, ಸ್ಥಳದಲ್ಲಿದ್ದ ಕೇಂದ್ರ ಭೂ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೊಸ ರಿಂಗ್ ರೋಡ್ : 2009 ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ, ರಾಜ್ಯ ಸರ್ಕಾರದ ಮೂಲಕ 35 ಕಿ.ಮೀ. ಉದ್ದದ ನೂತನ ಹೊರ ವರ್ತುಲ ರಸ್ತೆ ನಿರ್ಮಾಣ ಯೋಜನೆ ಸಿದ್ದಪಡಿಸಲಾಗಿತ್ತು. ಆದರೆ ನಾನಾ ಕಾರಣಗಳಿಂದ ಇದು ಅನುಷ್ಠಾನವಾಗಲಿಲ್ಲ. ಇದರಿಂದ ಹಲವು ವರ್ಷಗಳ ಕಾಲ ಯೋಜನೆಯೇ ನೆನೆಗುದಿ ಬೀಳುವಂತಾಗಿತ್ತು.
ಮತ್ತೋಂದೆಡೆ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರರವರು ಕೇಂದ್ರ ಸರ್ಕಾರದ ಭೂ ಸಾರಿಗೆ ಇಲಾಖೆ ಮೂಲಕ ಯೋಜನೆ ಅನುಷ್ಠಾನ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈಗಾಗಲೇ ಮೊದಲ ಹಂತದ ಹೊರ ವರ್ತುಲ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
2 ನೇ ಹಂತದ 16 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರಕಬೇಕಾಗಿದೆ. ಆದರೆ ಕೇಂದ್ರ ಸರ್ಕಾರದಿಂದ ಮಾರ್ಗ ನಿರ್ಮಾಣ ನಕ್ಷೆಗೆ ಅನುಮೋದನೆ ದೊರಕಿರಲಿಲ್ಲ. ಇದೀಗ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು 2ನೇ ಹಂತಕ್ಕೆ ಕಾಲಮಿತಿಯೊಳಗೆ ಅನುಮತಿ ಕಲ್ಪಿಸುವ ಭರವಸೆ ನೀಡಿದ್ದಾರೆ. ಇದರಿಂದ ವಿಳಂಬವಾಗಿದ್ದ ಯೋಜನೆಯ ಅನುಷ್ಠಾನಕ್ಕೆ ವೇಗ ಪಡೆದುಕೊಳ್ಳುವ ನಿರೀಕ್ಷೆಗಳು ಗರಿಗೆದರಿವೆ.
ಉದಯ ಸಾಕ್ಷಿ ವರದಿ : ಶಿವಮೊಗ್ಗ ನಗರದಲ್ಲಿ ನಿರ್ಮಾಣವಾಗುತ್ತಿರುವ ಹೊರ ವರ್ತುಲ ರಸ್ತೆಯ ಬಗ್ಗೆ ‘ಉದಯ ಸಾಕ್ಷಿ’ www.udayasaakshi.com ನ್ಯೂಸ್ ವೆಬ್’ಸೈಟ್ ಜುಲೈ 8 ರಂದು ಸಮಗ್ರ ವರದಿ ಪ್ರಕಟಿಸಿತ್ತು. ಜೊತೆಗೆ 2ನೇ ಹಂತದ ಯೋಜನೆ ಅನುಷ್ಠಾನ ವಿಳಂಬವಾಗುತ್ತಿರುವ ಬಗ್ಗೆ ಅಧಿಕಾರಸ್ಥರ ಗಮನ ಸೆಳೆದಿತ್ತು.
ಶಿವಮೊಗ್ಗ ರಸ್ತೆ ಸಂಪರ್ಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ..!
*** ಶಿವಮೊಗ್ಗ ನಗರದಲ್ಲಿ 35 ಕಿ.ಮೀ. ಉದ್ದದ ಹೊರ ವರ್ತುಲ ರಸ್ತೆ ಸಂಪೂರ್ಣವಾಗಿ ನಿರ್ಮಾಣಗೊಂಡರೆ, ನಗರ ಸಂಪರ್ಕ ಹಾಗೂ ಸಂಚಾರ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಲಿವೆ. ಜೊತೆಗೆ ನಗರದ ಬೆಳವಣಿಗೆಗೆ ಹೊಸ ವೇಗ ದೊರಕಲಿದೆ. ಕೆಲವೇ ಕಿ.ಮೀ.ಗಳ ಅಂತರದಲ್ಲಿ ಪ್ರಮುಖ ರಸ್ತೆಗಳ ಸಂಪರ್ಕ ಸಾಧ್ಯವಾಗಲಿದೆ. ಕಳೆದ ಹಲವು ದಶಕಗಳ ಹಿಂದೆ ನಿರ್ಮಿಸಲಾಗಿದ್ದ 100 ಅಡಿ ಅಗಲದ ರಿಂಗ್ ರೋಡ್, ಸದ್ಯ ನಗರದ ಹೃದಯಭಾಗವಾಗಿ ಪರಿವರ್ತಿತವಾಗಿದೆ. ಈ ಕಾರಣದಿಂದ ನಗರದ ಹೊರಭಾಗದಲ್ಲಿ ಮತ್ತೊಂದು ಹೊರ ವರ್ತುಲ ರಸ್ತೆ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಕಳೆದ ಹಲವು ವರ್ಷಗಳಿಂದಿತ್ತು.
Shivamogga, July 13: The work on the first phase of the southern section of the 200-foot outer ring road being developed on the outskirts of Shivamogga city has almost reached its completion stage. If all goes as planned, it will be opened for vehicular traffic after the monsoon season.
The rest of the road in the northern part of the 2nd phase needs to be developed. However, permission for the construction of the road has not been received from the Central Land Transport Department in this regard. Due to this, even the preliminary stage works including the land acquisition process have not been started. Meanwhile, it has been reported that Union Land Transport Minister Nitin Gadkari, while participating in the inauguration ceremony of the Sigandur Bridge on July 14, has promised to give permission for the construction of the 2nd phase of the Ring Road.