Shivamogga : Accused robbed a teacher by pretending to be a Reels fan! ಶಿವಮೊಗ್ಗ : ರೀಲ್ಸ್ ಅಭಿಮಾನಿ ಎಂದು ಕರೆಯಿಸಿಕೊಂಡು ಶಿಕ್ಷಕನ ದರೋಡೆ ಮಾಡಿದ ಆರೋಪಿಗಳು!

shimoga crime news | ಶಿವಮೊಗ್ಗ : ಹಾಡಹಗಲೇ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು

ಶಿವಮೊಗ್ಗ (shivamogga), ಜು. 8: ಹಾಡಹಗಲೇ ಮನೆಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ, ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾಲಕ್ಷ್ಮೀ ಲೇಔಟ್ ನಲ್ಲಿ ಜುಲೈ 7 ರಂದು ನಡೆದಿದೆ.

ಯೋಗೇಂದ್ರಪ್ಪ ಎಂಬುವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಮನೆಯ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಲಾಕರ್ ನಲ್ಲಿದ್ದ ನಗನಾಣ್ಯ ಅಪಹರಿಸಿದ್ದಾರೆ.

5. 50 ಲಕ್ಷ ರೂ. ಮೌಲ್ಯದ 158 ಗ್ರಾಂ ತೂಕದ ಚಿನ್ನದ ಆಭರಣ, 60 ಸಾವಿರ ರೂ. ಮೌಲ್ಯದ 710 ಗ್ರಾಂ ತೂಕದ ಬೆಳ್ಳಿಯ ಆಭರಣ ಹಾಗೂ 1.10 ಲಕ್ಷ ನಗದನ್ನು ಕಳ್ಳರು ಅಪಹರಿಸಿದ್ದಾರೆ.

ಬೆಳಿಗ್ಗೆ ಕರ್ತವ್ಯದ ಮೇಲೆ ಮನೆಯವರು ಹೊರ ತೆರಳಿದ್ದು, ಸಂಜೆ ಮನೆಗೆ ಆಗಮಿಸಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ನಡುವೆ ಈ ಕಳವು ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಎ ಜೆ ಕಾರಿಯಪ್ಪ, ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ರವರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಬೆರಳಚ್ಚು ತಜ್ಞರು, ಶ್ವಾನದಳ ತಂಡ ಕೂಡ ಮಾಹಿತಿ ಕಲೆ ಹಾಕಿದೆ. ಈ ಕುರಿತಂತೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga, july 8: An incident in which thieves stole jewellery and cash worth lakhs of rupees from a house in broad daylight and fled took place on July 7 in Mahalaxmi Layout under Vinobanagar police station limits in Shivamogga.

The construction work of the first phase of the outer ring road of Shivamogga city has reached the final stage! ಶಿವಮೊಗ್ಗ ನಗರದ ಮೊದಲ ಹಂತದ ಹೊರವರ್ತುಲ ರಸ್ತೆ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ! Previous post shimoga outer ring road | ಶಿವಮೊಗ್ಗ ನಗರದ ಮೊದಲ ಹಂತದ ಹೊರ ವರ್ತುಲ ರಸ್ತೆ ನಿರ್ಮಾಣ ಅಂತಿಮ ಘಟ್ಟಕ್ಕೆ!
A child playing on the road died after being hit by a car near Virupinakoppa in Shivamogga! ಶಿವಮೊಗ್ಗ : ವಿರುಪಿನಕೊಪ್ಪ ಬಳಿ ಕಾರು ಡಿಕ್ಕಿಯಾಗಿ ರಸ್ತೆಯಲ್ಲಿ ಆಟವಾಡುತ್ತಿದ್ದ ಮಗು ಸಾವು! Next post hosanagara | ripponpet | ರಿಪ್ಪನ್ ಪೇಟೆ : ಬೈಕ್ ಗಳ ಮುಖಾಮುಖಿ ಡಿಕ್ಕಿ – ಶಿಕ್ಷಕ ಸಾ**ವು!