
bengaluru news | ಗ್ರೇಟರ್ ಬೆಂಗಳೂರು : 5 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರೋಬ್ಬರಿ 368 ವಾರ್ಡ್ ರಚನೆ!
ಬೆಂಗಳೂರು (bangalore), ಅಕ್ಟೋಬರ್ 1: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಸ್ತಿತ್ವಕ್ಕೆ ಬಂದ ನಂತರ, ಐದು ಹೊಸ ಮಹಾನಗರ ಪಾಲಿಕೆಗಳನ್ನು ರಚನೆ ಮಾಡಲಾಗಿತ್ತು. ಇದೀಗ ಸದರಿ ಪಾಲಿಕೆಗಳಿಗೆ ವಾರ್ಡ್ ವಿಂಗಡನೆ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಹೊಸ ಮಹಾನಗರ ಪಾಲಿಕೆಗಳ ಕರಡು ವಾಡ್೯ ವಾರು ಕ್ಷೇತ್ರ ಪುನರ್ ವಿಂಗಡಣೆಯ ಅಧಿಸೂಚನೆ ಹೊರಡಿಸಿದ್ದು, 15-10-2025 ರ ಸಂಜೆ 5 ಗಂಟೆಯೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರ ಆಕ್ಷೇಪಣೆ ಹಾಗೂ ಸಲಹೆಗಳನ್ನು ಪರಿಶೀಲಿಸಿ ಪಾಲಿಕೆಗಳ ವಾಡ್೯ ವಾರು ಕ್ಷೇತ್ರ ಪುನರ್ ವಿಂಗಡನೆ ಅಂತಿಮಗೊಳಿಸಲಾಗುವುದು ಎಂದು ಗೆಜೆಟ್ ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.
ಭಾರೀ ಸಂಖ್ಯೆಯ ವಾರ್ಡ್! : 5 ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟಾರೆ 368 ವಾರ್ಡ್ ಗಳನ್ನು ರಚನೆ ಮಾಡಲಾಗಿದೆ! ಸದರಿ ವಾರ್ಡ್ ಗಳನ್ನು 5 ಪಾಲಿಕೆಗಳಿಗೆ ಹಂಚಿಕೆ ಮಾಡಲಾಗಿದೆ.
ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಸ್ತಿತ್ವದಲ್ಲಿದ್ದ ವೇಳೆ, ಒಟ್ಟಾರೆ 198 ವಾರ್ಡ್ ಗಳಿದ್ದವು. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ದಡಿ, ಭಾರೀ ಸಂಖ್ಯೆಯಲ್ಲಿ ವಾರ್ಡ್ ಗಳನ್ನು ರಚಿಸಲಾಗಿದೆ.
ಹಂಚಿಕೆ ವಿವರ : 5 ಪಾಲಿಕೆಗಳ ವಾರ್ಡ್ ಹಂಚಿಕೆ ವಿವರ ಮುಂದಿನಂತಿದೆ. ಬೆಂಗಳೂರು ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ 111 ವಾರ್ಡ್ ರಚಿಸಲಾಗಿದೆ. ಇದು ಅತೀ ಹೆಚ್ಚು ವಾರ್ಡ್ ಹೊಂದಿರುವ ಪಾಲಿಕೆಯಾಗಲಿದೆ.
ಉಳಿದಂತೆ ಬೆಂಗಳೂರು ಕೇಂದ್ರ ಪಾಲಿಕೆಯ ವ್ಯಾಪ್ತಿಯಲ್ಲಿ 63 ವಾರ್ಡ್, ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ 72 ವಾರ್ಡ್, ಬೆಂಗಳೂರು ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ 72 ವಾರ್ಡ್ ಹಾಗೂ ಬೆಂಗಳೂರು ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ 50 ವಾರ್ಡ್ ರಚನೆ ಮಾಡಲಾಗಿದೆ.
Bengaluru, October 1: After the Greater Bengaluru Authority (GBA) came into existence, five new municipal corporations were formed. Now, the state government has issued a gazette notification on Tuesday dividing the said corporations into wards.
A total of 368 wards have been created within the jurisdiction of 5 corporations! The said wards have been allocated to 5 corporations. Earlier, when the Bruhat Bengaluru Mahanagara Palike (BBMP) existed, there were a total of 198 wards. Now, under the Greater Bengaluru Authority (GBA), the number of wards has been increased significantly.