Shivamogga: Doddamma Charitable Trust presents awards to achievers ಶಿವಮೊಗ್ಗ : ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ನಿಂದ ಸಾಧಕರಿಗೆ ಪ್ರಶಸ್ತಿ ಪ್ರದಾನ

shimoga | ಶಿವಮೊಗ್ಗ : ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ನಿಂದ ಸಾಧಕರಿಗೆ ಪ್ರಶಸ್ತಿ ಪ್ರದಾನ

ಶಿವಮೊಗ್ಗ, ಅಕ್ಟೋಬರ್ 2 : ಶಿವಮೊಗ್ಗ ನಗರದ ಕೆಹೆಚ್’ಬಿ ಪ್ರೆಸ್ ಕಾಲೋನಿಯಲ್ಲಿ, ಅಕ್ಟೋಬರ್ 2 ರಂದು ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಶರನ್ನವರಾತ್ರಿ ಮಹೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.

ಮಧ್ಯಪ್ರದೇಶದ ಇಂದೂರಿನಲ್ಲಿ 22 ಎಕರೆ ಬಂಜರು ಭೂಮಿಯನ್ನು ಅರಣ್ಯವಾಗಿ ಪರಿವರ್ತಿಸಿದ ಪರಿಸರ ಪ್ರೇಮಿ ಡಾ. ಶಂಕರ್ ಲಾಲ್ ಗಾರ್ಗ್ ಅವರಿಗೆ ‘ಶ್ರೀ ದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪ್ರಶಸ್ತಿ’ ಜೊತೆಗೆ 1 ಲಕ್ಷ ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಬೆಂಗಳೂರಿನ ಸೌಂದರ್ಯ ಲಹರಿ ಉಪಾಸಕರಾದ ಆಶಾ ಆರ್ ಕುಮಾರ್ ಅವರಿಗೆ ‘ಲಲಿತಾ ಪರಸ್ಕಾರ – 2025’ ಪ್ರಶಸ್ತಿ ಹಾಗೂ 10 ಸಾವಿರ ನಗದು ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪುರಸ್ಕೃತ ಡಾ. ಶಂಕರ್ ಲಾಲ್ ಗಾರ್ಗ್ ಅವರು ಮಾತನಾಡಿ, ಸರ್ಕಾರಿ ಹುದ್ದೆಯಿಂದ ನಿವೃತ್ತಿಯಾದ ನಂತರ 22 ಎಕರೆ ಬಂಜರು ಭೂಮಿಯಲ್ಲಿ ಸುಮಾರು 50 ಸಾವಿರ ಮರಗಳನ್ನು ಬೆಳೆಸಲಾಗಿದೆ. ಪರಿಸರದೊಂದಿಗೆ ತಮ್ಮ ಜೀವನ ಸಾಗಿದೆ. ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಮರಗಳನ್ನು ಬೆಳೆಸುವ ಯೋಜನೆ ತಮ್ಮದಾಗಿದೆ ಎಂದರು.

ಸೌಂದರ್ಯ ಲಹರಿ ಉಪಾಸಕಾರದ ಆಶಾ ಆರ್ ಕುಮಾರ್ ಅವರು ಮಾತನಾಡಿ, ‘ಲಲಿತಾ ಪುರಸ್ಕಾರ ಗೌರವ ನೀಡಿ ಸನ್ಮಾನಿಸಿರುವುದು ತಮಗೆ ಅತೀವ ಸಂತಸ ಉಂಟು ಮಾಡಿದೆ. ಮತ್ತಷ್ಟು ಸಾಧನೆಗೆ ಪ್ರೇರಕವಾಗಿದೆ’ ಎಂದು ತಿಳಿಸಿದರು.

ಉದ್ಘಾಟನೆ : ಪ್ರಶಸ್ತಿ ಪ್ರದಾನಕ್ಕೂ ಮುನ್ನಾ ಸಮಾರಂಭದ ಉದ್ಘಾಟನೆಯನ್ನು ಹಿರಿಯೂರಿನ ಶಾರದಾಶ್ರಮದ ಅಧ್ಯಕ್ಷರಾದ ಮಾತಾ ಚೈತನ್ಯಮಯಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ‘ಪ್ರಶಸ್ತಿ ಪುರಸ್ಕೃತರ ಸಾಧನೆ ಸರ್ವರಿಗೂ ಮಾದರಿಯಾಗಿದೆ. ಭಗವತಿ ನಾಮಸ್ಮರಣೆ, ಉತ್ತಮ ಸಂಸ್ಕಾರಗಳಿಂದ ಜೀವನದಲ್ಲಿ ಸಾಧನೆ ಸಾಧ್ಯವಾಗಲಿದೆ’ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಷ್ಟ್ರೀಯ ಪ್ರಶಸ್ತಿ ತೀರ್ಪುಗಾರರು ಹಾಗೂ ಸಾಹಿತಿ ಎಂ ಎನ್ ಸುಂದರ್ ರಾಜ್ ಅವರು ಮಾತನಾಡಿ, ‘ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ಪ್ರತಿ ವರ್ಷ ಸಮಾಜದ ವಿವಿಧ ವರ್ಗಗಳ ಸಾಧಕರನ್ನು ಗುರುತಿಸಿ, ಸನ್ಮಾನಿಸಿಕೊಂಡು ಬರುತ್ತಿದೆ. ಟ್ರಸ್ಟ್ ವೊಂದು 1 ಲಕ್ಷ ರೂ. ಮೊತ್ತದ ಪ್ರಶಸ್ತಿ ನೀಡುತ್ತಿರುವುದು ಇದೇ ಮೊದಲು. ಇದು ನಿಜಕ್ಕೂ ಅಭಿನಂದನೀಯ ಸಂಗತಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ದೊಡ್ಡಮ್ಮದೇವಿ ಉಪಾಸಕರಾದ ಸಿದ್ದಪ್ಪಾಜಿ ಅವರು ಮಾತನಾಡಿ, ‘ನಾವೆಲ್ಲರೂ ಭಗವತಿ ದಾಸರಾಗಬೇಕು. ಸನ್ಮಾರ್ಗದಲ್ಲಿ ಮುನ್ನಡೆಬೇಕು. ಆಗ ಮಾತ್ರ ಇಷ್ಟಾರ್ಥ ಸಿದ್ಧಿಯಾಗಲಿದೆ. ಇಷ್ಟರಲ್ಲಿಯೇ ದೊಡ್ಡಮ್ಮ ದೇವಿ ಶಕ್ತಿ ಪೀಠದ ಗುದ್ದಲಿಪೂಜೆ ನೆರವೇರಲಿದೆ. ಮುಂದಿನ ದಿನಗಳಲ್ಲಿಯೂ ಟ್ರಸ್ಟ್ ಮೂಲಕ ಸಮಾಜಮುಖಿ ಕೆಲಸಕಾರ್ಯ ಮಾಡಲಾಗುವುದು’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಕ್ತಾಭಟ್ ನೇತೃತ್ವದಲ್ಲಿ ಸಾಮೂಹಿಕ ದುರ್ಗಾ ಕವಚ ಪಠಣ, ಗಾಯತ್ರಿ ವಿಶ್ವಕರ್ಮ ಭಜನಾ ಮಂಡಳಿಯ ಅನ್ನಪೂರ್ಣ ಕಾಳಚಾರ್ ನೇತೃತ್ವದಲ್ಲಿ ಭಜನೆ, ಕುಮಾರಿ ಕಾವ್ಯರಿಂದ ಗಾಯನ ಹಾಗೂ ಕುಮಾರಿ ಸನ್ಮತಿ ಅವರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು. ಟ್ರಸ್ಟ್ ನ ಕಾರ್ಯದರ್ಶಿ ರಾಧಾ ಎಂ ಸಮಾರಂಭ ನಿರ್ವಹಿಸಿದರು. ನಿರೂಪಣೆಯನ್ನು ಪುರುಷೋತ್ತಮ್ ಹಾಗೂ ವಂದನಾರ್ಪಣೆಯನ್ನು ರಾಮಕೃಷ್ಣ ನಡೆಸಿಕೊಟ್ಟರು.

*** ಸಮಾರಂಭದ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ದೊಡ್ಡಮ್ಮ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ಹಾಗೆಯೇ ದೊಡ್ಡಮ್ಮ ದೇವಾಲಯದಲ್ಲಿ ತೊಟ್ಟಿಲು ಶಾಸ್ತ್ರ ನೆರವೇರಿತು. ಸುಮಾರು 10 ಕ್ಕೂ ಹೆಚ್ಚು ಮಕ್ಕಳಿಗೆ ನಾಮಕರಣ ನಡೆಸಲಾಯಿತು. ಇದೇ ವೇಳೆ ಮಹಾಶಕ್ತಿ ವಾರ್ಷಿಕ ವಿಶೇಷ 2 ನೇ ಸಂಚಿಕೆ ಬಿಡುಗಡೆ ಮಾಡಲಾಯಿತು.

Shivamogga, October 2: The Sharannavaratri Mahotsav and award ceremony was organized by the Doddamma Charitable Trust on October 2 at KHB Press Colony in Shivamogga city. Dr. Shankar Lal Garg, an environmentalist who converted 22 acres of barren land into a forest in Indore, Madhya Pradesh, was felicitated with the ‘Shri Doddamma Devi Anugraha National Award’ along with a cash award of Rs 1 lakh. Asha R. Kumar, a beauty enthusiast from Bengaluru, was honored with the ‘Lalita Paraskar – 2025’ award and a cash prize of Rs. 10,000.

Greater Bengaluru: A total of 368 wards have been formed under the jurisdiction of 5 municipal corporations!ಗ್ರೇಟರ್ ಬೆಂಗಳೂರ : 5 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರೋಬ್ಬರಿ 368 ವಾರ್ಡ್ ರಚನೆ! Previous post bengaluru news | ಗ್ರೇಟರ್ ಬೆಂಗಳೂರು : 5 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರೋಬ್ಬರಿ 368 ವಾರ್ಡ್ ರಚನೆ!
Shimoga: Mahatma Gandhi - Lal Bahadur Shastri Birth Anniversary Ceremony ಶಿವಮೊಗ್ಗ : ಮಹಾತ್ಮ ಗಾಂಧೀಜಿ – ಲಾಲ್ ಬಹದ್ಧೂರ್ ಶಾಸ್ತ್ರೀ ಜನ್ಮ ದಿನಾಚರಣೆ ಸಮಾರಂಭ Next post shimoga | ಶಿವಮೊಗ್ಗ : ಮಹಾತ್ಮ ಗಾಂಧೀಜಿ – ಲಾಲ್ ಬಹದ್ದೂರ್ ಶಾಸ್ತ್ರೀ ಜನ್ಮ ದಿನಾಚರಣೆ ಸಮಾರಂಭ