shimoga palike news | ಶಿವಮೊಗ್ಗ ಪಾಲಿಕೆಯಿಂದ ಇ-ಆಸ್ತಿ ಆಂದೋಲನ : ಯಾವಾಗ? ಎಲ್ಲೆಲ್ಲಿ?

E-Asti Movement by Shivamogga Corporation: When? Where? ಶಿವಮೊಗ್ಗ ಪಾಲಿಕೆಯಿಂದ ಇ-ಆಸ್ತಿ ಆಂದೋಲನ : ಯಾವಾಗ? ಎಲ್ಲೆಲ್ಲಿ?

ಶಿವಮೊಗ್ಗ (shivamogga), ನವೆಂಬರ್ 11: ನವೆಂಬರ್ 11 ರಿಂದ ಡಿಸೆಂಬರ್ 03 ರವರೆಗೆ, ವಿವಿಧ ವಾರ್ಡ್ ಗಳಲ್ಲಿ ಪಾಲಿಕೆಯಿಂದ ಇ – ಆಸ್ತಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸ್ಥಳದಲ್ಲಿಯೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಪಾಲಿಕೆ ಆಯುಕ್ತ ಮಾಯಣ್ಣಗೌಡ ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಇ-ಆಸ್ತಿ (ಇ-ಖಾತಾ) ಪಡೆಯುವುದು ಕಡ್ಡಾಯವಾಗಿದೆ. ಆಸ್ತಿ ಮಾಲೀಕರು ಕರ್ನಾಟಕ ಒನ್ / ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಅಥವಾ ಪಾಲಿಕೆಯ 3 ವಲಯ ಕಚೇರಿಗಳಲ್ಲಿ ಖುದ್ದಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದ್ದಾರೆ.’

ಪಾಲಿಕೆ ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿದಾಗ ಸೂಕ್ತ ದಾಖಲೆ ಒದಗಿಸಿ ಪಡೆಯಬಹುದು. ಇಲ್ಲವೇ, ವಾರ್ಡ್’ವಾರು ‘ಇ-ಖಾತಾ ಮೇಳ’ ದಲ್ಲಿ ಅರ್ಜಿ ಸಲ್ಲಿಸಬಹುದು ಹಾಗೂ Citizen Portal Link : https//eaasthi.karnataka.gov.in ಇಲ್ಲಿ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ವಿವರ : ಕಂದಾಯ ವಾರ್ಡ್ ಸಂಖ್ಯೆ 35 ಗಾಡಿಕೊಪ್ಪದಲ್ಲಿ ದಿ: 11-11-2025 ಅಗಮುಡಿ ಸಮಾಜ ಸೇವಾ ಸಂಘ, ಆಲ್ಕೋಳ ವೃತ್ತ. ವಾರ್ಡ್ ಸಂಖ್ಯೆ 34 ವಿನೋಬನಗರ ದಿ: 13-11-2025 ಆಟೋ ಕಾಂಪ್ಲೆಕ್ಸ್, ಪ್ಲಾಟ್ ನಂ 61, ಶ್ರೀ ಮಲ್ಲಿಕಾರ್ಜುನ ಆಗ್ರೋ, 1ನೇ ಮುಖ್ಯರಸ್ತೆ ಶಿವಮೊಗ್ಗ.

ವಾರ್ಡ್ ಸಂಖ್ಯೆ 12 ಗುಡ್ಡೇಕಲ್ ದಿ: 13-11-2025 ಯೋಗಭವನ, 4ನೇ ತಿರುವು ಸಿದ್ದೇಶ್ವರ ನಗರ. ವಾರ್ಡ್ ಸಂಖ್ಯೆ 01 ಸಹ್ಯಾದ್ರಿ ನಗರ ದಿ: 15-11-2025 ತಮಿಳ್ ತಾಯಿ ಸಮುದಾಯ ಭವನ, ಜೆ ಹೆಚ್ ಪಟೇಲ್ ಲೇಔಟ್ ಸೋಮಿನಕೊಪ್ಪ ರಸ್ತೆ. ವಾರ್ಡ್ ಸಂಖ್ಯೆ 08 ಶಾಂತಿನಗರ ದಿ: 19-11-2025 ಗಣಪತಿ ದೇವಸ್ಥಾನ ಮುಂಭಾಗ, 2ನೇ ಮುಖ್ಯರಸ್ತೆ, ರಾಜಾಕಾಲುವೆ ಪಕ್ಕ ಕೃಷಿನಗರ.

ವಾರ್ಡ್ ಸಂಖ್ಯೆ 31 ಹೊಸಮನೆ ದಿ: 19-11-2025 ಸಾರ್ವಜನಿಕ ಗ್ರಂಥಾಲಯ ಶರಾವತಿ ನಗರ. ವಾರ್ಡ್ ಸಂಖ್ಯೆ 16 ಊರುಗಡೂರು ದಿ: 24-11-2025 ಅಶ್ವಥ್ ಕಲಾ ವೇದಿಕೆ, ಪಾರ್ಕ್ ಆವರಣ, ಗಣಪತಿ ದೇವಸ್ಥಾನದ ಹತ್ತಿರ, ನಂಜಪ್ಪ ಲೇಔಟ್, ಬೈಪಾಸ್ ರಸ್ತೆ.

ವಾರ್ಡ್ ಸಂಖ್ಯೆ 26 ಗೋಪಾಳ ದಿ: 26-11-2025 ದ್ರೌಪದಮ್ಮ ದೇವಸ್ಥಾನ ಸಭಾಭವನ ಗೋಪಾಳ. ವಾರ್ಡ್ ಸಂಖ್ಯೆ 27 ಮಿಳಘಟ್ಟ ದಿ: 03-12-2025 ಭಾರತೀಯ ಸಭಾ ಭವನ ಮುಖ್ಯರಸ್ತೆ ಆರ್‌ಎಂಎಲ್ ನಗರ ಇಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಅರ್ಜಿ ಸ್ವೀಕರಿಸಲಾಗುತ್ತದೆ.

ಆಸ್ತಿ ಮಾಲೀಕರು ಅರ್ಜಿ ಸಲ್ಲಿಸುವಾಗ ಮಾಲೀಕತ್ವ ಸಾಬೀತುಪಡಿಸುವ ದಾಖಲೆ, ಮಾಲೀಕರ ಭಾವಚಿತ್ರ ಮತ್ತು ಮಾಲೀಕರ ಗುರುತಿನ ಚೀಟಿ (ವೋಟರ್ ಐಡಿ/ಪ್ಯಾನ್ ಕಾರ್ಡ್/ರೇಷನ್ ಕಾರ್ಡ್/ಡ್ರೈವಿಂಗ್ ಲೈಸೆನ್ಸ್/ಪಾಸ್‌ಪೋರ್ಟ್), ಕಟ್ಟಡದ/ನಿವೇಶನದ ಭಾವಚಿತ್ರ, ಕಟ್ಟಡ ಪರವಾನಗಿ ಪ್ರತಿ (ಇದ್ದಲ್ಲಿ), ವಿದ್ಯುತ್ ಬಿಲ್, ಇತೀಚಿನ ವರ್ಷದ ಕಂದಾಯ ಪಾವತಿ ರಶೀದಿಯನ್ನು ಸಲ್ಲಿಸಬೇಕು ಎಂದು ಮಹಾನಗರಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ ತಿಳಿಸಿದ್ದಾರೆ.

shivamogga, november 11: From November 11 to December 03, the corporation has organized an e-Astis Andolan in various wards. Applications can be submitted on the spot. Corporation Commissioner Mayanna Gowda said that the public should take advantage of this.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →