E-Asti Movement by Shivamogga Corporation: When? Where? ಶಿವಮೊಗ್ಗ ಪಾಲಿಕೆಯಿಂದ ಇ-ಆಸ್ತಿ ಆಂದೋಲನ : ಯಾವಾಗ? ಎಲ್ಲೆಲ್ಲಿ?

shimoga palike news | ಶಿವಮೊಗ್ಗ ಪಾಲಿಕೆಯಿಂದ ಇ-ಆಸ್ತಿ ಆಂದೋಲನ : ಯಾವಾಗ? ಎಲ್ಲೆಲ್ಲಿ?

ಶಿವಮೊಗ್ಗ (shivamogga), ನವೆಂಬರ್ 11: ನವೆಂಬರ್ 11 ರಿಂದ ಡಿಸೆಂಬರ್ 03 ರವರೆಗೆ, ವಿವಿಧ ವಾರ್ಡ್ ಗಳಲ್ಲಿ ಪಾಲಿಕೆಯಿಂದ ಇ – ಆಸ್ತಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸ್ಥಳದಲ್ಲಿಯೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಪಾಲಿಕೆ ಆಯುಕ್ತ ಮಾಯಣ್ಣಗೌಡ ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಇ-ಆಸ್ತಿ (ಇ-ಖಾತಾ) ಪಡೆಯುವುದು ಕಡ್ಡಾಯವಾಗಿದೆ. ಆಸ್ತಿ ಮಾಲೀಕರು ಕರ್ನಾಟಕ ಒನ್ / ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಅಥವಾ ಪಾಲಿಕೆಯ 3 ವಲಯ ಕಚೇರಿಗಳಲ್ಲಿ ಖುದ್ದಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದ್ದಾರೆ.’

ಪಾಲಿಕೆ ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿದಾಗ ಸೂಕ್ತ ದಾಖಲೆ ಒದಗಿಸಿ ಪಡೆಯಬಹುದು. ಇಲ್ಲವೇ, ವಾರ್ಡ್’ವಾರು ‘ಇ-ಖಾತಾ ಮೇಳ’ ದಲ್ಲಿ ಅರ್ಜಿ ಸಲ್ಲಿಸಬಹುದು ಹಾಗೂ Citizen Portal Link : https//eaasthi.karnataka.gov.in ಇಲ್ಲಿ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ವಿವರ : ಕಂದಾಯ ವಾರ್ಡ್ ಸಂಖ್ಯೆ 35 ಗಾಡಿಕೊಪ್ಪದಲ್ಲಿ ದಿ: 11-11-2025 ಅಗಮುಡಿ ಸಮಾಜ ಸೇವಾ ಸಂಘ, ಆಲ್ಕೋಳ ವೃತ್ತ. ವಾರ್ಡ್ ಸಂಖ್ಯೆ 34 ವಿನೋಬನಗರ ದಿ: 13-11-2025 ಆಟೋ ಕಾಂಪ್ಲೆಕ್ಸ್, ಪ್ಲಾಟ್ ನಂ 61, ಶ್ರೀ ಮಲ್ಲಿಕಾರ್ಜುನ ಆಗ್ರೋ, 1ನೇ ಮುಖ್ಯರಸ್ತೆ ಶಿವಮೊಗ್ಗ.

ವಾರ್ಡ್ ಸಂಖ್ಯೆ 12 ಗುಡ್ಡೇಕಲ್ ದಿ: 13-11-2025 ಯೋಗಭವನ, 4ನೇ ತಿರುವು ಸಿದ್ದೇಶ್ವರ ನಗರ. ವಾರ್ಡ್ ಸಂಖ್ಯೆ 01 ಸಹ್ಯಾದ್ರಿ ನಗರ ದಿ: 15-11-2025 ತಮಿಳ್ ತಾಯಿ ಸಮುದಾಯ ಭವನ, ಜೆ ಹೆಚ್ ಪಟೇಲ್ ಲೇಔಟ್ ಸೋಮಿನಕೊಪ್ಪ ರಸ್ತೆ. ವಾರ್ಡ್ ಸಂಖ್ಯೆ 08 ಶಾಂತಿನಗರ ದಿ: 19-11-2025 ಗಣಪತಿ ದೇವಸ್ಥಾನ ಮುಂಭಾಗ, 2ನೇ ಮುಖ್ಯರಸ್ತೆ, ರಾಜಾಕಾಲುವೆ ಪಕ್ಕ ಕೃಷಿನಗರ.

ವಾರ್ಡ್ ಸಂಖ್ಯೆ 31 ಹೊಸಮನೆ ದಿ: 19-11-2025 ಸಾರ್ವಜನಿಕ ಗ್ರಂಥಾಲಯ ಶರಾವತಿ ನಗರ. ವಾರ್ಡ್ ಸಂಖ್ಯೆ 16 ಊರುಗಡೂರು ದಿ: 24-11-2025 ಅಶ್ವಥ್ ಕಲಾ ವೇದಿಕೆ, ಪಾರ್ಕ್ ಆವರಣ, ಗಣಪತಿ ದೇವಸ್ಥಾನದ ಹತ್ತಿರ, ನಂಜಪ್ಪ ಲೇಔಟ್, ಬೈಪಾಸ್ ರಸ್ತೆ.

ವಾರ್ಡ್ ಸಂಖ್ಯೆ 26 ಗೋಪಾಳ ದಿ: 26-11-2025 ದ್ರೌಪದಮ್ಮ ದೇವಸ್ಥಾನ ಸಭಾಭವನ ಗೋಪಾಳ. ವಾರ್ಡ್ ಸಂಖ್ಯೆ 27 ಮಿಳಘಟ್ಟ ದಿ: 03-12-2025 ಭಾರತೀಯ ಸಭಾ ಭವನ ಮುಖ್ಯರಸ್ತೆ ಆರ್‌ಎಂಎಲ್ ನಗರ ಇಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಅರ್ಜಿ ಸ್ವೀಕರಿಸಲಾಗುತ್ತದೆ.

ಆಸ್ತಿ ಮಾಲೀಕರು ಅರ್ಜಿ ಸಲ್ಲಿಸುವಾಗ ಮಾಲೀಕತ್ವ ಸಾಬೀತುಪಡಿಸುವ ದಾಖಲೆ, ಮಾಲೀಕರ ಭಾವಚಿತ್ರ ಮತ್ತು ಮಾಲೀಕರ ಗುರುತಿನ ಚೀಟಿ (ವೋಟರ್ ಐಡಿ/ಪ್ಯಾನ್ ಕಾರ್ಡ್/ರೇಷನ್ ಕಾರ್ಡ್/ಡ್ರೈವಿಂಗ್ ಲೈಸೆನ್ಸ್/ಪಾಸ್‌ಪೋರ್ಟ್), ಕಟ್ಟಡದ/ನಿವೇಶನದ ಭಾವಚಿತ್ರ, ಕಟ್ಟಡ ಪರವಾನಗಿ ಪ್ರತಿ (ಇದ್ದಲ್ಲಿ), ವಿದ್ಯುತ್ ಬಿಲ್, ಇತೀಚಿನ ವರ್ಷದ ಕಂದಾಯ ಪಾವತಿ ರಶೀದಿಯನ್ನು ಸಲ್ಲಿಸಬೇಕು ಎಂದು ಮಹಾನಗರಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ ತಿಳಿಸಿದ್ದಾರೆ.

shivamogga, november 11: From November 11 to December 03, the corporation has organized an e-Astis Andolan in various wards. Applications can be submitted on the spot. Corporation Commissioner Mayanna Gowda said that the public should take advantage of this.

Special Article : Tajuddin Khan – Chairman - Child Welfare Committee (Children's Court) - Shivamogga District ‘Adoption under the law – a lifetime of happiness’ ‘ಕಾನೂನಿನಡಿ ಪಡೆದ ದತ್ತು – ಜೀವನವಿಡಿ ಸುಖದ ಸಂಪತ್ತು’ ವಿಶೇಷ ಲೇಖನ : ತಾಜುದ್ದೀನ್ ಖಾನ್ – ಅಧ್ಯಕ್ಷರು - ಮಕ್ಕಳ ಕಲ್ಯಾಣ ಸಮಿತಿ (ಮಕ್ಕಳ ನ್ಯಾಯ ಪೀಠ) ಶಿವಮೊಗ್ಗ ಜಿಲ್ಲೆ Previous post special article | ‘ಕಾನೂನಿನಡಿ ಪಡೆದ ದತ್ತು – ಜೀವನವಿಡಿ ಸುಖದ ಸಂಪತ್ತು’