job news | ಉದ್ಯೋಗ ಮಾಹಿತಿ | ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

Job Information | Applications invited for the posts of Anganwadi workers and helpers in Shivamogga and Bhadravati taluks. ಉದ್ಯೋಗ ಮಾಹಿತಿ | ಶಿವಮೊಗ್ಗ - ಭದ್ರಾವತಿ ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆ - ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಿವಮೊಗ್ಗ (shimoga), ನವೆಂಬರ್ 16: ಶಿವಮೊಗ್ಗ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ 16 ಕಾರ್ಯಕರ್ತೆಯರು ಮತ್ತು 93 ಸಹಾಯಕಿಯರ ಹುದ್ದೆಗಳನ್ನು ಗೌರವಧನ ಸೇವೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ವೆಬ್‌ಸೈಟ್ https://karnemakaone.kar.nic.in/abcd/ ಮೂಲಕ ಡಿ. 15 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಶಿವಮೊಗ್ಗ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 ಹೆಚ್ಚಿನ ಮಾಹಿತಿಗಾಗಿ ಮೇಲಿನ ವೆಬ್‌ಸೈಟ್ ಅಥವಾ ಶಿವಮೊಗ್ಗ ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸುವುದು.

ಭದ್ರಾವತಿ (bhadravathi), ನವೆಂಬರ್ 16: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಭದ್ರಾವತಿ ತಾಲೂಕು  ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ 19 ಕಾರ್ಯಕರ್ತೆಯರು ಮತ್ತು 59 ಸಹಾಯಕಿಯರ ಹುದ್ದೆಗಳನ್ನು ಗೌರವಧನ ಸೇವೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ವೆಬ್‌ಸೈಟ್ https://karnemakaone.kar.nic.in/abcd/ ಮೂಲಕ ಡಿ. 15 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಭದ್ರಾವತಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 ಹೆಚ್ಚಿನ ಮಾಹಿತಿಗಾಗಿ ಮೇಲಿನ ವೆಬ್‌ಸೈಟ್ ಅಥವಾ ಭದ್ರಾವತಿ ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸುವುದು.

Job Information | Applications invited for the posts of Anganwadi workers and helpers in Shivamogga and Bhadravati taluks.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →