ಭದ್ರಾವತಿ (bhadravathi), ಸೆಪ್ಟೆಂಬರ್ 19: ಅತೀ ವೇಗ ಹಾಗೂ ಅಜಾಗರೂಕವಾಗಿ ಬೈಕ್ ಚಲಾಯಿಸಿ ಪಾದಚಾರಿಯೋರ್ವರ ಸಾವಿಗೆ ಕಾರಣವಾದ ಬೈಕ್ ಚಾಲಕನಿಗೆ, ಭದ್ರಾವತಿಯ 1 ನೇ ಎಸಿಜೆ ಮತ್ತು ಜೆಎಂಎಫ್’ಸಿ ನ್ಯಾಯಾಲಯವು, ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಸೆಪ್ಟೆಂಬರ್ 17 ರಂದು ತೀರ್ಪು ನೀಡಿದೆ.
ಬೈಕ್ ಚಾಲಕ ನಿಖಿಲ್ ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿಯಾಗಿದ್ದಾರೆ. ಅಪರಾಧಿಗೆ 1 ವರ್ಷ 1 ತಿಂಗಳು 15 ದಿವಸ ಜೈಲು ಶಿಕ್ಷೆ ಹಾಗೂ 11 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ನ್ಯಾಯಾಧೀಶರಾದ ನಾಸಿರ ಭಾನು ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ತಿಪ್ಪೇಶ್ ರಾವ್ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ : 27/12/2021 ರಂದು ಘಟನೆ ಅಪಘಾತ ನಡೆದಿತ್ತು. ಭೋಜರಾಜ್ ಎಂಬುವರು ಆನವೇರಿ ಕೈಮರ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಬಜಾಜ್ ಪಲ್ಸರ್ ಬೈಕ್ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿ ಡಿಕ್ಕಿ ಹೊಡೆದಿದ್ದ.
ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಸಂಬಂಧ ಮೃತರ ತಾಯಿಯು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂದಿನ ಇನ್ಸ್’ಪೆಕ್ಟರ್ ಲಕ್ಷ್ಮೀಪತಿ ಅವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
Bhadravati Court Imposes Jail Term and Fine on Motorcyclist: What Was the Reason? | Bhadravati, September 19: On September 17 the 1st ACJ and JMFC Court in Bhadravati delivered a verdict sentencing a motorcyclist to imprisonment and imposing a fine for causing the death of a pedestrian through rash and negligent riding.

