Shivamogga : Robbers who stole a fake bangle and fled after being intimidated by an elderly woman's screams! ಶಿವಮೊಗ್ಗ : ವೃದ್ದೆಯ ನಕಲಿ ಬಳೆ ಕದ್ದು ಪರಾರಿಯಾದ ದರೋಡೆಕೋರರು!

shimoga news | ಶಿವಮೊಗ್ಗ : ವೃದ್ದೆಯ ನಕಲಿ ಬಂಗಾರದ ಬಳೆ ಕದ್ದು ಪರಾರಿಯಾದ ದರೋಡೆಕೋರರು!

ಶಿವಮೊಗ್ಗ (shivamogga), ಜನವರಿ 09: ಬೆಳಿಗ್ಗೆಯೇ ಮನೆಯೊಂದಕ್ಕೆ ಪ್ರವೇಶಿಸಿದ ಇಬ್ಬರು ದರೋಡೆಕೋರರು, ಏಕಾಂಗಿಯಾಗಿದ್ದ ವೃದ್ದೆಗೆ ಬೆದರಿಕೆ ಹಾಕಿ, ಅವರ ಕೈಗಳಲ್ಲಿದ್ದ ನಕಲಿ ಬಂಗಾರದ ಬಳೆಗಳನ್ನು ಕದ್ದು ಪರಾರಿಯಾದ ಘಟನೆ, ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗೋಪಾಳದ ವಿನಾಯಕ ಸರ್ಕಲ್ ಬಳಿಯಿರುವ ಕೆ ಹೆಚ್ ಬಿ ಕಾಲೋನಿಯ ನಿವಾಸಿ ಶಿವಲಿಂಗಮ್ಮ (70) ಎಂಬುವರ ಮನೆಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಘಟನೆ ಹಿನ್ನೆಲೆ : ಕಳೆದ ಬುಧವಾರ ಬೆಳಿಗ್ಗೆ 11.30 ರ ಸರಿಸುಮಾರಿಗೆ ಘಟನೆ ನಡೆದಿದೆ. ಶಿವಲಿಂಗಮ್ಮ ಅವರ ಕುಟುಂಬ ಸದಸ್ಯರು ಕೆಲಸಕಾರ್ಯಗಳ ನಿಮಿತ್ತ ಹೊರತೆರಳಿದ್ದು, ಅವರು ಓರ್ವರೇ ಮನೆಯಲ್ಲಿದ್ದರು.

ಇದರ ಮಾಹಿತಿ ತಿಳಿದಿದ್ದ ಇಬ್ಬರು ದುಷ್ಕರ್ಮಿಗಳು ಮನೆಗೆ ಆಗಮಿಸಿದ್ದಾರೆ. ಅಜ್ಜಿಯ ಬಾಯಿ ಹಾಗೂ ಕೈಗಳನ್ನು ಬಟ್ಟೆಯಿಂದ ಕಟ್ಟಿ ಹಾಕಿ, ಬೆದರಿಕೆ ಹಾಕಿದ್ದಾರೆ. ತರಾತುರಿಯಲ್ಲಿ ಅಜ್ಜಿಯ ಕೈಗಳಲ್ಲಿದ್ದ ನಾಲ್ಕು ನಕಲಿ ಬಂಗಾರದ ಬಳೆಗಳನ್ನು ಕಿತ್ತುಕೊಂಡು ಓಡಿ ಹೋಗಿದ್ದಾರೆ.

ನಂತರ ಬಾಯಿಗೆ ಕಟ್ಟಿದ್ದ ಬಟ್ಟೆ ಬಿಚ್ಚಿಕೊಂಡ ವೃದ್ದೆಯು, ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ತುಂಗಾನಗರ ಪೊಲೀಸ್ ಠಾಣೆ ಕ್ರೈಂ ವಿಭಾಗದ ಸಬ್ ಇನ್ಸ್’ಪೆಕ್ಟರ್ ಗಾದಿ ಲಿಂಗಪ್ಪರವರು ಭೇಟಿಯಿತ್ತು ಪರಿಶೀಲಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಕ್ರಮಕೈಗೊಂಡಿದ್ದಾರೆ.

Shivamogga, January 09: An incident took place in the Tunganagar police station limits of Shivamogga where two robbers entered a house in broad daylight, tied the hands and feet of an elderly woman, stole the fake gold bangles she was wearing and fled.

Shivamogga: Power outages in various places on January 10th! ಶಿವಮೊಗ್ಗ : ಜನವರಿ 10 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ! Previous post shimoga news | ಶಿವಮೊಗ್ಗ : ಜನವರಿ 10 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!
Shivamogga: Engineering student dies of heart attack! ಶಿವಮೊಗ್ಗ : ಹೃದಯಾಘಾತದಿಂದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು! Next post shimoga news | ಶಿವಮೊಗ್ಗ : ಹೃದಯಾಘಾತದಿಂದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು!