shimoga job news | ಫೆಬ್ರವರಿ 27 ರಂದು ಶಿವಮೊಗ್ಗ ಜಿಲ್ಲಾ ಮಟ್ಟದ ಉದ್ಯೋಗ ಮೇಳ

A district-level job fair will be held on February 27 in Shivamogga. ಫೆಬ್ರವರಿ 27 ರಂದು ಶಿವಮೊಗ್ಗ ಜಿಲ್ಲಾ ಮಟ್ಟದ ಉದ್ಯೋಗ ಮೇಳ

ಶಿವಮೊಗ್ಗ, ಫೆಬ್ರವರಿ 24 : ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದ ಪಕ್ಕದಲ್ಲಿರುವ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ತುಳಸಿ ವಾಣಿಜ್ಯ ಕಾಲೇಜ್ ಆವರಣದಲ್ಲಿ, ಫೆಬ್ರವರಿ 27 ರಂದು ಬೆಳಿಗ್ಗೆ 10.30 ಕ್ಕೆ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌ಅವರು ತಿಳಿಸಿದ್ದಾರೆ.

ಫೆಬ್ರವರಿ 24 ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು.  ಈ ಉದ್ಯೋಗ ಮೇಳದಲ್ಲಿ ಶಿವಮೊಗ್ಗ ಹಾಗೂ ರಾಜ್ಯದೆಲ್ಲೆಡೆಯಿಂದ 50 ಕ್ಕೂ ಹೆಚ್ಚಿನ ಪ್ರತಿಷ್ಠಿತ ಕಂಪನಿಗಳ ಮುಖ್ಯಸ್ಥರು ಭಾಗವಹಿಸಿಲಿದ್ದಾರೆ.

ಎಸ್.ಎಸ್.‌ಎಲ್.‌ಸಿ.ಯಲ್ಲಿ ಉತ್ತೀರ್ಣ/ಅನುತ್ತೀರ್ಣ, ಪಿ.ಯು.ಸಿ., ಯಾವುದೇ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್‌ ಮತ್ತಿತರ ಹೆಚ್ಚಿನ ವಿದ್ಯಾಭ್ಯಾಸ ಹೊಂದಿರುವ ಯುವಕ -ಯುವತಿಯರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಉಚಿತ ಪ್ರವೇಶಾವಕಾಶವಿದ್ದು, ಯುವತಿಯರಿಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ. ಈ ಉದ್ಯೋಗಮೇಳದಲ್ಲಿ ಐ.ಟಿ., ಕಂಪ್ಯೂಟರ್‌, ಆಟೋಮೊಬೈಲ್‌, ಮ್ಯಾನುಫ್ಯಾಕ್ಚರಿಂಗ್‌, ನರ್ಸಿಂಗ್‌, ಬ್ಯಾಂಕಿಂಗ್‌, ಇನ್ಶೂರೆನ್ಸ್‌ಹೀಗೆ ಇನ್ನೂ ಹಲವು ಕ್ಷೇತ್ರಗಳಲ್ಲಿ ಭಾಗವಹಿಸಿದ ಅಭ್ಯರ್ಥಿಗಳ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗಾವಕಾಶಗಳು ದೊರೆಯಲಿವೆ.

ವ್ಯಾಸಂಗ ಮುಂದುವರೆಸುತ್ತಿರುವ ವಿದ್ಯಾರ್ಥಿಗಳು ಇಂಟರ್ನಶಿಫ್‌ ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳೂ ಸಹ ಈ ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದ ಅವರು, ಆಸಕ್ತರು ತಮ್ಮ ಸ್ವವಿವರ, ಭಾವಚಿತ್ರ, ಆಧಾರ್‌ಕಾರ್ಡ್‌, ತಮ್ಮ ಶೈಕ್ಷಣಿಕ ವಿದ್ಯಾರ್ಹತೆಯ ಪ್ರಮಾಣಪತ್ರ ಹಾಗೂ ಅವುಗಳ ಐದು ಝೆರಾಕ್ಸ್‌ಪ್ರತಿಗಳೊಂದಿಗೆ ಭಾಗವಹಿಸಬಹುದಾಗಿದೆ. ಆನ್‌ಲೈನ್‌ಮೂಲಕ ಹಾಗೂ ಉದ್ಯೋಗಮೇಳದ ಸ್ಥಳದಲ್ಲಿ ಖುದ್ದಾಗಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದವರು ತಿಳಿಸಿದರು.

ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಎನ್.‌ಆರ್.‌ಎಲ್.‌ಎಂ.ಘಟಕ, ಜಿಲ್ಲಾ ಪಂಚಾಯತ್‌ಶಿವಮೊಗ್ಗ ಮತ್ತು ತಾಲೂಕು ಪಂಚಾಯತ್‌ಎನ್.‌ಆರ್.‌ಎಲ್.‌ಎಂ.ವಿಭಾಗಗಳನ್ನು ಸಂಪರ್ಕಿಸಬಹುದಾಗಿದೆ ಎಂದವರು ತಿಳಿಸಿದರು.’

A district-level job fair will be held on February 27 in Shivamogga.

Shivamogga, February 24: District Panchayat Chief Executive Officer N. Hemanth informed that a district-level job fair has been organized on February 27 at 10:30 AM at the premises of Acharya Tulsi National Commerce College, located next to Kuvempu Rangamandira in the city. He was addressing the media on February 24 at the Deputy Commissioner’s Office auditorium in the city. More than 50 reputed companies from Shivamogga and across the state will participate in the job fair. Candidates who have passed or failed SSLC, PUC, as well as those with any degree, diploma, engineering qualification, or higher education are eligible to participate. Entry is free, and special preference will be given to women candidates. Job opportunities will be available in various sectors such as IT, computer, automobile, manufacturing, nursing, banking, insurance, and several other fields, based on the candidates’ educational qualifications. Students who are continuing their studies and candidates seeking internship training can also participate. Interested candidates should bring their resume, passport-size photograph, Aadhaar card, educational qualification certificates, and five photocopies of each. Registration can be done online as well as directly at the venue on the day of the job fair. For more details, candidates may contact the NRLM unit of the District Panchayat Shivamogga or the NRLM section of the respective Taluk Panchayat.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *