ಶಿವಮೊಗ್ಗ / ಶಿಕಾರಿಪುರ, ಮಾರ್ಚ್ 02: ಪ್ರತ್ಯೇಕ ಘಟನೆಗಳಲ್ಲಿ ಶಿವಮೊಗ್ಗದಲ್ಲಿ ಬಾಲಕ ಹಾಗೂ ಶಿಕಾರಿಪುರ ತಾಲೂಕಿನಲ್ಲಿ ಹಿರಿಯ ವ್ಯಕ್ತಿಯೋರ್ವರು ಕಣ್ಮರೆಯಾಗಿರುವ ಘಟನೆ ನಡೆದಿದೆ.
ಶಿವಮೊಗ್ಗ : ನಗರದ ರಾಗಿಗುಡ್ಡ ಬಡಾವಣೆ ನಿವಾಸಿ ಎಜುಕೇಲ್ ರಾಜು (15) ಎಂಬ ಬಾಲಕ ಫೆಬ್ರವರಿ 25 ರಂದು ಮನೆಯಿಂದ ಹೊರಗೆ ಹೋದವನು ಈವರೆಗೆ ಹಿಂದಿರುಗದೆ ಕಣ್ಮರೆಯಾಗಿದ್ದಾನೆ.
ಕಾಣೆಯಾದ ಬಾಲಕನು 8 ನೇ ತರಗತಿ ಓದುತ್ತಿದ್ದಾನೆ. ಸುಮಾರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು,ಬಿಳಿ ಮೈಬಣ್ಣ,ಕೋಲು ಮುಖ ಹೊಂದಿದ್ದಾನೆ. ಕನ್ನಡ, ಇಂಗ್ಲೀಷ್,ತಮಿಳು,ತೆಲುಗು ಭಾಷೆ ಮಾತನಾಡುತ್ತಾನೆ.
ಈತನು ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಶರ್ಟ್,ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಬಾಲಕನ ಬಗ್ಗೆ ಯಾರಿಗಾದರೂ ಸುಳಿವು ದೊರೆತಲ್ಲಿ ಗ್ರಾಮಾಂತರ ಪೋಲೀಸ್ ಠಾಣೆ ದೂ.ಸಂ.: 08182-261400, 261418, 9480803332, 9480803350 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಗ್ರಾಮಾಂತರ ಪೋಲಿಸ್ ಠಾಣೆ ಪ್ರಕಟಣೆ ತಿಳಿಸಿದೆ.

ಶಿಕಾರಿಪುರ : ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ರಾಗಿಕೊಪ್ಪ ವಾಸಿ ಗಿರಿಜಮ್ಮ ಎಂಬುವವರ ಪತಿ ಪರಮೇಶ್ವರಪ್ಪ ಬಿನ್ ಹನುಮಂತಪ್ಪ (65) ಎಂಬುವರು ಕಳೆದ ಜನವರಿ 21 ರಂದು ಬೆಳಗ್ಗೆ ಮನೆಯಿಂದ ಗದ್ದೆಗೆ ಎಂದು ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.
ಚಹರೆ : 5.5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ ಹೊಂದಿದ್ದು, ಮನೆಯಿಂದ ಹೋಗುವಾಗ ನೀಲಿ ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ನೀಲಿ ಬಣ್ಣದ ಚೆಕ್ಸ್ ಲುಂಗಿ ಧರಿಸಿರುತ್ತಾರೆ. ಇವರ ಬಗ್ಗೆ ಸುಳಿವು ದೊರೆತಲ್ಲಿ ಶಿರಾಳಕೊಪ್ಪ ಪೊಲೀಸ್ ಠಾಣೆ ದೂ.ಸಂ.: 8722983310/ 9480803367 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
In Separate Incidents : Boy Missing in Shivamogga, Elderly Man Missing in Shiralakoppa
Shivamogga / Shikaripura, March 02: In separate incidents, a boy in Shivamogga and an elderly man in Shikaripura taluk have gone missing.
Shivamogga: Ezekiel Raju (15), resident of Ragigudda locality, went out of his house on February 25 and has not returned till now. The missing boy is studying in 8th standard. He is about 5 feet tall, of average build, fair complexion, with an oval face. He speaks Kannada, English, Tamil, and Telugu. At the time of leaving home, he was wearing a white shirt and black pants. Anyone with information about the boy is requested to contact the Rural Police Station at: 08182-261400, 261418, 9480803332, 9480803350.
Shikaripura: In Shiralakoppa police station limits, Parameshwarappa bin Hanumanthappa (65), husband of Girijamma and resident of Ragikoppa, went to his field on the morning of January 21 and has not returned till now. Description: 5.5 feet tall, oval face, average build, wheatish complexion. At the time of leaving home, he was wearing a blue full-sleeve shirt and a blue checked lungi. Anyone with information is requested to contact Shiralakoppa Police Station at: 8722983310 / 9480803367.

