shimoga | shikaripur news | ಶಿಕಾರಿಪುರ : ಒಂದೇ ದಿನ ಮೂವರ ಮೇಲೆ ಚಿರತೆ ದಾಳಿ!

Shikaripura: Leopard Attacks Three Villagers in a Single Day! ಶಿಕಾರಿಪುರ : ಒಂದೇ ದಿನ ಮೂವರ ಮೇಲೆ ಚಿರತೆ ದಾಳಿ!

ಶಿಕಾರಿಪುರ (shikaripura), ಮಾರ್ಚ್ 22 : ಒಂದೇ ದಿನ ಮೂವರು ಗ್ರಾಮಸ್ಥರ ಮೇಲೆ ಚಿರತೆಯೊಂದು ದಾಳಿ ನಡೆಸಿದ ಘಟನೆ ಶಿಕಾರಿಪುರ ತಾಲೂಕಿನ ತಡಸನಹಳ್ಳಿ, ಅಡಗಂಟಿ ಹಾಗೂ ಮುತ್ತಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಮಾರ್ಚ್ 21 ರಂದು ನಡೆದಿದೆ.

ಘಟನೆಯಲ್ಲಿ ಇಬ್ಬರಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಅವರನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮತ್ತೋರ್ವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಎಲ್ಲೆಲ್ಲೆ ದಾಳಿ? : ತಡಸನಹಳ್ಳಿ ಗ್ರಾಮದ ಮುತ್ತಣ್ಣ ಎಂಬವರು ಎಂದಿನಂತೆ ಬೆಳಿಗ್ಗೆ ಗದ್ದೆಗೆ ನೀರು ಹಾಯಿಸಲು ತೆರಳಿದ್ದರು. ಈ ವೇಳೆ ಚಿರತೆ ದಾಳಿ ನಡೆಸಿ ಅವರನ್ನು ಗಾಯಗೊಳಿಸಿದೆ. ಅವರನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಡಗಂಟಿ ಗ್ರಾಮದ ಸುದೀಪ್ ಎಂಬವರು ಸಂಜೆ ವೇಳೆ, ಮುತ್ತಗಿ ಗ್ರಾಮ ಸಮೀಪದ ಮೆಕ್ಕೆಜೋಳದ ಜಮೀನಿನಲ್ಲಿ, ಜಾನುವಾರುಗಳಿಗೆ ಮೇವು ತರಲು ತೆರಳಿದ್ದರು. ಈ ವೇಳೆ ಇವರ ಮೇಲೆ ಚಿರತೆ ದಾಳಿ ನಡೆಸಿ, ಗಾಯಗೊಳಿಸಿದೆ. ಇವರನ್ನು ಕೂಡ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳಿದಂತೆ ಶನಿವಾರ ಸಂಜೆ ತಡಸನಹಳ್ಳಿ, ಅಡಗಂಟಿ ಗ್ರಾಮದ ನಡುವಿನ ಮುಖ್ಯರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಹೂವ್ಯನಾಯ್ಕ ಎಂಬುವರ ಮೇಲೆ ಚಿರತೆ ದಾಳಿ ನಡೆಸಿದೆ. ಹೂವ್ಯನಾಯ್ಕ್ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಅವರು ಮನೆಗೆ ಮರಳಿದ್ದಾರೆ.

ಕಾರ್ಯಾಚರಣೆ : ಚಿರತೆ ದಾಳಿಯಿಂದ ತಡಸನಹಳ್ಳಿ, ಅಡಗಂಟಿ, ಮುತ್ತಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಿತರಾಗಿದ್ದಾರೆ. ಜಮೀನುಗಳಿಗೆ ಹೋಗಲು ಭಯ ಪಡುತ್ತಿದ್ದಾರೆ. ಅರಣ್ಯ ಇಲಾಖೆಯು ಚಿರತೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹಾಗೆಯೇ ತಡಸನಹಳ್ಳಿ, ಮುತ್ತಗಿ ಕಿರು ಅರಣ್ಯ ಸೇರಿದಂತೆ ಮೂರು ಕಡೆ ಚಿರತೆ ಸೆರೆಗೆ ಬೋನು ಇರಿಸಿದ್ದಾರೆ.

🐆 Shikaripura: Leopard Attacks Three Villagers in a Single Day!

Shikaripura, March 22 – A leopard attacked three villagers in a single day across Tadasanahalli, Adaganti, and Muttige villages in Shikaripura taluk on March 21.

🏥 Injuries and Treatment

  • Two individuals sustained serious injuries and were admitted to McGann Government Hospital in Shivamogga.
  • One person suffered minor injuries, received primary treatment, and returned home.

📍 Where Did the Attacks Occur?

  • Tadasanahalli: Muttanna was attacked while irrigating his field in the morning.
  • Adaganti: Sudeep was attacked in the evening while collecting fodder near a maize field in Muttige.
  • Between Tadasanahalli and Adaganti: Huvayanayak was attacked while riding his bike on the main road. He sustained minor injuries.

🚨 Forest Department Action

  • Villagers in Tadasanahalli, Adaganti, and Muttige are fearful and anxious.
  • Forest officials have launched a search operation.
  • Cages (traps) have been placed in three locations:
    • Tadasanahalli
    • Muttige
    • Adaganti forest patches

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *