hosanagara news | ಹೊಸನಗರದ ರಿಪ್ಪನ್’ಪೇಟೆ ಸಮೀಪ ಬೆಂಕಿಗಾಹುತಿಯಾದ ಓಮ್ನಿ ಕಾರು!

Omni Car Burnt Near Ripponpete, Hosanagarಹೊಸನಗರದ ರಿಪ್ಪನ್’ಪೇಟೆ ಸಮೀಪ ಸುಟ್ಟು ಭಸ್ಮವಾದ ಓಮ್ನಿ ಕಾರು!

ಹೊಸನಗರ (ಶಿವಮೊಗ್ಗ), ಮಾರ್ಚ್ 09: ಚಲಿಸುತ್ತಿರುವ ವೇಳೆಯೇ ಓಮ್ನಿ ಕಾರೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಭಸ್ಮವಾದ ಘಟನೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್’ಪೇಟೆ ಸಮೀಪದ ಬೆಳ್ಳೂರು ಗ್ರಾಮದ ಸಮೀಪ ನಡೆದಿದೆ.

ದ್ಯಾಮಲಾಪುರದ ನಿವಾಸಿ ಶ್ರೀಕಾಂತ್ ಎಂಬುವರಿಗೆ ಸದರಿ ಕಾರು ಸೇರಿದ್ದಾಗಿದೆ. ಇವರು ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

ಸಹೋದರಿಯ ವಿವಾಹ ಆಮಂತ್ರಣ ಪತ್ರಿಕೆ ವಿತರಣೆಗೆಂದು ಕಾರಿನಲ್ಲಿ ಸಂಬಂಧಿಯೋರ್ವರೊಂದಿಗೆ ಶಿವಮೊಗ್ಗಕ್ಕೆ ತೆರಳಿದ್ದರು. ಅಲ್ಲಿಂದ ಊರಿಗೆ ಹಿಂದಿರುಗುವಾಗ ಘಟನೆ ಸಂಭವಿಸಿದೆ.

 

ರಾತ್ರಿ 10. 20 ರ ಸರಿಸುಮಾರಿಗೆ ಕಾರಿನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ತಕ್ಷಣವೇ ಕಾರಿನಲ್ಲಿದ್ದವರು ಹೊರ ಬಂದಿದ್ದು, ನೋಡನೋಡುತ್ತಿದ್ದಂತೆ ಇಡೀ ಕಾರು ಬೆಂಕಿಗಾಹುತಿಯಾಗಿದೆ. ಕಾರಿನಲ್ಲಿದ್ದ ತರಕಾರಿ, ಬಟ್ಟೆ ಮತ್ತೀತರ ವಸ್ತುಗಳು ಹಾನಿಗೀಡಾಗಿವೆ.

 

ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ. ರಿಪ್ಪನ್’ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

🚨 Omni Car Burnt Near Ripponpete, Hosanagar

Hosanagar (Shivamogga), March 09: An incident occurred near Belluru village, close to Ripponpete in Hosanagar taluk, Shivamogga district, where an Omni car caught fire while in motion and was completely gutted.

 

The car belonged to Srikanth, a resident of Dyamalapur, who works in a private company in Bengaluru. He was traveling with a relative to Shivamogga to distribute wedding invitation cards for his sister’s marriage. On their way back home, the accident took place.

 

At around 10:20 PM, smoke suddenly appeared inside the car. The occupants quickly got out, and within moments, the entire vehicle was engulfed in flames. Vegetables, clothes, and other items inside the car were destroyed.

 

It is suspected that the fire was caused by a short circuit. Further details are awaited. The incident falls under the jurisdiction of the Ripponpete Police Station.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *