BREAKING NEWS | T-20 crikcket | ಟಿ-20 ವಿಶ್ವಕಪ್ ಕ್ರಿಕೆಟ್ ಫೈನಲ್ : ಭಾರತಕ್ಕೆ ಭರ್ಜರಿ ಜಯ!

"T20 World Cup Cricket Final: A resounding victory for India!"ಟಿ-20 ವಿಶ್ವಕಪ್ ಕ್ರಿಕೆಟ್ ಫೈನಲ್ : ಭಾರತಕ್ಕೆ ಭರ್ಜರಿ ಜಯ!

ಅಹಮದಬಾದ್, ಮಾರ್ಚ್ 08: ಗುಜರಾತ್ ರಾಜ್ಯದ ಅಹಮದಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಾರ್ಚ್ 08 ರಂದು ನಡೆದ ಟಿ – 20 ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ, ಭಾರತ ತಂಡವು ನ್ಯೂಜಿಲೆಂಡ್ ವಿರುದ್ದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮತ್ತೊಮ್ಮೆ ಟಿ – 20 ಕ್ರಿಕೆಟ್ ನ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಭಾರತ ತಂಡವೊಡ್ಡಿದ್ದ ಸವಾಲಿನ 255 ಮೊತ್ತ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು, 19 ಓವರ್ ಗಳಲ್ಲಿ 159 ರನ್ ಗಳಿಗೆ  ಸರ್ವ ಪತನ ಕಂಡಿತು. ಭಾರತವು 96 ರನ್ ಗಳ ಅಂತರದಲ್ಲಿ ಜಯ ಸಂಪಾದಿಸಿದೆ. ಭಾರತದ ಪರ ಮತ್ತೊಮ್ಮೆ ಜಸ್ಪೀತ್ ಬೂಮ್ರಾ 4 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಎನಿಸಿದರು. ಉಳಿದಂತೆ ಆಕ್ಷರ್ ಪಟೇಲ್ ಅವರು 3 ವಿಕೆಟ್ ಪಡೆದರು.

ಭರ್ಜರಿ ಬ್ಯಾಟಿಂಗ್ :  ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು, ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿತ್ತು. ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಮಾಡಿದರು.

ಸಂಜು ಸ್ಯಾಮ್ಸನ್ 89 (46 ಎಸೆತ), ಅಭಿಷೇಕ್ ಶರ್ಮಾ 52 (21), ಇಶಾನ್ ಕಿಶನ್ 54 (25), ಹಾರ್ದಿಕ್ ಪಾಂಡ್ಯ 18 (13), 0 (1) ಹಾಗೂ ತಿಲಕ್ ವರ್ಮಾ 8 (6) ರನ್ ಗಳಿಸಿದ್ದರು. ಬ್ಯಾಟ್ಸ್’ಮನ್ ಗಳ ಭರ್ಜರಿ ಆಟದ ನೆರವಿನಿಂದ ನ್ಯೂಜಿಲೆಂಡ್ ಗೆ ಬೃಹತ್ ಮೊತ್ತದ ಸವಾಲು ನೀಡಿತ್ತು.

T20 World Cup Cricket Final: A resounding victory for India!

Ahmedabad, March 08: At the Narendra Modi Stadium in Ahmedabad, Gujarat, on March 08, in the T20 World Cup cricket final match, the Indian team achieved a resounding victory against New Zealand. With this, India once again emerged as the T20 cricket world champion.

Chasing the challenging total of 255 set by India, the New Zealand team was all out for 159 runs in 19 overs. India won by a margin of 96 runs. For India, once again Jasprit Bumrah became the successful bowler by taking 4 wickets. Additionally, Axar Patel took 3 wickets.

Explosive batting: Batting first, the Indian team scored 255 runs for the loss of 5 wickets in the allotted 20 overs. Sanju Samson, Abhishek Sharma, and Ishan Kishan played explosive batting.

Sanju Samson 89 (46 balls), Abhishek Sharma 52 (21), Ishan Kishan 54 (25), Hardik Pandya 18 (13), 0 (1) and Tilak Varma 8 (6) runs. With the help of the batsmen’s explosive play, India gave New Zealand a massive target challenge.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *