shimoga crime news | ದೇವಾಲಯಗಳಲ್ಲಿ ಕಳವು ಮಾಡುತ್ತಿದ್ದ ಆರೋಪಿ ಅರೆಸ್ಟ್!

Accused Arrested for Temple Thefts!ದೇವಾಲಯಗಳಲ್ಲಿ ಕಳವು ಮಾಡುತ್ತಿದ್ದ ಆರೋಪಿ ಅರೆಸ್ಟ್!

ಶಿವಮೊಗ್ಗ (shivamogga), ಮಾರ್ಚ್ 10: ದೇವಾಲಯಗಳಲ್ಲಿ ಕಳವು ಮಾಡುತ್ತಿದ್ದ ಆರೋಪದ ಮೇರೆಗೆ ಓರ್ವನನ್ನು ಭದ್ರಾವತಿ ತಾಲೂಕು ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮಾವಿನಕಟ್ಟೆಯ ನಿವಾಸಿ ಉಮೇಶ್ (45) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಹೊಳೆಹೊನ್ನೂರು ಠಾಣಾ ವ್ಯಾಪ್ತಿಯ ಎರಡು ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾರಿಕಾಂಬ ದೇವರ ಎರಡು ಮುಖವಾಡಗಳು, ನಾಲ್ಕು ಬೆಳ್ಳಿಯ ಕೈಗಳು, ಸೊಂಟದ ಪಟ್ಟಿ, ಬಂಗಾರದ ತಾಳಿ, ಮೂಗುತಿ ಗುಂಡುಗಳು

ಹಾಗೂ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಕೃತ್ಯಕ್ಕೆ ಸಂಬಂಧಿಸಿದಂತೆ ದುರ್ಗಾಂಬಿಕ ದೇವರ ಮುಖವಾಡ, ಪಾದುಕೆ, ಚಾಮರ ಸೇರಿದಂತೆ ಒಟ್ಟಾರೆ 3 ಕೆಜಿ 764 ಗ್ರಾಂ ತೂಕದ ಬೆಳ್ಳಿಯ ಆಭರಣಗಳು, 8 ಗ್ರಾಂ ತೂಕದ ಬಂಗಾರದ ಆಭರಣ, ಕೃತ್ಯಕ್ಕೆ ಬಳಸಿದ್ದ ಬೈಕ್ ಸೇರಿದಂತೆ ಒಟ್ಟಾರೆ 10,49,060 ರೂ. ಮೌಲ್ಯದ ಕಳವು ಮಾಲು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಭದ್ರಾವತಿ ಡಿವೈಎಸ್ಪಿ ಪ್ರಕಾಶ್ ರಾಥೋಡ್ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಶಿವಪ್ರಸಾದ್ ಎಂ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಶಾಂತಲಾ, ಸಿಬ್ಬಂದಿಗಳಾದ ಅಣ್ಣಪ್ಪ, ಪ್ರಸನ್ನ, ಪ್ರಕಾಶ್ ನಾಯ್ಕ್, ಸವಿತಾ, ವಿಶ್ವನಾಥ್ ರವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

Accused Arrested for Temple Thefts!

Shivamogga, March 10: An incident has come to light where police from Holenarsipur station in Bhadravati taluk arrested a man accused of stealing from temples.

The arrested accused has been identified as Umesh (45), a resident of Mavinakatte in Channagiri taluk, Davanagere district.

In connection with two theft cases under the Holenarsipur station limits, police recovered stolen items including two masks of Goddess Marikamba, four silver hands, a waist belt, a gold chain, nose studs, and from a theft in the Kumsi police station limits, items such as a mask of Goddess Durgambika, footwear, and a ceremonial fan. Altogether, 3.764 kg of silver ornaments, 8 grams of gold ornaments, and the bike used in the crime were seized. The total value of the recovered stolen property is estimated at ₹10,49,060, according to a press release issued by the police department.

The arrest was successfully carried out under the supervision of Bhadravati DySP Prakash Rathod, led by Inspector Shivaprasad M, along with Sub-Inspector Shantala and staff members Annappa, Prasanna, Prakash Naik, Savita, and Vishwanath.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *