shimoga news | ಶಿವಮೊಗ್ಗ ಹೋಟೆಲ್ ಉದ್ಯಮದ ಮೇಲೆ ಇಸ್ರೇಲ್ – ಇರಾನ್ ಯುದ್ಧದ ಎಫೆಕ್ಟ್!

Effect of Israel–Iran War on Shivamogga Hotel Industry!ಶಿವಮೊಗ್ಗ ಹೋಟೆಲ್ ಉದ್ಯಮದ ಮೇಲೆ ಇಸ್ರೇಲ್ – ಇರಾನ್ ಯುದ್ಧದ ಎಫೆಕ್ಟ್!

ಶಿವಮೊಗ್ಗ (shivamogga), ಮಾರ್ಚ್ 11: ಇಸ್ರೇಲ್ – ಇರಾನ್ ನಡುವಿನ ಯುದ್ಧ ತೀವ್ರಗೊಳ್ಳುತ್ತಿದೆ. ಇದರ ನೇರ ಎಫೆಕ್ಟ್ ಹಲವೆಡೆ ವಾಣಿಜ್ಯ ಅನಿಲ ಸಿಲಿಂಡರ್ ಗಳ ಪೂರೈಕೆಯ ಮೇಲೆ ಬೀಳಲಾರಂಭಿಸಿರುವ ಮಾಹಿತಿಗಳು ಕೇಳಿಬರಲಾರಂಭಿಸಿದೆ.

ಈ ನಡುವೆ ಶಿವಮೊಗ್ಗದ ಹೋಟೆಲ್ ಉದ್ಯಮದ ಮೇಲೂ, ಯುದ್ಧದ ಪರಿಣಾಮ ಬೀರಲಾರಂಭಿಸಿದೆ. ಹೋಟೆಲ್ ಗಳಿಗೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಲಾರಂಭಿಸಿದೆ.

ಈ ಸಂಬಂಧ ಮಾರ್ಚ್ 11 ರಂದು ಶಿವಮೊಗ್ಗದ ಮಥುರಾ ಪ್ಯಾರಡೈಸ್ ನಲ್ಲಿ, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಸಭೆ ನಡೆಯಿತು. ಗ್ಯಾಸ್ ಸಿಲಿಂಡರ್ ಗಳ ಕೊರತೆಯ ಬಗ್ಗೆ ಚರ್ಚಿಸಲಾಯಿತು. ಸಿಲಿಂಡರ್ ಗಳ ಕೊರತೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಹೋಟೆಲ್ ಉದ್ಯಮ ನಡೆಸಬೇಕು ಎಂಬುವುದರ ಬಗ್ಗೆ ಸಮಾಲೋಚಿಸಲಾಯಿತು.

ಸಮರ್ಪಕವಾಗಿ ವಾಣಿಜ್ಯ ಸಿಲಿಂಡರ್ ಗಳು ಲಭ್ಯವಾಗದಿದ್ದರೆ ಹೋಟೆಲ್ ಗಳ ಕಾರ್ಯನಿರ್ವಹಣೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಉದ್ಯಮ ಬಂದ್ ಆಗುವ ಸಾಧ್ಯತೆಯೂ ಇದೆ ಎಂಬ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾಗಿದೆ.

ಸಭೆಯ ನಂತರ ಸಂಘದ ಅಧ್ಯಕ್ಷರಾದ ಶಂಕರನಾರಾಯಣ ಹೊಳ್ಳ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮುಕ್ಕಾಲುಪಾಲು ಹೋಟೆಲ್ ಗಳು ಗ್ಯಾಸ್ ಸಿಲಿಂಡರ್ ಗಳ ಮೇಲೆ ಅವಲಂಬಿತವಾಗಿವೆ. ಸದ್ಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಗಳ ಲಭ್ಯತೆ ಕಡಿಮೆಯಾಗಿದೆ. ಇದರಿಂದ ಉದ್ಯಮ ನಡೆಸುವುದು ಹರಸಾಹಸವಾಗಿದೆ ಎಂದು ತಿಳಿಸಿದ್ದಾರೆ.

ಕಟ್ಟಿಗೆ ಒಲೆ ಅಥವಾ ವಿದ್ಯುತ್ ಆಧಾರಿತ ಒಲೆ ಬಳಸುವ ಹೋಟೆಲ್ ಗಳು ಕಾರ್ಯನಿರ್ವಹಣೆ ಮೇಲೆ ಯಾವುದೇ ಪರಿಣಾಮವಿಲ್ಲ. ಆದರೆ ಗ್ಯಾಸ್ ಸಿಲಿಂಡರ್ ಮೇಲೆ ಅವಲಂಬಿತವಾಗಿರುವ ಹೋಟೆಲ್ ಗಳಿಗೆ ತೊಂದರೆ ಎದುರಾಗಿದೆ. ತಕ್ಷಣವೇ ಹೋಟೆಲ್ ಗಳಿಗೆ ಸಮರ್ಪಕವಾಗಿ ಗ್ಯಾಸ್ ಸಿಲಿಂಡರ್ ಗಳ ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಂಘದ ಉಪಾಧ್ಯಕ್ಷ ಎನ್ ಗೋಪಿನಾಥ್ ಅವರು ಮಾತನಾಡಿ, ಇಸ್ರೇಲ್ – ಇರಾನ್ ಯುದ್ಧದ ಪರಿಣಾಮ ಶಿವಮೊಗ್ಗದ ಹೋಟೆಲ್ ಉದ್ಯಮದ ಮೇಲೆ ಬೀರಿದೆ. ಹೋಟೆಲ್ ಗಳಿಗೆ ಸಮರ್ಪಕವಾಗಿ ಗ್ಯಾಸ್ ಸಿಲಿಂಡರ್ ಗಳು ಲಭ್ಯವಾಗುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಉದ್ಯಮ ನಡೆಸುವುದು ಕಷ್ಟಕರವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

Effect of Israel–Iran War on Shivamogga Hotel Industry!

Shivamogga, March 11: The war between Israel and Iran is intensifying. Reports suggest that its direct effect has begun to fall on the supply of commercial gas cylinders in several places.

Meanwhile, the hotel industry in Shivamogga has also started to feel the impact. Gas cylinder supply to hotels has begun to face disruption.

On March 11, a meeting of the District Hotel Owners’ Association was held at Mathura Paradise in Shivamogga. The shortage of gas cylinders was discussed. If the shortage continues, deliberations were held on how the hotel industry should be run in the coming days.

It was expressed in the meeting that if commercial cylinders are not adequately available, hotel operations will be seriously affected. There is also a possibility that the industry may shut down, according to opinions voiced in the meeting.

After the meeting, Association President Shankaranarayana Holla spoke to reporters, stating that most hotels are dependent on gas cylinders. At present, the availability of commercial gas cylinders has reduced. Because of this, running the business has become extremely difficult, he said.

Hotels using firewood stoves or electric stoves will not face any impact on operations. But hotels dependent on gas cylinders are facing trouble. Immediate steps must be taken to ensure adequate supply of gas cylinders to hotels, he urged.

Association Vice President N. Gopinath also spoke at the meeting, stating that the Israel–Iran war has had an impact on Shivamogga’s hotel industry. Hotels are not receiving adequate gas cylinder supply. If the situation continues in the same way, running the industry will become difficult, he informed.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *