ಶಿವಮೊಗ್ಗ (shivamogga), ಮಾರ್ಚ್ 13: ಶಿವಮೊಗ್ಗದ ಭಾರ್ಗವಿ ಪೆಟ್ರೋಲ್ ಬಂಕ್ ಹಿಂಭಾಗದ ಗೋಪಾಳಗೌಡ ಬಡಾವಣೆಯ ಅಪಾರ್ಟ್’ಮೆಂಟ್ ವೊಂದರ ಬಳಿ, ಮಾರ್ಚ್ 12 ರ ರಾತ್ರಿ 9 ಗಂಟೆ ಸರಿಸುಮಾರಿಗೆ ಎರಡು ಗುಂಪುಗಳ ನಡುವೆ ರಸ್ತೆಯಲ್ಲಿಯೇ ಮಾರಾಮಾರಿ ನಡೆದ ಘಟನೆ ನಡೆದಿದೆ.
ದಿಡೀರ್ ಆಗಿ ಎರಡು ಗುಂಪುಗಳ ನಡುವೆ ಗಲಾಟೆ ಆರಂಭವಾಗಿದೆ. ಜೋರಾಗಿ ಕೂಗಾಡುತ್ತಾ ಎರಡು ಗುಂಪುಗಳು ಪರಸ್ಪರ ಕೈ ಕೈ ಮಿಲಾಯಿಸಿವೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸದರಿ ಮಾರಾಮಾರಿ ಘಟನೆಯು ಸ್ಥಳೀಯ ನಿವಾಸಿಗಳನ್ನು ಭಯಭೀತರನ್ನಾಗಿಸಿತ್ತು. ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈ ಕುರಿತಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು – ಪ್ರತಿದೂರು ದಾಖಲಾಗಿವೆ ಎಂದು ಹೇಳಲಾಗುತ್ತಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.
Shivamogga: Clash Between Two Groups in the Middle of the Road!
Shivamogga, March 13: Near an apartment in Gopalgowda Colony, behind Bhargavi Petrol Bunk in Shivamogga, a fight broke out between two groups on the road around 9:00 PM on March 12.
Suddenly, a quarrel started between the two groups. Shouting loudly, both groups engaged in a scuffle. On learning of the incident, the police arrived at the spot and brought the situation under control, according to local sources.
The clash frightened nearby residents. It is said that the incident occurred due to personal rivalry. Complaints and counter-complaints have been registered at the Tunganagar Police Station, and further details are yet to be received.

