ಭದ್ರಾವತಿ (bhadravathi), ಮಾರ್ಚ್ 13: ಮನೆಯೊಂದರಲ್ಲಿ ಬಂಗಾರದ ಸರ ಕಳವು ಮಾಡಿದ್ದ ಆರೋಪದ ಮೇರೆಗೆ, ಯುವಕನೋರ್ವನನ್ನು ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಝೆಪ್ಟೋ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ವಿವೇಕನಗರದ ವನ್ನಾರ್ ಪೇಟೆಯ ಸಂಜೀವನಗರದ ನಿವಾಸಿ ಸೂರ್ಯ ಎಂ (28) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿಯಿಂದ 10 ಗ್ರಾಂ ತೂಕದ 1.40 ಲಕ್ಷ ರೂ. ಮೌಲ್ಯದ ಬಂಗಾರದ ಸರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿವೈಎಸ್ಪಿ ಪ್ರಕಾಶ್ ರಾಥೋಡ್ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ಕೆ ನಾಗಮ್ಮ ಮೇಲ್ವಿಚಾರಣೆಯಲ್ಲಿ ಸಬ್ ಇನ್ಸ್’ಪೆಕ್ಟರ್ ರಮೇಶ್ ಟಿ, ಸಿಬ್ಬಂದಿಗಳಾದ ನವೀನ್ ಟಿ, ಆದರ್ಶ ಆರ್, ಪ್ರಕಾಶ್ ಜಿ ಕೆ, ಪ್ರಸನ್ನ ರವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳವು : ಭದ್ರಾವತಿಯ ಜನ್ನಾಪುರದ ನಿವಾಸಿ ಸೌಭಾಗ್ಯ ಎಂಬುವರ ಮನೆಯಲ್ಲಿ 19-11-2025 ರಂದು ಡೆಸ್ಸಿಂಗ್ ಟೇಬಲ್ ಮೇಲಿದ್ದ ಬಂಗಾರದ ಸರ ಕಳವು ಮಾಡಲಾಗಿತ್ತು. ಈ ಕುರಿತಂತೆ ಅವರು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Bhadravati: Delivery Boy Arrested for Stealing Gold Chain from House!
Bhadravati, March 13: A youth has been arrested by Bhadravati Newtown Police Station on charges of stealing a gold chain from a house.
The accused has been identified as Surya M (28), a resident of Sanjeevnagar in Vannarpet, Viveknagar, Bengaluru, who was working as a delivery boy in the Zepto company.
Police have recovered a gold chain weighing 10 grams, valued at ₹1.40 lakh, from the accused. Under the guidance of DySP Prakash Rathod, Inspector K. Nagamma supervised the operation, while Sub-Inspector Ramesh T and staff members Naveen T, Adarsh R, Prakash G.K., and Prasanna successfully arrested the accused.
Theft Incident: On November 19, 2025, a gold chain kept on a dressing table was stolen from the house of Saubhagya, a resident of Jannapura, Bhadravati. She had lodged a complaint at the Newtown Police Station regarding the theft.

