shimoga palike news | ಶಿವಮೊಗ್ಗ ಪಾಲಿಕೆಯಿಂದ ಮತ್ತೆ ಇ-ಖಾತಾ ಮೇಳ : ಯಾವಾಗ? ಎಲ್ಲೆಲ್ಲಿ? ಏನೆಲ್ಲ ದಾಖಲೆಗಳು ಬೇಕು?

Shivamogga City Corporation again organizing e Khata Mela: When? Where? What documents are needed? ಶಿವಮೊಗ್ಗ ಪಾಲಿಕೆಯಿಂದ ಮತ್ತೆ ಇ-ಖಾತಾ ಮೇಳ : ಯಾವಾಗ? ಎಲ್ಲೆಲ್ಲಿ? ಏನೆಲ್ಲ ದಾಖಲೆಗಳು ಬೇಕು?

ಶಿವಮೊಗ್ಗ (shivamogga), ಮಾರ್ಚ್ 15: ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ಸ್ಥಿರಾಸ್ತಿಗಳಿಗೆ ‘ಇ – ಖಾತಾ’ ಮಾಡಿಸುವುದು ಕಡ್ಡಾಯವಾಗಿದೆ. ನಾಗರೀಕರ ಅನುಕೂಲಕ್ಕಾಗಿ ಪಾಲಿಕೆ ಆಡಳಿತವು ವಿವಿಧ ಬಡಾವಣೆಗಳಲ್ಲಿ ಇ-ಖಾತಾ ಮೇಳ ಆಯೋಜಿಸುತ್ತಿದೆ. ಪ್ರಸ್ತುತ ಮಾರ್ಚ್ ತಿಂಗಳಲ್ಲಿ ನಗರದ ವಿವಿಧ  ವಾರ್ಡ್ ಗಳಲ್ಲಿ ಮೇಳ ಆಯೋಜಿಸಲಾಗಿದೆ ಎಂದು ಆಯುಕ್ತ ಮಾಯಣ್ಣಗೌಡರವರು ತಿಳಿಸಿದ್ದಾರೆ.

ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಇ – ಖಾತಾ ಮೇಳ ನಡೆಯಲಿದೆ. ಆಧಾರ್ ಕಾರ್ಡ್ ನೊಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಸೂಕ್ತ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು. ಸದರಿ ಅಭಿಯಾನದ ಸದುಪಯೋಗವನ್ನು ನಾಗರೀಕರು ಪಡೆದುಕೊಳ್ಳಬೇಕು ಎಂದು ಆಯುಕ್ತರು ಮನವಿ ಮಾಡಿದ್ದಾರೆ.

ಎಲ್ಲೆಲ್ಲೆ? ಯಾವಾಗ? : ಮಾರ್ಚ್ 16 ರಂದು ವಾರ್ಡ್ 4 ರ ವೆಂಕಟೇಶ್ವರ ನಗರದ 2 ನೇ ತಿರುವಿನ ಸರ್ವಸಿದ್ದಿ ವಿನಾಯಕ ಸ್ವಾಮಿ ದರ್ಶನ ಸಮುದಾಯ ಭವನ, ಮಾರ್ಚ್ 18 ರಂದು ವಾರ್ಡ್ 31 ರ ಶರಾವತಿ ನಗರದ ಮಹಾನಗರ ಪಾಲಿಕೆ ಗ್ರಂಥಾಲಯ, ಮಾರ್ಚ್ 24 ರಂದು ವಾರ್ಡ್ 01 ರ ಅಶ್ವಥ್ ನಗರದ ಮುಚ್ಚಿಗರ ಸಮುದಾಯ ಭವನ,

ಮಾರ್ಚ್ 25 ರಂದು ವಾರ್ಡ್ 28 ರ ಪಂಚವಟಿ ಕಾಲೋನಿಯ ಗೌಡ ಸಾರಸ್ವತ ಕಲ್ಯಾಣ ಮಂದಿರ, ಮಾರ್ಚ್ 26 ರಂದು ಆಲ್ಕೋಳ ಸರ್ಕಲ್ ಸಮೀಪದ ಅಗಮುಡಿ ಸಮುದಾಯ ಭವನ, ಮಾರ್ಚ್ 27 ರಂದು ವಾರ್ಡ್ 18 ರ ಅಪ್ಪಾಜಿರಾವ್ ಕಾಂಪೌಂಡ್ ನ ಅಯ್ಯಪ್ಪಸ್ವಾಮಿ ಕಾಂಪೌಂಡ್ ಎದುರಿನ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿದೆ.

ದಾಖಲೆಗಳೇನು ಬೇಕು? : ಸ್ಥಿರಾಸ್ತಿಯ ಮಾಲೀಕತ್ವ ಸಾಬೀತುಪಡಿಸುವ ಕಾನೂನುಬದ್ದ ದಾಖಲಾತಿಗಳು. ಮಾಲೀಕರ ಭಾವಚಿತ್ರ. ಗುರುತಿನ ಚೀಟಿ (ವೋಟರ್ ಐಡಿ, ಪ್ಯಾನ್, ರೇಷನ್ ಕಾರ್ಡ್ ಇತ್ಯಾದಿ), ಕಟ್ಟಡ / ನಿವೇಶನದ ಭಾವಚಿತ್ರ, ಕಟ್ಟಡ ಪರವಾನಗಿ ಪ್ರತಿ (ಇದ್ದಲ್ಲಿ), ಇ.ಸಿ. 2004 ರ ಹಿಂದಿನ ನೊಂದಣಿ ದಾಖಲೆಯಾಗಿದ್ದಲ್ಲಿ ನೊಂದಣಿಯಾದ ದಿನಾಂಕದಿಂದ 31-03-2024 ಮತ್ತು ಇ.ಸಿ. 1-04-2004 ರಿಂದ ಪ್ರಸ್ತುತ ಸಾಲಿನವರೆಗೆ.

Shivamogga City Corporation again organizing e‑Khata Mela: When? Where? What documents are needed?

Shivamogga, March 15: For properties under the Shivamogga City Corporation limits, obtaining an “e‑Khata” is mandatory. For the convenience of citizens, the Corporation administration is organizing e‑Khata Melas in various localities. Currently, in the month of March, the mela is being held in different wards of the city, said Commissioner Mayannagowdar.

The e‑Khata mela will be held from 10 AM to 4 PM. Aadhaar card with registered mobile number and appropriate documents must be compulsorily brought. The Commissioner has requested citizens to make use of this campaign.

Where and When?

  • March 16 – Ward 4, Venkateshwara Nagar, 2nd Cross, Sarvasiddhi Vinayaka Swamy Darshan Community Hall
  • March 18 – Ward 31, Sharavathi Nagar, City Corporation Library
  • March 24 – Ward 01, Ashwath Nagar, Muchchigar Community Hall
  • March 25 – Ward 28, Panchavati Colony, Gowda Saraswat Kalyan Mandir
  • March 26 – Near Alkol Circle, Agamudi Community Hall
  • March 27 – Ward 18, Appajirao Compound, opposite Ayyappa Swamy Compound, Government School

What documents are needed?

  • Legally valid documents proving ownership of the property
  • Photograph of the owner
  • Identity card (Voter ID, PAN, Ration Card, etc.)
  • Photograph of the building/plot
  • Copy of building license (if available)
  • Encumbrance Certificate (EC):
    • If registered before 2004 → EC from date of registration up to 31‑03‑2024
    • If registered from 01‑04‑2004 → EC up to the current year

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *