ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಮಾರ್ಚ್ 15: ಮಲೆನಾಡಿನಲ್ಲಿ ದಿನದಿಂದ ದಿನಕ್ಕೆ ಬಿಸಿಲ ತೀವ್ರತೆ ಹೆಚ್ಚಾಗುತ್ತಿದೆ. ಅಂತರ್ಜಲ ಕುಸಿತವಾಗುತ್ತಿದೆ. ವಿವಿಧೆಡೆ ಜೀವಜಲಕ್ಕೆ ಹಾಹಾಕಾರ ಕಂಡುಬರಲಾರಂಭಿಸಿದೆ. ಈ ನಡುವೆ ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತಿರುವ, ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಅಧೀನದ ಬಸವನಗಂಗೂರು ಗ್ರಾಮದಲ್ಲಿ ನೀರಿನ ತೀವ್ರ ಸ್ವರೂಪದ ತತ್ವಾರ ಎದುರಾಗಿದೆ!
ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತಿರುವ ದೊಡ್ಡ ಗ್ರಾಮಗಳಲ್ಲಿ ಬಸವನಗಂಗೂರು ಕೂಡ ಒಂದಾಗಿದೆ. ಸರಿಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಎರಡು ಬೋರ್’ವೆಲ್ ಗಳ ಮೂಲಕ ನೀರು ಪೂರೈಕೆಯಾಗುತ್ತಿದೆ. ಹಾಗೆಯೇ ಶುದ್ಧ ಕುಡಿಯುವ ನೀರಿನ ಘಟಕ ಕೂಡ ಇದೆ.
‘ಪ್ರಸ್ತುತ ಆರೇಳು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕಳೆದ ಹಲವು ತಿಂಗಳುಗಳಿಂದ ಇದೇ ಸ್ಥಿತಿಯಿದೆ. ಪ್ರಸ್ತುತ ಬೇಸಿಗೆ ಆರಂಭವಾಗಿರುವುದರಿಂದ ನೀರಿನ ಬೇಡಿಕೆ ಹೆಚ್ಚಾಗಿದ್ದು, ಅಗತ್ಯಕ್ಕೆ ಅನುಗುಣವಾಗಿ ನೀರು ಪೂರೈಕೆಯಾಗುತ್ತಿಲ್ಲ.
ಇದರಿಂದ ದೈನಂದಿನ ಗೃಹ ಬಳಕೆಗೆ ನೀರಿಲ್ಲದೆ ಸಂಕಷ್ಟ ಪಡುವಂತಾಗಿದೆ. ದಿನನಿತ್ಯ ಪರದಾಡುವಂತಾಗಿದೆ. ನಮ್ಮ ಗೋಳು ಕೇಳುವವರೇ ಯಾರೂ ಇಲ್ಲದಂತಾಗಿದೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.
ಅಂತರ್ಜಲ ಕುಸಿತ : ಬೇಸಿಗೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಬೋರ್’ವೆಲ್ ಗಳಲ್ಲಿನ ಅಂತರ್ಜಲದ ಪ್ರಮಾಣವೂ ಕಡಿಮೆಯಾಗುತ್ತಿದೆ. ಈ ಕಾರಣದಿಂದ ಸದ್ಯ ಆರೇಳು ದಿನಕ್ಕೊಮ್ಮೆ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿದೆ. ಪರಿಸ್ಥಿತಿ ಇದೆ ರೀತಿ ಮುಂದುವರಿದರೆ, ಏಪ್ರಿಲ್ – ಮೇ ತಿಂಗಳಲ್ಲಿ ಮತ್ತಷ್ಟು ತತ್ವಾರ ಎದುರಾಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಾರೆ.
ಗ್ರಾಮದಲ್ಲಿ ಎದುರಾಗಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವತ್ತ ಆಡಳಿತ ಚಿತ್ತ ಹರಿಸಬೇಕು. ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿಯಿತ್ತು ಪರಿಸ್ಥಿತಿಯ ಖುದ್ದು ಅವಲೋಕನ ನಡೆಸಬೇಕು. ಗ್ರಾಮಕ್ಕೆ ಹೊಂದಿಕೊಂಡಂತಿರುವ ಪಾಲಿಕೆ ವ್ಯಾಪ್ತಿಯ ಬೊಮ್ಮನಕಟ್ಟೆಗೆ ಜಲ ಮಂಡಳಿಯಿಂದ ತುಂಗಾ ನದಿ ನೀರು ಪೂರೈಕೆಯಾಗುತ್ತಿದ್ದು, ಸದರಿ ವ್ಯವಸ್ಥೆಯನ್ನು ಬಸವನಗಂಗೂರು ಗ್ರಾಮಕ್ಕೂ ಕಲ್ಪಿಸಬೇಕು. ಇದರಿಂದ ಗ್ರಾಮಸ್ಥರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.
ಎಚ್ಚೆತ್ತುಕೊಳ್ಳಲಿ : ಕಾಲಮಿತಿಯೊಳಗೆ ನೀರಿನ ಸಮಸ್ಯೆ ಪರಿಹಾರವಾಗದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸಲು ಗ್ರಾಮಸ್ಥರು ಚಿಂತನೆ ನಡೆಸುತ್ತಿದ್ದಾರೆ. ತಕ್ಷಣವೇ ಆಡಳಿತ ಬಸವನಗಂಗೂರು ಗ್ರಾಮದಲ್ಲಿ ಪ್ರತಿ ಬೇಸಿಗೆ ವೇಳೆ ಎದುರಾಗುವ ನೀರಿನ ಹಾಹಾಕಾರಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ. ಈ ಮೂಲಕ ಗ್ರಾಮಸ್ಥರು ನೆಮ್ಮದಿಯಾಗಿ ಜೀವನ ನಡೆಸಲು ಅವಕಾಶ ಕಲ್ಪಿಸಲಿದೆಯೇ? ಎಂಬುವುದನ್ನು ಕಾದು ನೋಡಬೇಕಾಗಿದೆ.
ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಆಗ್ರಹ
*** ಬಸವನಗಂಗೂರು ಗ್ರಾಮದಲ್ಲಿ ಹಣ ಪಾವತಿಸಿ ನೀರು ಪಡೆಯುವ ಶುದ್ಧ ಕುಡಿಯುವ ನೀರಿನ ಘಟಕವಿದ್ದು, ಸದರಿ ಘಟಕದಿಂದ ಮನೆಗಳಿಗೆ ಕುಡಿಯಲು ನೀರು ತರಲಾಗುತ್ತಿದೆ. ಆದರೆ ದೈನಂದಿನ ಬಳಕೆಗೆ ನೀರಿನ ಹಾಹಾಕಾರ ತೀವ್ರವಾಗಿದೆ. ಸಮರ್ಪಕವಾಗಿ ನೀರು ಪೂರೈಕೆಯಾಗುವವರೆಗೂ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಆಡಳಿತ ವ್ಯವಸ್ಥೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಾರೆ.
ಬೋರ್’ವೆಲ್ ಕೊರೆಯಿಸಲು ಅನುದಾನವಿಲ್ಲವೇ?
*** ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಮ ಪಂಚಾಯ್ತಿಗಳಿಗೆ ಹೊಸದಾಗಿ ಬೋರ್’ವೆಲ್ ಕೊರೆಯಿಸಲು ಹಾಗೂ ಪೈಪ್ ಲೈನ್ ಮಾಡಲು ಜಿಲ್ಲಾಡಳಿತ ಅಗತ್ಯ ಅನುದಾನ ಬಿಡುಗಡೆ ಮಾಡಬೇಕಾಗಿದೆ. ಇತ್ತೀಚೆಗೆ ಸದರಿ ಗ್ರಾಪಂಗಳಿಗೆ ಹೊಸ ಬೋರ್’ವೆಲ್ ಕೊರೆಯಿಸಲು ತಾಲೂಕು ಆಡಳಿತದಿಂದ ಅನುದಾನ ಲಭ್ಯವಾಗುತ್ತಿಲ್ಲ. ಗ್ರಾಪಂ ಅನುದಾನದಲ್ಲಿಯೇ ಬೋರ್’ವೆಲ್ – ಪೈಪ್’ಲೈನ್ ವ್ಯವಸ್ಥೆ ಮಾಡಿಕೊಳ್ಳಬೇಕೆಂಬ ಸೂಚನೆ ನೀಡಲಾಗಿದೆ ಎಂಬ ಮಾಹಿತಿಯಿದೆ. ಇದು ಸಹಜವಾಗಿಯೇ ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಪಂಗಳ ಮೇಲೆ ಒತ್ತಡ ಬೀಳುವಂತಾಗಿದೆ. ಕಾಲಮಿತಿಯೊಳಗೆ ನೀರಿನ ಸಮಸ್ಯೆ ಪರಿಹಾರ ಸಾಧ್ಯವಾಗದಂತಾಗಿದೆ ಎಂಬ ದೂರುಗಳು ಗ್ರಾಪಂ ವಲಯದಿಂದ ಕೇಳಿಬರುತ್ತದೆ.
ತುಂಗಾ ನದಿಯಿಂದ ನೀರು ಪೂರೈಸಿ
ಬಸವನಗಂಗೂರು ಗ್ರಾಮದಲ್ಲಿ ಎದುರಾಗಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವತ್ತ ಆಡಳಿತ ಚಿತ್ತ ಹರಿಸಬೇಕು. ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿಯಿತ್ತು ಪರಿಸ್ಥಿತಿಯ ಖುದ್ದು ಅವಲೋಕನ ನಡೆಸಬೇಕು. ಗ್ರಾಮಕ್ಕೆ ಹೊಂದಿಕೊಂಡಂತಿರುವ ಪಾಲಿಕೆ ವ್ಯಾಪ್ತಿಯ ಬೊಮ್ಮನಕಟ್ಟೆ ಸುತ್ತಮುತ್ತಲಿನ ಬಡಾವಣೆಗಳಿಗೆ ಜಲ ಮಂಡಳಿಯಿಂದ ತುಂಗಾ ನದಿ ನೀರು ಪೂರೈಕೆಯಾಗುತ್ತಿದ್ದು, ಸದರಿ ವ್ಯವಸ್ಥೆಯನ್ನು ಬಸವನಗಂಗೂರು ಗ್ರಾಮಕ್ಕೂ ಕಲ್ಪಿಸಬೇಕು. ಇದರಿಂದ ಗ್ರಾಮಸ್ಥರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.
Severe Water Shortage in Basavanaganguru Village, Shivamogga – Will the Administration Act? | Report: B. Renukesh | Shivamogga, March 15 The heat in Malnad is intensifying day by day, and groundwater levels are depleting. Across several places, there is growing distress over drinking water. Among them, Basavanaganguru village, under Abbalagere Gram Panchayat and close to Shivamogga city, is facing an acute water crisis.
Basavanaganguru is one of the larger villages near Shivamogga, with around 1,500 residents. Water supply comes from two borewells, along with a purified drinking water unit. “Currently, water is supplied once every six to seven days. This has been the situation for several months. With summer beginning, demand has increased, but supply is not meeting needs. Daily household usage has become difficult, and we are struggling. It feels like no one is listening to our plight,” villagers lament.
Groundwater depletion: As summer intensifies, borewell water levels are dropping. Because of this, water is now supplied only once every six to seven days. Villagers fear that by April–May, the situation will worsen further. The administration must focus on finding a permanent solution. Senior officials should visit the village and assess the situation firsthand. Bommanakatte, which is within municipal limits, receives water from the Tunga River through the water board. Villagers insist that the same arrangement should be extended to Basavanaganguru, which would greatly benefit them.
Wake-up call: If the issue is not resolved in time, villagers are considering street protests. The administration must act quickly to provide a permanent solution to the recurring summer water crisis in Basavanaganguru, so residents can live peacefully.
Demand for water tankers: Although the village has a purified drinking water unit where residents pay for water, this only covers drinking needs. For daily household use, the shortage is severe. Until regular supply resumes, villagers demand that water tankers be arranged.
No funds for new borewells? Villages near Shivamogga city are not receiving funds from the taluk administration for new borewells or pipelines. Gram Panchayats are being told to manage within their own limited budgets. Naturally, this puts pressure on villages close to the city, making timely resolution of water problems difficult. Complaints are rising from Gram Panchayat areas about the lack of support.

