ಶಿವಮೊಗ್ಗ, ಏಪ್ರಿಲ್ 11: ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 600 ಅಂಕಗಳಿಗೆ 576 ಅಂಕ ಪಡೆದು ಉತ್ತಮ ಸಾಧನೆ ಮಾಡಿದ, ಶಿವಮೊಗ್ಗ ಡಿಸಿ ಕಚೇರಿಯಲ್ಲಿ ಡಿ ಗ್ರೂಪ್ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ, ಕೀರ್ತಿ ಎಸ್ ರವರ ಪುತ್ರಿ ನೇಹಾ ಕೆ ಅವರಿಗೆ ಉಪ ವಿಭಾಗಾಧಿಕಾರಿ ಜಿ ಹೆಚ್ ಸತ್ಯನಾರಾಯಣರವರು ಸನ್ಮಾನಿಸಿ ಅಭಿನಂದಿಸಿದ್ದಾರೆ.
ವಿದ್ಯಾರ್ಥಿನಿಯ ನಿವಾಸಕ್ಕೆ ತೆರಳಿದ ಉಪ ವಿಭಾಗಾಧಿಕಾರಿಗಳು, ಶಾಲು ಹೊದಿಸಿ ಸಿಹಿ ನೀಡಿ ಅಭಿನಂದಿಸಿದ್ದಾರೆ. ಭವಿಷ್ಯದಲ್ಲಿ ಮತ್ತಷ್ಟು ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಭದ್ರಾವತಿ ತಾಲೂಕು ಚುನಾವಣಾ ಶಾಖೆಯ ಶಿರಸ್ತೇದಾರ್ ಗಿರಿರಾಜ್ ಎಸ್ ಓ ಉಪಸ್ಥಿತರಿದ್ದರು.
Shivamogga : Felicitation of a PUC Student by the Sub-Divisional Officer
Shivamogga, April 11: Neha K, daughter of Keerthi S, who works as a D Group employee at the Shivamogga DC office, has achieved remarkable success by scoring 576 out of 600 marks in the Second PUC Arts stream. She was felicitated and congratulated by Sub-Divisional Officer G.H. Satyanarayana.
The officer visited the student’s residence, draped a shawl over her, offered sweets, and extended his best wishes for even greater achievements in the future. On this occasion, Bhadravati Taluk Election Branch Shirastedar Giriraj S.O. was also present.

