shimoga news | ಶಿವಮೊಗ್ಗ | ನಾಪತ್ತೆಯಾದ ತಾಯಿ – ಮಗಳು : ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ

Shivamogga | Missing mother and daughter: Police appeal for help in finding them ಶಿವಮೊಗ್ಗ | ನಾಪತ್ತೆಯಾದ ತಾಯಿ – ಮಗಳು : ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ

ಶಿವಮೊಗ್ಗ (shivamogga), ಏಪ್ರಿಲ್ 22: ತಾಯಿ ಹಾಗೂ ಮಗಳು ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ, ಶಿವಮೊಗ್ಗ ನಗರದ ಮಿಳಘಟ್ಟ ಬಡಾವಣೆಯಲ್ಲಿ ನಡೆದಿದೆ.

ಬಡಾವಣೆಯ ಲಕ್ಷ್ಮೀ ಕ್ಯಾಂಟೀನ್ ಸಮೀಪ ಬಾಡಿಗೆ ಮನೆಯಲ್ಲಿ ವಾಸವಿದ್ದ ಅಮಿಜ್ ಸೋಹಾನಿ ನದೀಂ ಪಾಷಾ (26) ಹಾಗೂ ಇವರ ಪುತ್ರಿ 3 ವರ್ಷ 9 ತಿಂಗಳು ವಯೋಮಾನದ ಐಜಾ ಫಾತೀಮಾ ನಾಪತ್ತೆಯಾದವರು ಎಂದು ಗುರುತಿಸಲಾಗಿದೆ.

ಏಪ್ರಿಲ್13 ರಿಂದ ಇವರು ಕಾಣೆಯಾಗಿದ್ದಾರೆ ಎಂದು ಪೊಲೀಸ್ ಇಲಾಖೆ ಏಪ್ರಿಲ್ 22 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಅಮಿಜ್ ಸೋಹಾನಿಯ ಚಹರೆ : 5.5 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು ಹೊಂದಿರುತ್ತಾರೆ. ಐಜಾ ಫಾತಿಮಾಳ ಚಹರೆ : 3 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ ಹೊಂದಿರುತ್ತಾರೆ.

ಕಾಣೆಯಾದ ತಾಯಿ ಮಗಳ ಬಗ್ಗೆ ಯಾವುದೇ ಸುಳಿವು ಲಭ್ಯವಾದಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 08182-261414 / 7348918569 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Shivamogga | Missing mother and daughter: Police appeal for help in finding them

Shivamogga, April 22: A mother and daughter have mysteriously disappeared in the Milaghatta area of ​​Shivamogga city.
Amiz Sohani Nadeem Pasha (26), who lived in a rented house near Lakshmi Canteen in the area, and his daughter Aiza Fatima, aged 3 years and 9 months, have been identified as the missing persons.
The police department has informed in a statement issued on April 22 that they have been missing since April 13.
Amiz Sohani’s appearance: 5.5 feet tall, with a round face, wheatish complexion, and a thin build.
Aiza Fatima’s appearance: 3 feet tall, with a round face, wheatish complexion.
A police statement said that if anyone has any information about the missing mother and daughter, they are requested to contact the Shivamogga Doddapet Police Station at 08182-261414 / 7348918569.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *