ಶಿವಮೊಗ್ಗ (shivamogga), ಮೇ 12 : ಶಿವಮೊಗ್ಗ ನಗರದ ಬೈಪಾಸ್ ರಸ್ತೆಯಲ್ಲಿರುವ ಜಗದ್ಗುರು ಪಂಚಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಮೇ 15 ರಂದು ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ, ವೀರಶೈವ ಲಿಂಗಾಯತ ವಧು-ವರರ ಸಮ್ಮೇಳನ, ಪಂಚಾಚಾರ್ಯ ಐಟಿಐ ವಾರ್ಷಿಕೋತ್ಸವ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ವಿಘ್ನೇಶ್ವರ ನೀ. ಸೋಲಾಪರ ತಿಳಿಸಿದ್ದಾರೆ.
ಮೇ 12 ರಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಬೆಳಿಗ್ಗೆ 10 ಗಂಟೆಗೆ ಶಾಸಕ ಎಸ್ ಎನ್ ಚನ್ನಬಸಪ್ಪ ಅವರು ಸಮಾರಂಭ ಉದ್ಘಾಟನೆ ನೆರವೇರಿಸಲಿದ್ದಾರೆ. ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಶ್ರೀಗಳ ಸಾನ್ನಿಧ್ಯವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮಳಲಿ ಸಂಸ್ಥಾನ ಮಠದ ಗುರುನಾಗಭೂಷ ಶಿವಾಚಾರ್ಯ ಸ್ವಾಮಿಗಳು ಹಾಗೂ ದುಗ್ಗಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿರಲಿದ್ದಾರೆ ಎಂದರು.
ಮಾಚೇನಹಳ್ಳಿಯ ಟೆಕ್ನೋ ರಿಂಗ್ಸ್ ಮತ್ತು ಶಶಿ ಭಾರತ ಇಂಡಸ್ಟ್ರೀ ಎಮ್ ಡಿ ಬಿ.ಎಸ್.ಗೀತಾ, ಮಾಚೇನಹಳ್ಳಿಯ ಎಮ್.ಇ.ಟಿ.ಪಿ.ಎಲ್. ನಿರ್ದೇಶಕ ಸೋಮಶೇಖರ ಜೆ., ಮಹಾಂತ ಮೋಟಾರ್ಸ ಸಿ.ಇ.ಓ. ರಾಕೇಶ ಆರಾಧ್ಯ ಹೆಚ್.ಎಸ್., ಶ್ರೀ ನಂದಿ ಇಂಡಸ್ಟ್ರೀಸ್ ಮಾಲೀಕರಾದ ನಂದಿ ಹೆಚ್.ಪಿ.ರವೀಶ್ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ವಿದ್ಯಾಸಂಸ್ಥೆಯ ಆಜೀವ ಸದಸ್ಯರಾದ ರುಕ್ಷಿಣಿ ವೇದವ್ಯಾಸ, ಜಿಲ್ಲಾ ವೀರಶೈವ ಜಂಗಮ ಮತ್ತು ಪುರೋಹಿತರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎಂ.ಜಿ ವಿರೂಪಾಕ್ಷಯ್ಯ ಶಾಸ್ತ್ರಿ ಹಾಗೂ ಕರಡಿ-ಇಳಕಲ್ ಪಟ್ಟಣದ ಜಗದ್ಗುರು ಪಂಚಾಚಾರ್ಯ ಶಿಕ್ಷಣ ಸೊಸೈಟಿ ಕಾರ್ಯದರ್ಶಿ ಶಿವಯ್ಯ ಹಿರೇಮಠ ಅವರನ್ನು ಗೌರವಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 5 ಪ್ರತಿಭಾನ್ವಿತರಿಗೆ ಹಾಗೂ ಉನ್ನತ ಶ್ರೇಣಿಯಲ್ಲಿ ಅಂಕ ಪಡೆದ ಎಸ್‌ಜೆಪಿ ಐಟಿಐ ಸಿಬ್ಬಂದಿಯವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಹಾಗೆಯೇ ಇದೆ ವೇಳೆ ಟಿ.ಎಮ್.ಎ.ಇ.ಎಸ್ ಆಯುರ್ವೇದ ಮಹಾವಿದ್ಯಾಲಯದಿಂದ ಆರೋಗ್ಯ ತಪಾಸಣೆ, ವಾಸನ್ ಐ ಕೇರ್ ಸಂಸ್ಥೆಯಿಂದ ನೇತ್ರ ತಪಾಸಣೆ, ರೋಟರಿ ಚಾರಿಟಿ ಫೌಂಡೇಶನ್ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ.
ವಧು ವರರ ಸಮಾವೇಶ: ಮೇ15ರಂದು ಧರ್ಮ ಸಭೆಯ ನಂತರ ವೀರಶೈವ ಲಿಂಗಾಯತ ವಧು-ವರರ ಸಮಾವೇಶ ನಡೆಯಲಿದ್ದು ವೀರಸಂಗಯ್ಯ ಬಿದ್ದರೆ ಅಧ್ಯಕ್ಷತೆ ವಹಿಸವರು. ಸಮಾಜದ ಮುಖಂಡರಾದ ಉಮೇಶ ಹಿರೇಮಠ, ಹೆಚ್.ಎಂ.ಪ್ರೇಮಾ, ರತ್ನ ಮಂಜುನಾಥ, ಸುಜಾತಾ ಬಸವರಾಜ್, ಹೆಚ್.ಪಿ.ಪ್ರದೀಪಚಂದ್ರ ಸಿಂಗಟಗೇರಿಮಠ ಮುಖ್ಯ ಅತಿಥಿಗಳಾಗಿರುವರು. ವಧು ವರರ ಸಮಾವೇಶದ ಕುರಿತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9449831132/9980006765 08182 – 240041 ಗಳನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.
Panchacharya Yugamanotsava program as part of SJP ITI anniversary in Shivamogga
Shivamogga May 12: Jagadguru Panchacharya Yugamanotsava, Veerashaiva Lingayat bride and groom conference, Panchacharya ITI anniversary ceremony have been organized on May 15 at Jagadguru Panchacharya Industrial Training Center on Shivamogga city bypass road, said the founder of the organization, Vigneswara Nee. Solapara.
He was speaking while addressing a press conference on May 12. MLA SN Channabasappa will inaugurate the ceremony at 10 am. He informed that Balehonnur Rambhapuri Veerasomeshwara Sri will be present.
He said that Gurunagbhush Shivacharya Swami of Malali Sansthan Math and Duggi-Kadenandihalli Revanasiddheshwara Shivacharya Swami will be present at the program.
Machenahalli Techno Rings and Shashi Bharat Industry MD B.S. Geetha, Machenahalli METPL Director Somashekar J., Mahanta Motors CEO Rakesh Aaradhya H.S., and Sri Nandi Industries owner Nandi H.P. Ravish will participate as special invitees, he informed.
Life member of the National Educational Association Rukshini Vedavyasa, President of the District Veerashaiva Jangam and Priests’ Welfare Development Association M.G. Virupakshayya Shastri and Secretary of the Jagadguru Panchacharya Education Society of Karadi-Ilakal town Shivayya Hiremath are being honored, it was said.
The 5 talented students who scored the highest marks in the SSLC examination and the children of SJP ITI staff who scored in the highest ranks will be given the Pratibha Puraskar. Similarly, health check-up by T.M.A.E.S Ayurveda Mahavidyalaya, eye check-up by Vasan Eye Care Institute, and a voluntary blood donation camp by the Rotary Charity Foundation will be held on the occasion.
Bride and groom convention: A Veerashaiva Lingayat bride and groom convention will be held after the Dharma Sabha on May 15, and if Veerasangayya is absent, he will preside. Community leaders Umesh Hiremath, H.M. Prema, Ratna Manjunath, Sujatha Basavaraj, H.P. Pradeepchandra Singatagerimath will be the chief guests. For more information about the bride and groom’s convention, please contact phone numbers 9449831132/9980006765 08182 – 240041.

