ಶಿವಮೊಗ್ಗ (shivamogga), ಜೂನ್ 11: ಬೀರೂರು–ಶಿವಮೊಗ್ಗ ಟೌನ್ ನಿಲ್ದಾಣಗಳ ಮಧ್ಯೆ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕಾಮಗಾರಿಗಳನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಕೆಳಕಂಡ ರೈಲುಗಳ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೈಲುಗಳ ನಿಯಂತ್ರಣ : ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ ರೈಲು 12.06.2026 ಮತ್ತು 13.06.2026ರಂದು 35 ನಿಮಿಷಗಳ ಕಾಲ ಮಾರ್ಗಮಧ್ಯೆ ನಿಯಂತ್ರಣಕ್ಕೆ ಒಳಪಡಲಿದೆ.
14.06.2026 ರಿಂದ 30.06.2026ರವರೆಗೆ ಮಾರ್ಗಮಧ್ಯೆ 55 ನಿಮಿಷಗಳ ಕಾಲ ಹಾಗೂ 01.07.2026 ರಿಂದ 05.07.2026ರವರೆಗೆ ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ.
ರೈಲು ಸಂಖ್ಯೆ 20690 ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್ಪ್ರೆಸ್ ರೈಲು 07.07.2026 ರಿಂದ 11.07.2026ರವರೆಗೆ 30 ನಿಮಿಷಗಳ ಕಾಲ ಮಾರ್ಗಮಧ್ಯೆ ನಿಯಂತ್ರಣಕ್ಕೆ ಒಳಪಡಲಿದೆ.
ರೈಲು ಮರುನಿಗದಿ : ರೈಲು ಸಂಖ್ಯೆ 20690 ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್ಪ್ರೆಸ್ ರೈಲು 01.07.2026 ರಿಂದ 05.07.2026ರವರೆಗೆ ಶಿವಮೊಗ್ಗ ಟೌನ್ ನಿಂದ 20 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ ಎಂದು ಮೈಸೂರು ರೈಲ್ವೆ ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
In view of operational requirements and to facilitate line and power block works between Birur and Shivamogga Town stations, the following changes are notified in train services:
Regulation of Trains : Train No. 16225 Mysuru – Shivamogga Town Express will be regulated by 35 minutes enroute on journeys commencing on 12.06.2026 and 13.06.2026, by 55 minutes enroute on journeys commencing from 14.06.2026 to 30.06.2026, and by 30 minutes enroute on journeys commencing from 01.07.2026 to 05.07.2026.
Train No. 20690 Shivamogga Town – Yesvantpur Express will be regulated by 30 minutes enroute on journeys commencing from 07.07.2026 to 11.07.2026.
Rescheduling of Train : Train No. 20690 Shivamogga Town – Yesvantpur Express will be rescheduled by 20 minutes from its originating station, on journeys commencing from 01.07.2026 to 05.07.2026.

