shikaripura news | ಶಿಕಾರಿಪುರ ಪಟ್ಟಣ ಠಾಣೆ ಪೊಲೀಸರ ಕಾರ್ಯಾಚರಣೆ : ಕಳವು ಆರೋಪಿ ಬಂಧನ!

Shikaripura Town Police Station Operation : Robbery Accused Arrested! ಶಿಕಾರಿಪುರ ಪಟ್ಟಣ ಪೊಲೀಸರ ಕಾರ್ಯಾಚರಣೆ - ಕಳವು ಆರೋಪಿ ಬಂಧನ : ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ವಶ

ಶಿಕಾರಿಪುರ (shikaripura), ಜೂನ್ 11: ಮನೆಯೊಂದರಲ್ಲಿ ನಗನಾಣ್ಯ ಅಪಹರಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ವಶಕ್ಕೆ ಪಡೆದ ಘಟನೆ ಶಿಕಾರಿಪುರ ಪಟ್ಟಣದಲ್ಲಿ ನಡೆದಿದೆ.

ಶಿಕಾರಿಪುರ ಪಟ್ಟಣದ ಮಾಸೂರು ರಸ್ತೆಯ ಸೊಪ್ಪಿನಕೇರಿ ನಿವಾಸಿ ಅಮಿತ್ (47) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. 28 ಗ್ರಾಂ ತೂಕದ 3,14,400 ರೂ. ಮೌಲ್ಯದ ಚಿನ್ನಾಭರಣ, 134 ಗ್ರಾಂ ತೂಕದ 26,800 ರೂ. ಮೌಲ್ಯದ ಬೆಳ್ಳಿಯ ವಸ್ತುಗಳು, 2 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಶಿಕಾರಿಪುರ ಡಿವೈಎಸ್ಪಿ ಕೇಶವ ಕೆ ಇ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಸಂತೋಷ್ ಎಂ ಪಾಟೀಲ್ ನೇತೃತ್ವದಲ್ಲಿ, ಸಬ್ ಇನ್ಸ್’ಪೆಕ್ಟರ್ ಶರತ್, ಸಿಬ್ಬಂದಿಗಳಾದ ಸಂತೋಷ್ ಕುಮಾರ್, ಶಿವಾಜಿರಾವ್, ಗಿರೀಶ್ ನಾಯ್ಕ್, ಬಸವರಾಜ್, ಕೃಷ್ಣಪ್ಪ, ಆದರ್ಶರವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಪ್ರಕರಣದ ಹಿನ್ನೆಲೆ : ಶಿಕಾರಿಪುರ ಪಟ್ಟಣದ ಅರಸು ನಗರ 2 ನೇ ಕ್ರಾಸ್ ನಿವಾಸಿಯಾದ ಗೌರಮ್ಮ ಎಂಬುವರ ಮನೆಯಲ್ಲಿ ಕಳವು ಕೃತ್ಯ ನಡೆದಿದೆ. ಗಾಡ್ರೇಜ್ ಬೀರುವಿನಲ್ಲಿಟ್ಟಿದ್ದ 28 ಗ್ರಾಂ ತೂಕದ 3,14,400 ರೂ. ಬೆಲೆಯ ಬಂಗಾರದ ಆಭರಣ,

134 ಗ್ರಾಂ ತೂಕದ 26,800 ರೂ ಬೆಳ್ಳಿಯ ವಸ್ತುಗಳ, 02 ಲಕ್ಷ ರೂಪಾಯಿ ನಗದು ಕಳವು ಮಾಡಲಾಗಿತ್ತು. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Shikaripura Town Police Station Operation: Robbery Accused Arrested!

Shikaripura, June 11: The accused who had stolen gold from a house and fled was arrested and gold worth lakhs of rupees was seized in Shikaripura town.

Amit (47), a resident of Soppinakeri on Masur Road in Shikaripura town, has been identified as the arrested accused. Gold ornaments weighing 28 grams and worth Rs. 3,14,400, silver items weighing 134 grams and worth Rs. 2 lakh, and cash in cash have been seized by the police.

Under the supervision of Shikaripura DySP Keshav K E, Inspector Santosh M Patil, Sub Inspector Sharath, staff members Santosh Kumar, Shivajirao, Girish Naik, Basavaraj, Krishnappa, and Adarsh ​​have succeeded in arresting the accused.

Background of the case: A theft took place at the house of Gouramma, a resident of Arasu Nagar 2nd Cross in Shikaripura town. Gold ornaments weighing 28 grams and worth Rs. 3,14,400, silver items weighing 134 grams and Rs. 26,800, and cash worth Rs. 02 lakh were stolen from a Godrej cupboard. A case was registered in this regard at the town police station.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *