shimoga news | ಶಿವಮೊಗ್ಗ ಪಾಲಿಕೆ ಆಯುಕ್ತರೊಂದಿಗೆ ಶಾಸಕ ಡಿ ಎಸ್ ಅರುಣ್ ಚರ್ಚೆ : ನಾಗರಿಕ ಸಮಸ್ಯೆ ಪರಿಹಾರಕ್ಕೆ ಸೂಚನೆ

ಶಿವಮೊಗ್ಗ ಪಾಲಿಕೆ ಆಯುಕ್ತರೊಂದಿಗೆ ಶಾಸಕ ಡಿ ಎಸ್ ಅರುಣ್ ಚರ್ಚೆ : ನಾಗರಿಕ ಸಮಸ್ಯೆ ಪರಿಹಾರಕ್ಕೆ ಸೂಚನೆ

ಶಿವಮೊಗ್ಗ (shivamogga), ಜೂನ್ 12: ಶಿವಮೊಗ್ಗ ನಗರದ ವಿವಿಧ ಬಡಾವಣೆಗಳ ಮೂಲಸೌಕರ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ, ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಅವರು ಜೂನ್ 12 ರಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಕನಕ ನಗರ ಬಡಾವಣೆಯಲ್ಲಿ ಸರಕು ಸಾಗಾಣೆ ವಾಹನಗಳು ಸಂಚರಿಸುತ್ತಿವೆ. ಇದರಿಂದ ನಾಗರಿಕರಿಗೆ ತೀವ್ರ ತೊಂದರೆಯಾಗುತ್ತಿರುವ ಕುರಿತಂತೆ ಸ್ಥಳೀಯ ನಿವಾಸಿಗಳು ಅಹವಾಲು ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ಪಾಲಿಕೆ ಆಡಳಿತ ರಸ್ತೆ ವ್ಯವಸ್ಥೆ ಸುಧಾರಿಸುವುದರ ಜೊತೆಗೆ, ನಾಗರಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ತ್ವರಿತ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಸೋಮಿನಕೊಪ್ಪದ ಟೀಚರ್ಸ್ ಬಡಾವಣೆಯಲ್ಲಿ ಮೂಲಸೌಕರ್ಯಗಳ ಕೊರತೆಯಿದೆ. ಯುಜಿಡಿ, ರಸ್ತೆ, ಪಾರ್ಕ್ ಅಭಿವೃದ್ದಿ ಮತ್ತೀತರ ಸೌಲಭ್ಯ ಕಲ್ಪಿಸುವಂತೆ ಕೋರಿ, ಸ್ಥಳೀಯ ನಿವಾಸಿಗಳು ತಮಗೆ ಅಹವಾಲು ಸಲ್ಲಿಸಿದ್ದಾರೆ. ನಿವಾಸಿಗಳ ಸಮಸ್ಯೆ ಪರಿಹಾರಕ್ಕೆ ಕಾಲಮಿತಿಯೊಳಗೆ ಕ್ರಮಕೈಗೊಳ್ಳುವಂತೆ ಆಯುಕ್ತರಿಗೆ ಶಾಸಕ ಡಿ ಎಸ್ ಅರುಣ್ ತಿಳಿಸಿದ್ದಾರೆ.

ಬಡಾವಣೆಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಎಂಜಿನಿಯರ್ ಗಳ ಜೊತೆ ಚರ್ಚಿಸಿ, ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಆಯುಕ್ತ ಮಾಯಣ್ಣಗೌಡರವರು ತಿಳಿಸಿದ್ದಾರೆ.

MLA DS Arun discusses with Shivamogga Municipal Commissioner: Instructions to resolve citizen problems

Shivamogga, June 12: Regarding the infrastructure problems of various layouts of Shivamogga city, Legislative Council MLA DS Arun held a consultation with Municipal Commissioner Mayanna Gowda on June 12.

Goods vehicles are plying in Kanaka Nagar layout. Local residents have complained that this is causing severe inconvenience to citizens. In this regard, the municipal administration has suggested that along with improving the road system, immediate action should be taken to avoid the inconvenience to citizens.

There is a lack of infrastructure in Teachers Layout in Sominakoppa. Local residents have complained to him, demanding the provision of UGD, road, park development and other facilities. MLA DS Arun told the Commissioner to take action within a time frame to resolve the problems of the residents.

Commissioner Mayanna Gowda said that necessary steps will be taken after discussing with the relevant engineers to provide the necessary infrastructure for the layout.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *