Railway news | ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯ : ಯಾವಾಗ? ಕಾರಣವೇನು?

shimoga railway - train news
ಶಿವಮೊಗ್ಗ (shimoga), ಜೂನ್ 15: ಹೊಳೆನರಸೀಪುರ ಮತ್ತು ಮಾವಿನಕೆರೆ ರೈಲ್ವೆ ನಿಲ್ದಾಣಗಳ ನಡುವಿನ ರಸ್ತೆ ಕೆಳಸೇತುವೆ (

← Back

Thank you for your response. ✨

ಆರ್ ಯು ಬಿ) ಕಾಮಗಾರಿಯ ಹಿನ್ನೆಲೆಯಲ್ಲಿ, ಕೆಳಕಂಡ ರೈಲುಗಳ ಸೇವೆಯನ್ನು ತಾತ್ಕಾಲಿಕವಾಗಿ ರದ್ದು, ಭಾಗಶಃ ರದ್ದು ಮತ್ತು ನಿಯಂತ್ರಣ ಮಾಡಲಾಗುವುದು ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜೂನ್ 18 ಮತ್ತು 23 ರಂದು ಅರಸೀಕೆರೆ–ಮೈಸೂರು ದೈನಂದಿನ ಪ್ಯಾಸೆಂಜರ್ (ರೈಲು ಸಂಖ್ಯೆ 56267), ಮೈಸೂರು–ತಾಳಗುಪ್ಪ ದೈನಂದಿನ ಎಕ್ಸ್’ಪ್ರೆಸ್ (ರೈಲು ಸಂಖ್ಯೆ 16206) ಮತ್ತು ತಾಳಗುಪ್ಪ–ಮೈಸೂರು ದೈನಂದಿನ ಎಕ್ಸ್’ಪ್ರೆಸ್ (ರೈಲು ಸಂಖ್ಯೆ 16205) ರೈಲುಗಳ ಸಂಚಾರವನ್ನು ಎರಡು ದಿನ ರದ್ದುಗೊಳಿಸಲಾಗುವುದು.
ಜೂನ್ 18 ಮತ್ತು 23ರಂದು ಮೈಸೂರು–ಶಿವಮೊಗ್ಗ ಟೌನ್ ದೈನಂದಿನ ಎಕ್ಸ್’ಪ್ರೆಸ್ (ರೈಲು ಸಂಖ್ಯೆ 16225) ರೈಲನ್ನು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಈ ರೈಲು ಮೈಸೂರಿನ ಬದಲಿಗೆ ಅರಸೀಕೆರೆಯಿಂದಲೇ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.
ಜೂನ್ 18 ಮತ್ತು 23ರಂದು ಹೊರಡುವ ಮೈಸೂರು–ಯಶವಂತಪುರ ದೈನಂದಿನ ಎಕ್ಸ್’ಪ್ರೆಸ್ (ರೈಲು ಸಂಖ್ಯೆ 16208) ರೈಲಿನ ಸಂಚಾರವನ್ನು ಮಾರ್ಗಮಧ್ಯೆ ಕ್ರಮವಾಗಿ 30 ನಿಮಿಷ ಮತ್ತು 120 ನಿಮಿಷ ನಿಯಂತ್ರಿಸಲಾಗುವುದು ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
SOUTH WESTERN RAILWAY Press Release No. 112 dt: 15.06.2026
Temporary Cancellation, Partial Cancellation and Regulation of Trains
Due to Road Under Bridge (RUB) work between Hole Narsipur and Mavinkere stations, the following train services will be temporarily cancelled, partially cancelled and regulated as detailed below:
Train No. 56267 Arsikere–Mysuru Daily Passenger, Train No. 16206 Mysuru–Talaguppa Daily Express and Train No. 16205 Talaguppa–Mysuru Daily Express will be cancelled on 18.06.2026 and 23.06.2026.
Train No. 16225 Mysuru–Shivamogga Town Daily Express will be partially cancelled between Mysuru and Arsikere on 18.06.2026 and 23.06.2026. On these dates, the train will originate from Arsikere instead of Mysuru at its scheduled departure time from Arsikere.
Train No. 16208 Mysuru–Yesvantpur Daily Express, journey commencing on 18.06.2026 and 23.06.2026, will be regulated for 30 minutes and 120 minutes en route, respectively.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *